ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕದಡಿದ ನೀರಾ- ರಾಡಿಯಾ ಜ(ಜಾ)ಲವಾ?

-ಸೂತ್ರಧಾರ ರಾಮಯ್ಯ

ನೀವು ಕೇಳ್ತಾ ಇದ್ದೀರಿ, ಎಫ್ ಎಂ ೮೪೦ ಬೈಟೂ, ‘ರಾಡಿಯ ಮಿರ್ಚಿ’ ಸಖತ್ ಫ್ಯಾಟ್ ಮಗ! ಈಗ ನಿಮ್ಮ ಮೆಚ್ಚಿನ ವಿಚಿತ್ರ ಗೀತೆಗಳು. ನಾನು ನಿಮ್ಮ ನೆಚ್ಚಿನ ಆರ್ ಜೆ ಉತ್ತರಾಭಾದ್ರ. ಕಾರ್ಯಕ್ರಮದಲ್ಲಿ ಈ ದಿನ ನಮ್ಮ ಜೊತೆಗಿದ್ದಾರೆ ದೇಭ- ಅರ್ಥಾತ್ ದೇಶ ಭಕ್ತ ಡಾ:ಪುಡಾರಿ ಪುಂಡಲೀಕ. ಪುಂಡಲೀಕ ಅವರು ಜನಪ್ರಿಯ ನಾಯಕರು, ಜಗದೋದ್ಧಾರಕ್ಕಾಗಿ… ಕ್ಷಮಿಸಬೇಕು, ಸಮಾಜೋದ್ಧಾರಕ್ಕಾಗಿ ಅನೇಕ ಯೋಜನೆಗಳಿಗೆ ನಾಂದಿ ಮಂಗಳಗಳನ್ನು ಹಾಡಿದ್ದಾರೆ. ಗರೀಬಿ ಹಟಾವ್ ಎಂಬ ಸ್ಲೋಗನ್ನನ್ನು ‘ಚಾರಿಟಿ ಬೆಗ್ ಇನ್ಸ್ ಅಟ್ ಹೋಮ್’ ಎಂಬಂತೆ ಮೊದಲು ತಮ್ಮ ಮನೆಯಿಂದ ಓಡಿಸಿ, ಹೆಸರೇ ವಾಸಿ ಯಾದವರು-ಆಲೂ ಪ್ರಸಾದ ವೆಂಬಂತೆ.

(ಚಿತ್ರ ಕೃಪೆ :John Elliott)

ರಾಬರಿ ಇವರ ಮಾದರಿ. ಕ್ಯಾಸ್ಟ್ ಯುವರ್ ವೋಟ್ ಎಂಬ ಪದಪುಂಜವನ್ನೇ ಟ್ವಿಸ್ಟ್ ಮಾಡಿ ‘ವೋಟ್ ಯುವರ್ caste ‘ ಎಂಬ ಪರಿಕಲ್ಪನೆಯನ್ನು ಜಾರಿಗೆ ತಂದ ಕೀರ್ತಿ ಪುಂಡಲೀಕ ಅವರದೇ. ತಮ್ಮ ಪಕ್ಷದಲ್ಲಿದ್ದ ಲೀಡರ್ಸ್ ಗಳನ್ನು ರಿಜೆಕ್ಟ್ ಮಾಡಿ, ಆಯಾ (ನೋಟಿನ)ಕಟ್ಟಿನ ಜಾಗಗಳಿಗೆ ನೂರಾರು ಡೀಲರ್ಸ್ ಗಳನ್ನು, ಉದ್ಯಮಿಗಳನ್ನು ಇಂಜೆಕ್ಟ್ ಮಾಡಿದವರು. ನೀವು ಕೇಳ್ತಾ ಇದ್ದೀರಿ ಎಫ್ ಎಂ ೮೪೦ ಬೈಟೂ ‘ರಾಡಿಯಾ ಮಿರ್ಚಿ’ ಸಖತ್ ಫ್ಯಾಟ್ ಮಗ! ಮೊದಲಿಗೆ ಬೇಡರ ಕಣ್ಣಪ್ಪ….ಕ್ಷಮಿಸಬೇಕು, ಬ್ಯಾಡ್ರಾ ಕಣಪ್ಪ ನಿಮ್ಮ ಸಾವಾಸ! ಚಿತ್ರದ ಆಡನ್ನ ಕುರಿ ತು ಕೇಳಬಯಸಿದ್ದಾರೆ ಧಾರವಾಡದ ಮಹಿಷಪ್ಪ, ಮಹಿಷೂರಿನ ಎಂ.ಎ.ತಮ್ಮಣ್ಣ, ಬಿಜಾಪುರದ ಹಂಚಿನಮನಿ, ಕಟ್ಟಿಮನಿ, ಕೆಡವಿಮನಿ, ಬಳ್ಳಾರಿಯ ಬಹು-ಮನಿ ಮುಂತಾದವರು. ಗೀತೆಯನ್ನು ಹಾಡಿದ್ದಾರೆ ಮೆಲುಕಣ್ಣ. ಧನತಂತ್ರದ ಲಂಚದಾ ನೆಲೆ ಬಲೆ ಸರಕಾರವೋ ದನ ತಂತ್ರಕೆ ಮೇವನು ಒಡ್ಡುವಾ ಜಾಲವೋ… ( ಧನತಂತ್ರದಾ..) ಆಯುಕ್ತರಾ ಬಲೆಗೆ ಸಿಗದೇ ನುಣುಚುವೇ ಅಧಿಕಾರಕೇರಿ ಮತ್ತನೇರಿ ನೀನಲೆಯುವೆ..ಮನುಷ್ಯತ್ವವಾ ಮರೆಯುವೇ.(ಜನತಂತ್ರದ) ನೀವು ಕೇಳ್ತಾ ಇದ್ದೀರಿ ರಾಡಿಯೂ ಮಿರ್ಚಿ ಸಖತ್ ಫ್ಯಾಟ್ ಮಗ. ಉ.ಭಾ: ಪುಂಡಲೀಕ ಅವರೆ ಹ್ಯಾಗಿತ್ತು ಕಾರ್ಯಕ್ರಮದ ಮೊದಲ ಗೀತೆ? ಪು.ಪುನ್: ಭಾಳ್ ಚಲೋ ಇತ್ತು ಬಿಡ್ರಿ, ಅಗದೀ ಇಂಟರೆಸ್ಟ್ ಸ್ಟಿಂಗ್! ಉ.ಭಾ: ಅಲ್ಲಾ, ನಿಮಗೆ ಏನಾದ್ರೂ, ಎಲ್ಲಾದ್ರೂ ಪ್ರಿಕ್ ಆಯ್ತೆ ಅಂತಾ? ಪು.ಪುನ್: ನಿಮಗೆಲ್ಲೋ ಕನಸು! ನೋಡ್ರಿ ನಾವು ಬರ್ತಾ ಬರ್ತಾ ಇಂಥ ಸುಕ್ಷ್ಮಗಳ್ನೆಲ್ಲಾ ಮನಸ್ಸಿಗೇ ಹಚ್ಹ್ಕೊಳಲ್ಲಾ. ಪಾಲಿಟಿಕ್ಸ್ ನಲ್ಲಿರೋ ನಮ್ಮ ಕಿತ್ ಅಂಡ್ ಕಿನ್ಸ್ಗಳೆಲ್ಲಾ ಅಷ್ಟೇ- ತಿಕ್ ಅಂಡ್ ಸ್ಕಿನ್ಸ್, ದಪ್ಪ ಚರ್ಮದವರು. ಚುಚ್ಚಿದರಾ ನಿನ್ಸೂಜೀನಾ ಮುರಿದು ಹೋಗ್ತದ ಅಷ್ಟೇ. ತಿಳಕೋರಿ. ಉ.ಭಾ: ಮೊನ್ನೆ ತಾನೇ ಪಂಚಾಯ್ತಿ ಎಲೆಕ್ಷನ್ ಡಿಕ್ಲೇರ್ ಆಗಿ ನೀತಿ ಸಂಹಿತೆಯೂ ಜಾರಿ ಆಯ್ತು. ಈ ಸಂದರ್ಭದಲ್ಲಿ ನಿಮ್ಮ ಮೂಡ್ ಏನು? ಪು.ಪುನ್: ನಮ್ಮ ಮೂಡಾ,ಎಂದೂ ಪೀಚೆ ಮೂಡ್ ಆಗಾಣಿಲ್ ಬಿಡ್ರಿ. ಎಲ್ಲಾ ಟೀಕೆಗಳ್ಗು ಸೀಸನ್ಡ್ ಆಗಿ ಬಿಟ್ಟೀವಿ. ಅದೆಂತಾ ನೀತಿ ಸಂಹಿತಾ ಜಾರಿ ಅದ್ರೂ, ಜಾರಿ ಕೊಳ್ಳೋದು ನಮಗ್ಗೊತ್ರಿ ..ಮುಂದಿನ ಗೀತೆ ನಾನೇ ರಚಿಸಿ, ಸಂಗೀತ ಮಾಡಿರೋ ಹಾಡನ್ನ ಹಾಕ್ರಲ್ಲಾ. ಉ.ಭಾ: ನೀವು ಕೇಳ್ತಿದ್ದೀರಿ ಎಫ್ ಎಂ ೮೪೦ ಬಾಯಿ ಟೂ, ‘ರಾಡಿಯಾ ಮಿರ್ಚಿ’ ಸಖತ್ ಫ್ಯಾಟ್ ಮಗ! ಮುಂದಿನ ಗೀತೆ ‘ ಹೆಂಡದ ಹೊಳೆಯು- ವೋಟಿನ ಮಳೆಯು’ ಚಿತ್ರದ್ದು, ಕೇಳಬೇಕಂತೆ ವಿಮಾನಪುರದ ಆಕಾಶ್, ದಿಗಂತ್, ವ್ಯೋಮಕೇಶ್,ಭುವನಗಿರಿಯ ಪರ್ವತ್, ಸಾಗರ್, ಪವನ್, ಪಡುವಾರಳ್ಳಿ ಪಾಂಡವರು, ಕಿರುಗೂರಿನ ಗೈಯ್ಯಾಳಿಗಳು, ಮತ್ತು ಅದೇ ಊರಿನ ಪಟೇಲ್ ಪರಮೇಶಿಯವರ ಕಿರಿಯ ಪತ್ನಿ ಸಾಕಮ್ಮ. ಕೇಳಿ, ಏನನ್ನಿಸುತ್ತೆ ಹೇಳಿ. ನೆನಪಾಯ್ತು ನನಗೆ ಇಂದು, ನೀವೆಲ್ಲ ನಮ್ಮವರೆಂದು! ಓಹೋ ಎಂಥ ಮತದಾ ಕಲ್ಪನೆ. ಒತ್ತಿ ನನಗೆ ಓಟ ಮತ್ತೊಮ್ಮೆ, ಹಾಗೇ ಸುಮ್ಮನೇ…ನೆನಪಾಯ್ತು ಅಮ್ಮಾ ಅಕ್ಕರೆ, ಕೇಳಿರಿ ಅಣ್ಣಾ ತಮ್ಮರೆ: ಗಾಂಧೀ ಕನಸಿನ d-rama ರಾಜ್ಯವಾ ಸ್ಥಾಪಿಸಿ ಬಿಡುವೆವು ಗೆದ್ದ ಕ್ಷಣ ಇದೇ ನಮ್ಮ ‘ಮಾಮೂಲ್ ‘ ಮಂತ್ರವು ಐದು ವರ್ಷಕೊಮ್ಮೆ ಕೈ ಮುಗಿದು ಮತ್ತೆ ಬರುವೆವೂ..woo ಉ.ಭಾ: ಓಹ್ ಎಷ್ಟು ಅರ್ಥ ಗರ್ಭಿತಾ! ನಿಮ್ಮ ಮೆಚ್ಚಿನ ಗೀ ತೆಗಳು ಮುಂದಿನ ಕಂತಿನಲ್ಲಿ. ನಿರೀಕ್ಷಿಸಿ..ನಿಮ್ಮ ಉತ್ತರಾ ಭಾದ್ರ -ಸೂ.ರಾ ]]>

‍ಲೇಖಕರು G

13 December, 2010

2 Comments

  1. B. T. Jahnavi

    ರಾಡಿಯೋ ಮಿರ್ಚಿ ಸಖತ್ ಮಸ್ತ್ ಮಗಾ…..!

  2. Suthradhara Ramaiah

    Very Creative…… Superb

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading