ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಣ್ಣೀರು ಸುರಿಸಲು ತುಸು ಜಾಗವಿಲ್ಲ..

 

ಅನಾವರಣಗೊಳ್ಳದ ಕವಿತೆಯಂತೆ

ಅಶೋಕ.ಬಿ

ಉಸಿರು ಬಿಟ್ಟು ಹೋಗುವ ಮುನ್ನ
ಮೊಳೆತಿದ್ದಳು
ಕರಕಲು ಚಿಗುರು ನಾಚುವಂತೆ

ಕನಸು ಸುರಿವ ಈ ಹಾಳು ಸಂತೆ ಗೊಣಗು
ಒಣ ರೊಟ್ಟಿಯ ಈ ಹಾಳು ತನು
ಹೂನಗೆಯ ಹೆಂಚು
ನಿರಾಳ

ಹರಿದು ಹಂಚಿ ಹೋದ ಅಂಗಳ ಕಿತ್ತು
ಕುಪ್ಪಸದೊಳಿಟ್ಟು
ಮೆಲ್ಲನೆ ಹಾಲುಗಲ್ಲವ ಎದೆಗವಚಿಕೊಂಡು
ಚಂದ್ರನ ಚಂದನವನವನ್ನು ದಿಟ್ಟಿಸುತ್ತಾಳೆ
ಎದೆಗಿರಿವ ತಿರಿಚೋ ನಾಲಿಗೆ ಕಟ್ಟಿಹಾಕುವ ಹಪಾಹಪಿ

ಮೊಳ ಹೂವಿಗೆ ಅಲೆದಾಡುತ್ತಾನೆ
ತಿರಸ್ಕಾರದ ಈ ಸರಿ ಹೊತ್ತಿನಲಿ
ಕಣ್ಣೀರು ಸುರಿಸಲು ತುಸು ಜಾಗವಿಲ್ಲ
ನನ್ನಿನಿಯಗೆ

ಮಾಸಿದ ಬಟ್ಟೆ ಬರೆ,ಪತ್ರಗಳ ಭಾವ ಬೆಚ್ಚಗೆ
ಉಸಿರಾಡುತ್ತಿವೆ
ಜನ ಜಾತ್ರೆ ಸತ್ತಂತಿವೆ

ನನ್ನಾತ್ಮವ ತುಳಿದದ್ದು ಜೊತೆಗಾರನೇ
ಇರುವಿಕೆ ಅಲ್ಲಗಳೆದಾಗಲೂ
ಅನಾವರಣಗೊಳ್ಳದ ಕವಿತೆಯಂತೆ
ಈ ನೆಲದಲಿ ಉಸಿರು ಬಿಟ್ಟೆ

‍ಲೇಖಕರು Avadhi Admin

18 March, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading