ಗಜಲ್
ಪ್ರಕಾಶ ಬಿ.
ನಿನಗಾಗಿ ಹುಟ್ಟಿದ ಪ್ರೀತಿಯನು ಹೇಗೆ ಬಿಡಲಿ ಸಾಕಿ
ಕಣ್ಣತುಂಬುವ ನಿನ್ನದೇ ಕನಸನು ಹೇಗೆ ಚೆಲ್ಲಲಿ ಸಾಕಿ
ಒಮ್ಮೊಮ್ಮೆ ಪ್ರೀತಿಗೂ ಗ್ರಹಣ ಹಿಡಿಯ ಬಹುದೇನೊ ಗೊತ್ತಿಲ್ಲ
ನಮಗಾಗಿ ಕತ್ತಲಾದ ಗಳಿಗೆಯನು ಹೇಗೆ ದೂಡಲಿ ಸಾಕಿ
ನಿನ್ನ ನೆನಪ ಬತ್ತಿ ಹೊತ್ತಿ ಒಂದೇ ಸಮನೆ ಸುಡುತಿದೆ
ನೀನಿಲ್ಲದೆ ಜಗವನು ಕಣ್ಣು ಬಿಟ್ಟು ಹೇಗೆ ನೋಡಲಿ ಸಾಕಿ
ಕಣ್ಣ ಚಿಪ್ಪಲಿ ಈಗ ನಿನ್ನ ಕನಸ ಮುತ್ತಗಳದ್ದೇ ರಾಶಿ ರಾಶಿ
ನೀನೆ ಇಲ್ಲದಎದೆ ಬಡಿತವ ಹೇಗೆ ಬಡಿಯಲಿ ಸಾಕಿ
ನನ್ನೊಳಗೆ ನೀ ಇರುವತನಕ ಲೋಕ ನಕ್ಕರೂ ದು:ಖ ಇಲ್ಲ
ನೀನೆ ಬಂದು `ಪ್ರಕಾಶ’ವಾಗಿ ನಗುತನಕ ಹೇಗೆ ಇರಲಿ ಸಾಕಿ







nice..
ಧನ್ಯವಾದಗಳು..
chennagide