ವಾಸುದೇವ ನಾಡಿಗ್
ಸಖೀ
ನೆಲಕೆ ಕಗ್ಗೊಲೆಗಳಾಗುವ
ಈ ನೆಲದಲಿ
ಎಲ್ಲಿ ಕಾಪಿಡಲಿ ತಿಳಿಸು
ನವಿರು ಭಾವವ..
ರಕ್ತ ದಾಹಕೆ
ಸುಖಾಸುಮ್ಮನೆ ಎಳೆತರುವ
ಮಂದಿಯ ಮಧ್ಯೆ ನೀನು ಅಮೃತ.
ಹಂಚಿಕೊಳ್ಳಲು ಎಷ್ಟೊಂದು
ಬಗೆಗಳಿವೆ ಹೃದಯದಲಿ
ಜೂಜಾಡುವ ಜನ
ಪ್ರೀತಿಯನ್ನೂ ಪಣಕಿಟ್ಟಿದ್ದಾರೆ!

ಅದೇಕೊ ಕಾಣೆ ಸಂಜೆ
ಮೊನ್ನೆ ಮಥುರೆಯದಾರಿಯಲ್ಲಿ
ಗೂಡುಸೇರುವ ಹಕ್ಕಿಗಳ ಮಾತಿನಲ್ಲಿ
ನೀನಿದ್ದೆ..
ದ್ವಾರಕೆಯಿಂದ ದೊರಕದ ನನ್ನ
ಸುದ್ದಿಗೆ ನೀ ಕೊರಗಿದ್ದಿಯಂತೆ?
ಲಲಿತೆಯರ ಮಧ್ಯೆ ಕರಗಿಹೋಗಿಲ್ಲ
ಸಖಿ,
ನಾನು ಹುಡುಕುತಿರುವುದು
ಅವರಲ್ಲ
ನೀನೆಂಬ ಹೆಸರೂ ಅವರಿಗಿಲ್ಲ
ಕಣ್ಣರೆಪ್ಪೆನೆರಳಲ್ಲಿ ಕಾಪಿಡುವೆ ನೀನು
ಅವರ ಕಾಡಿಗೆಗಣ್ಣ ನಡುವೆ ನಾನು
ಕಾಡುಪಾಲಾಗಲಾರೆ..






chendada kavite-smitha
ಅದ್ಬುತ ಭಾವ ಪದ ಯಾನ…..ಮನಸಿಗೆ ಹಿಡಿಸಿತು..
avara kaadigeganna naduve na kaadupalagalare…….very nice poem
Nice one
-Anil
oLLeya kavite..