– ಶ್ರೀನಿವಾಸ ಎಂ

1
ಕನವರಿಕೆಯ ಸುಖ…
ನಿನ್ನ ನೆನಪುಗಳಿಗಿಲ್ಲಿ ಯಾವುದೇ ಹಂಗಿಲ್ಲ
ಮೊಗೆದಷ್ಟು ಜಾಸ್ತಿ ಕಣ್ಣೀರು
ಬತ್ತಿ ಹೋದರೆ ನಿರಾಳವಾಗಬಹುದೆಂಬ ಭ್ರಮೆ!
2
ಪ್ರತಿ ಋತುವಿಗೂ ನೀನೇ ರೂಪಕ
ಕಿಟಕಿಯಂಚಿನಿಂದ ಕಾಯುತ್ತೇನೆ
ಕವಿ ಕಲ್ಪನೆಯ ವಸಂತ-ಗ್ರೀಷ್ಮಗಳ ಅಪ್ಪುಗೆಗೆ…
ಕಾದು ಬಸವಳಿದ ಕಣ್ಣುಗಳಲ್ಲಿ ಮರಳುಗಾಡಿನ ಛಾಯೆ
3
ಪ್ರತಿ ಇರುಳು ನಿನ್ನ ಹೆಸರಿಟ್ಟ ನಕ್ಷತ್ರಗಳ ಹುಡುಕಾಟ
ತಪ್ಪುತ್ತಿದೆ ಬೆರಳ ಎಣಿಕೆಗಳು,
ಎಡವುತ್ತದೆ ನೆನಪ ಲೆಕ್ಕಾಚಾರ,
ಬೆಳದಿಂಗಳು ಶಾಪಗ್ರಸ್ತ ಕಿನ್ನರಿ!
4
ಮತ್ತದೇ ಹಗಲು-ಇರುಳು…
ನೀನಿಲ್ಲದ ಬದುಕ ಕಟ್ಟಿಕೊಳ್ಳುವ ಹಂಬಲ
ನೆನಪುಗಳ ಕೊಲ್ಲುವ ಹಪಾಹಪಿತನ
ಮತ್ತದೇ ಕಣ್ಣೀರು..ದೃಷ್ಟಿ ಮಂದವಾಗುತ್ತದೆ





Good one, I liked.
super boss
neev heege innu jasti jasti barita irabekri
tumbaane chennaagive..sir