ಆ ಕ್ಷಣಗಳಿಗೆ ಮಾತನಾಡಿಸಲಾಗಲಿಲ್ಲ, ಮುನಿದುಹೋದವು ಸಾಕಿ
ಇಡೀ ಆಯುಷ್ಯದ ನಿರೀಕ್ಷೆಗಳೇ, ಮುನಿದುಹೋದವು ಸಾಕಿ.
ಉರಿಯುವ ಇಡೀ ರಾತ್ರಿಯ ಗಳಿಗೆಗೆ ಒಂದೊಂದು ಮುತ್ತು ಕಟ್ಟುವ ಅಸೆ
ಆದರೆ ಮಾರುಕಟ್ಟೆಯಲ್ಲಿ ಮುತ್ತುಗಳೇ ,ಮುಗಿದುಹೋದವು ಸಾಕಿ .
ಕಣ್ಣು ಮುಚ್ಚಲು ಹೆದರುತ್ತಿವೆ, ನನ್ನ ಪ್ರತಿ ರಾತ್ರಿಗಳು
ಹೀಗೆಯೇ ಪೂರ್ತಿಯಾಗದೆ ಕನಸುಗಳೇ ಉಳಿದುಹೋದವು ಸಾಕಿ.
ಋತುಗಳು ಬಂದವು ಕಳೆದು ಹೋದವು ನಿಯಮದಂತೆ
ವರ್ಷಗಳ ಬರಿಗೈಯಲ್ಲಿ ಬಯಕೆಗಳೇ ಸವೆದು ಹೋದವು ಸಾಕಿ
ಯಾರನ್ನು ದೂರದ ಈ ಸ್ಥಿತಿಗೆ ಮರುಗದಿರು ಪ್ರಿಯ
ಕೊಂಡು ಕೊಂಡ ಅವಸ್ಥೆಗೆ ಕಾರಣಗಳೇ ಮುರಿದು ಹೋದವು ಸಾಕಿ.
]]>
ನಾನು ಸುರಪುರದ ಕನ್ನಡ ಸಾಹಿತ್ಯ ಸಂಘದ ಉಪಾಧ್ಯಕ್ಷ. ನಾನು ಅವಧಿಯ ಚಂದಾದಾರ ಆಗಿದ್ದೇನಿಯೆ? ಅವಧಿಯ ಚಂದಾ ಹಣ ಏಷ್ಟು. ನಮ್ಮ ಸಂಘಚಂದಾದಾರ ಆಗಬಹುದೆ.
ನಮ್ಮ ಸಂಘದ ಕಡೆಯಿಂದ ನಾವು ಏನಾದರುಅವಧಿಗೆ ಕೂಡಬಹುದೆ.?
ಜೇ ಅಗಸ್ಟಿನ್ ಎಡ್ವಕೇಟ
nice one 🙂
thanks
ನಾನು ಸುರಪುರದ ಕನ್ನಡ ಸಾಹಿತ್ಯ ಸಂಘದ ಉಪಾಧ್ಯಕ್ಷ. ನಾನು ಅವಧಿಯ ಚಂದಾದಾರ ಆಗಿದ್ದೇನಿಯೆ? ಅವಧಿಯ ಚಂದಾ ಹಣ ಏಷ್ಟು. ನಮ್ಮ ಸಂಘಚಂದಾದಾರ ಆಗಬಹುದೆ.
ನಮ್ಮ ಸಂಘದ ಕಡೆಯಿಂದ ನಾವು ಏನಾದರುಅವಧಿಗೆ ಕೂಡಬಹುದೆ.?
ಜೇ ಅಗಸ್ಟಿನ್ ಎಡ್ವಕೇಟ
nice