ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕತ್ತಲೆಯಂತೆ ಬೆತ್ತಲೆ ನಾನು…

ಬಾಗಿಲು…..!

-ರವಿ ಮೂರ್ನಾಡು, ಕ್ಯಾಮರೂನ್

ಇದು ಕೆಲವು ದಿನಗಳ ಹಿಂದೆ  ‘ಅವಧಿ’ಯಲ್ಲಿ ಪ್ರಕಟವಾಗಿದ್ದ  ಎಂ. ಎಸ್. ಮೂರ್ತಿ ಅವರ ರೇಖಾ ಚಿತ್ರಕ್ಕೆ ಬರೆದ ಕವಿತೆ.

 

ಆ ಬಾಗಿಲೊಳಗೆ

ಯಾರೋ ಕಟ್ಟಿದರು

ಅರಿಯದ ಜಗತ್ತು

ಹೊರಗೆ ಮತ್ತೊಂದು !

 

ಹೊರ ಬರುವ ಧಾವಂತಕೆ ನಾನು

ಒದ್ದಾಟಕೆ ಕದ ತೆರೆದ ಅವ್ವ

ಅಳುತ್ತಿದ್ದೆವು ಆ ಶುಭದಿನ !

ಕರುಳ ಬಳ್ಳಿಗೆ ಕತ್ತರಿ ಸಿಕ್ಕಿಸಿ

ಸ್ವಾಗತವೆಂದು ನಕ್ಕರು ಜನ !

 

ಬೆಳಕು ಬೊಗಸೆ ಬಿಚ್ಚಿದಾಗ

ತೆರದಿದ್ದೇನೆ ಹಣತೆ ಕಣ್ಣು

ಓಡಿಸುತ್ತಾ ಕತ್ತಲು !

ನನಗಿಟ್ಟ ಹೆಸರಿನ ಚೌಕಟ್ಟಿನೊಳಗೆ

ಉರುಳಿದಂತೆ ನನ್ನ ಜಗತ್ತು !

 

ಮೊಲೆ ಹಾಲು ಕಲಿಸಿದ ಹಸಿವಿಗೆ

ನಡೆದು ಎಡವಿ ಓಡಿದ್ದೇನೆ ಬೆವತು

ಬಾಯಾರಿ ಕುಡಿದು ನೀರು

ಚಳಿಯೆಂದು ಬಡಬಡಿಸಿ

ಬಿಸಿಯೇರಿ ತಂಗಾಳಿಗೆ ತೆರೆದು !

 

ಕತ್ತಲೆಯಂತೆ ಬೆತ್ತಲೆ ನಾನು

ಜ್ಞಾನದ ಬೆಳಕಿನ ಭಿಕಾರಿ

ಹೂವಾಗಿ ಮೋಹಕೆ ಅರಳಿ

ಬಿದ್ದ ಬೀಜಕೆ ಬೇರಾಗಿ-

ಕಟ್ಟಿದ್ದೇನೆ ಮನೆ-ಸಂಸಾರ-ಅಧಿಕಾರ

ಸುಕ್ಕು ಕಾಲುವೆಗೆ ಅನುಭವಗಳ ಸುರಿದು !

 

ಈ ಬಾಗಿಲ ಹೊರಗೆ

ನಾನೇ ಕಟ್ಟಿದ ಜಗತ್ತು

ಒಳಗೆ ಗೊತ್ತಿಲ್ಲದ ಮತ್ತೊಂದು !

 

ಈಗ ದಣಿದಿದ್ದೇನೆ…

 

ಹೋಗಲಾರದ ನೋವಿಗೆ ನಾನು

ಹೆಣಭಾರಕೆ ಗರ್ಭ ತೆರೆದ ಮಣ್ಣು

ಮೌನವಾದೆವು ಆ ದುಃಖ್ಖ ದಿನ !

ಮೂರಡಿ ಮಣ್ಣಿಗೆ ಹೂಗಳ ಚೆಲ್ಲಿ

ಶ್ರಾದ್ದವೆಂದು ಕೈತೊಳೆದರು ಜನ !

 

   ]]>

‍ಲೇಖಕರು G

30 August, 2012

5 Comments

  1. paresh Saraf

    ಒಂದು ಕವಿತೆಯಲ್ಲಿ ಒಬ್ಬ ಮನುಜನ ಜೀವನದ ವರ್ಣನೆ.. ಅಸಾಮಾನ್ಯ ಕವಿತೆ.. ತಲೆ ಬಾಗುವೆ ರವಿಯಣ್ಣ 🙂

  2. Mohan V Kollegal

    ಹಂತ ಹಂತವಾಗಿ ಪಕ್ವಗೊಂಡು ಬೆಳೆದ ಪ್ರತಿಮೆ… ಒಳ್ಳೆಯ ಕವಿತೆ ರವಿಯಣ್ಣ… 🙂

  3. Badarinath Palavalli

    ಒಂದು ಜೀವ ಮಾನದ ವೃತ್ತಂತವನ್ನು ಸವಿಸ್ತಾರವಾಗಿ ಕಟ್ಟಿಕೊಟ್ಟಿದ್ದೀರ.
    ಬಾಗಿಲಿನ ಹಿಂದೆ ಇದ್ದ ಭದ್ರತೆ ನಮಗೆ ಬಾಗಿಲಿನ ಹೊರಗೆ ಇರಲಾರದು. ಹೊರಗೆ ಬರೀ ಗುದ್ದಾಟ ಜಗ್ಗಾಟ ಕಾಲು ಎಳೆದಾಟ.
    ನಾನು ಪದೇ ಪದೇ ಓದಿಕೊಳ್ಳಲು ಈ ಕವನವನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತೇನೆ.

  4. D.RAVI VARMA

    ಹೋಗಲಾರದ ನೋವಿಗೆ ನಾನು
    ಹೆಣಭಾರಕೆ ಗರ್ಭ ತೆರೆದ ಮಣ್ಣು
    ಮೌನವಾದೆವು ಆ ದುಃಖ್ಖ ದಿನ !
    ಮೂರಡಿ ಮಣ್ಣಿಗೆ ಹೂಗಳ ಚೆಲ್ಲಿ
    ಶ್ರಾದ್ದವೆಂದು ಕೈತೊಳೆದರು ಜನ !
    heart touching….

  5. shanthi k.a.

    ಸರ್,
    ನಿಮ್ಮ ಕವಿತ್ವ ಶಕ್ತಿಗೆ ತಲೆಬಾಗಿ ವಂದಿಸುವೆ.
    ಎಷ್ಟು ಸರಳ…ಎಷ್ಟೊಂದು ಅರ್ಥಪೂರ್ಣ !!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading