ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಂಪನ

ಸಹನಾ ಹೆಗಡೆ  
ಕಂಪಿಸಿತೇ ಭೂಮಿ
ಇಲ್ಲ ಬರಿ ಭ್ರಮೆಯೇ
ಅಲುಗಿದ್ದು ನೆಲವೇ
ಇಲ್ಲ ನಾನೇ
ಮತ್ತೆ, ಮನೆ ಗೋಡೆ ಬಾಗಿಲು
ಕಿಟಕಿ ಚೌಕಟ್ಟು?
ಪಾತ್ರೆ ಪಗಡೆಗಳ ಸಾಲು
ದೀಪ ಮತ್ತದರ ಬೆಳಕು
ಪರದೆಗಳ ಗಳಿಗೆ
ಉಟ್ಟ ಸೀರೆಯ ನಿರಿಗೆ
ಅಪರಾತ್ರಿ ಸರಿದಿದ್ದು  ಸುಳ್ಳೇ?

ಅಂತರಾಳದ ನೀರು ತುಳುಕಿದ್ದು ನಿಜವೇ
ಅಂತಃಕರಣದ ಬೇರು ಅಳುಕಿದ್ದು ತರವೇ
ಅಂತಿಂತ ಗಾಳಿಗೂ ಕಂತಬಾರದ ಸೂರು
ಸುಳಿದ ಕಿರುಗಾಳಿಗೇ ಮುರಿದು
ಸೋರಿದುದು ಸರಿಯೇ
ಎಲ್ಲಿಯೋ ಮರಬಿದ್ದ ಸದ್ದು
ಬೀಸದೆಯೇ ಬಿರುಗಾಳಿ ಮಳೆ
ಗದ್ದಲದಿ ಎದ್ದು
ಒದ್ದು ಒಳಗಿನ ಭಯವ
ಮೆಟ್ಟಿ ನಿಂತಿದ್ದು ದಿಟವೇ
ಕಂಪಿಸಿತೇ ಆಕಾಶ
ಇಲ್ಲ ಬರಿ ಹುಯಿಲೇ
ಕಂಪಿಸಿತೇ ಬಯಲು
ಇಲ್ಲ ಆಲಯವೇ
ಕಂಪಿಸಿದ್ದು ಕಾಲವೇ ದೇಶವೇ
ಇಲ್ಲ ಸನ್ನಿವೇಶವೇ
ಕಂಪಿಸಿತೇ ಪ್ರಶ್ನೆ?
ಇಲ್ಲ ಉತ್ತರವೇ

‍ಲೇಖಕರು Avadhi

21 July, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading