ಕಣ್ಕಪ್ಪು
ವಿದ್ಯಾರಶ್ಮಿ ಪೆಲತ್ತಡ್ಕ
ಕನ್ನಡಿಯೆದುರು ನಿಂತಾಗಲೇ ಬರಬೇಕೇ ಆ ಅಳು
ದಳದಳನೆ ಸುರಿದ ನೀರು ಕಪ್ಪಗಿತ್ತು
ಕಣ್ಕಪ್ಪು ಕರಗಿದ್ದು ಗೊತ್ತಾಯಿತು.
ಓಹ್, ಮತ್ತೆ ಮೇಕಪ್ ಮಾಡಬೇಕಾ..
ಹಾಳು ಅಳುವಿಗೆ ಹಿಡಿಶಾಪವಿಕ್ಕಿದೆ
ಅಂದಿನಿಂದ ಎಚ್ಚರವಹಿಸಿದೆ
ಬರೆದಿಟ್ಟೆ ಸಂವಿಧಾನ,
ಕಣ್ಕಪ್ಪು ಹಚ್ಚಿದಾಗ ಅಳಬಾರದು
ಹೀಗಂದರೂ ಸರಿಯೇ,
ಅಳು ಬರುವಂತಾದಾಗಲೊಮ್ಮೆ ಕಣ್ಕಪ್ಪು ಹಚ್ಚಿಬಿಡಬೇಕು
ನಿತ್ಯವೂ ಹಚ್ಚಿದ್ದೇ ಹಚ್ಚಿದ್ದೂ
ಕ್ಷಣವೂ ಕಪ್ಪು ತೊಲಗಿಲ್ಲ ರೆಪ್ಪೆಯಂಚಿಂದ
ಹನಿ ಜಾರಿಲ್ಲ ಕೆಳಗೆ…
ಎಷ್ಟು ಗಟ್ಟಿ ಮನಸ್ಸಿನ ಹೆಣ್ಣು!
ಸಿಕ್ಕ ಪಟ್ಟದಲ್ಲಿ ಮನ ವಿರಾಜಮಾನ
ಈಗೀಗ ಪುಟ್ಟ ಮಗಳಿಗೂ ಕಾಡಿಗೆಯ ಹುಚ್ಚು
ಅವಳಿಗೂ ಅಳು ಬರುವಂತಾದಾಗ
ಹಚ್ಚಿಬಿಡುತ್ತೇನೆ ಕಾಡಿಗೆ
ಮತ್ತೆ ಬಿಕ್ಕು ಬಂದಾಗ ನೆನಪಿಸುತ್ತೇನೆ,
ಮೇಕಪ್ಪು ಹೋಗುತ್ತದೆಯಲ್ಲೇ, ಅಳಬೇಡ…





ಅಂದದ ಕವಿತೆ ವಿದ್ಯಾರವರೇ……ಇಷ್ಟವಾಯಿತು
nice..
Tumba chennagide kavithe. Vidya
Tumba chennagide kavithe. Vidya
thanks all
-vidyarashmi
ವಿದ್ಯಾ ..ಚೆನ್ನಾಗಿದೆ..ಕಣ್ಕಪ್ಪು ಹಚ್ಚುವವಲಿಗೆ ಕವಿಥೆ ನೆನಪಾಗುತ್ತದೆ..
ತುಂಬಾ ಚನ್ನಾಗಿದೆ Madam….
ರಶ್ಮಿ ಎಷ್ಟು ಚೆಂದ ಬರ್ದಿದ್ದಿ …
ಸೂಪರ್ ವಿದ್ಯಾ ಮಗಳಿಗೆ (ಹೃಳಿದಂತಿದೆ) ಹೇಳಿದಂತೆ ಇದೆ
ತುಂಬಾ ಸೊಗಸಾದ ಕವಿತೆ,
ಛೊಲೋ ಬರ್ದೀರಿ ಮೇಡಂ.
chennagi moodi bandide
narayan raichur
Neenu clssige kankappu hachibarutiddadu nenapayitu.