ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಣ್ಣು ತಪ್ಪಿಸಿ ಗಂಗೆಯ ಸೇರುವವ ತಾನೇ ನೀನು?

ರಾಜಾರೋಷ 
ನಂದಿನಿ ಹೆದ್ದುರ್ಗ

ಮೂರನೇ ಕಣ್ಣು ಮುಚ್ಚಿ ಸುಮ್ಮನೇ
ಮಲಗು
ಭಗವಂತನೇ,
ನಿನಗೇನು ಗೊತ್ತು
ರಾಜಾರೋಷ ಪ್ರೇಮದ ಕುರಿತು?
ಜಡೆಯಲ್ಲಿ ಅಡಗಿಸಿ
ಗೌರಿಯ ಕಣ್ಣು ತಪ್ಪಿಸಿ
ಗಂಗೆಯ ತೆಕ್ಕೆ ಸೇರುವವ ತಾನೇ ನೀನು?
ನಾನಾದರೋ
ಜೋಡಿ ಹೆಜ್ಜೆಗುರುತಗಳ ಬೇಜಾನು
ಬಿಟ್ಟು ಬಂದಿರುವೆ ರೇವೆಯಲ್ಲಿ.
ಜಗದೆದಿರು
ತೆರೆದುಕೊಳ್ಳುವುದರ ಖುಷಿಯ
ಪಾಠವ
ಓದಿಕೋ ಹೋಗಿ
ಬೇಕಾದರೆ
ಅದೋ ಆ ತೀರದಲ್ಲಿ.

‍ಲೇಖಕರು avadhi

14 December, 2019

1 Comment

  1. premalatha B

    Very nice Nandini. I like reading your poems. Keep writing ✍️

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading