ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕತ್ತಲಲಿ ಕಾದು ಹೈರಾಣಾದ ಕಪ್ಪಂಚಿನ ದಿಗಂತ ತಾರೆ..

ಬೆಳ್ಮುಗಿಲು

ಬಿದಲೋಟಿ ರಂಗನಾಥ್

ರಣಗತ್ತಲ ತುಂಬೆಲ್ಲ
ಬೆಳ್ಮುಗಿಲ ಛಾಯೆ
ಇದ್ಯಾತರ ಅಂಗೈಮಾಯೆ
ಕತ್ತಲಲಿ ಕಾದು ಹೈರಾಣಾದ
ಕಪ್ಪಂಚಿನ ದಿಗಂತ ತಾರೆ

ಗಿಡ ಬಳ್ಳಿಯ ನಡುವು ಬಳುಕಾಡಿ
ಗಾಳಿಯ ಮಧುರ ಮಾಧುರ್ಯ
ಚುಂಬನಕೆ ಮನಸೋತು
ಅಂತರ್ಗಾಮಿ ಭೋರ್ಗರೆದ ದರ್ಪಕೆ
ಬೆಟ್ಟಗುಡ್ಡಗಳ ಚೆಲುವು ಬಾಯ್ಬಿಟ್ಟವು
ಅಂಗಾತ ಮಲಗಿ.
 
ಕಲ್ಲು ಸೀಳಿ ಎರಡಾಗಿ
ಬಾನಿಗೆ ಮರುಕ ಉಂಟಾಗಿ
ಬೆಳದಿಂಗಳು ನಕ್ಕಿತು
ನಾಡಿಗೆಲ್ಲ ಬೆಳಕು ಬಾಗಿ…
 
ಅಬ್ಬಾ! ಇದೆಂಥಾ ಚೆಲುವು
ಮೈ ಮನವೆಲ್ಲ ಬೆಳ್ಮುಗಿಲು
ನಯನಗಳೆಲ್ಲ ಶ್ವೇತ ಕಣಜವೂ
ತಂಪಾದ ಹೃದಯ ಭಾಗದ
ಭೂ ಮಂಡಲವು.
 

‍ಲೇಖಕರು G

4 July, 2015

3 Comments

  1. noorullathyamagondlu

    ಕೊನೆಯ ಸ್ಟಾಂಜ ತುಂಬ ಚೆನ್ನಾಗಿದೆ. ಬೆಳ್ಮುಗಿಲ ಅಭಿವ್ಯಕ್ತಿ ಸುಂದರವಾಗಿದೆ.

  2. mmshaik

    nice..

  3. Rohini Satya

    “Beladingalu nakkitu naadigellaa belaku naagi” abhivyakti sundaravaagide.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading