ಕ್ಷಮಿಸುವ ಭಗವಂತನ
ಕೈಯೂ ರಕ್ತವಾಗಿದೆ.
ಅವನಿಗೂ ಕಾಡುತ್ತಿದೆ ಪಾಪ ಪ್ರಜ್ಞೆ.
–
ಗರ್ಭಗುಡಿ ಮಂದ ಬೆಳಕು,
ಸೂತಕದ ಮನೆಯ ಹಣತೆಯಂತೆ
ಕಂಡಿದೆಯಂತೆ ಅವಗೆ.
–
ಕಣ್ಣುಜ್ಜಿ ಗೊಂಡಾಗಲೆಲ್ಲ
ರಕ್ತದ ವಾಸನೆ ಮೂಗಿಗೆ ಅಡರಿ
ದಿಕ್ಕೆಡುವನು.
–
ಭಕ್ತರು ನೂರು ಮಂದಿ
ನೆರೆದು ನಿಂತರೆ,
ತತ್ತರಿಸಿ ದುಃಸ್ವಪ್ನ
ಕಂಡಂತೆ ನಡುಗುವನು..
–
ಊರ ಬೀರನು,ಸಾಬರ ಪೀರನು,
ಜಾಡಮಾಲಿಗಳಂತೆ ಕೊಳೆಯನ್ನು,
ಕಳೆಬರವನ್ನುಎತ್ತೆತ್ತಿ ಸ್ವಚ್ಛ ಮಾಡುತ್ತಿದ್ದರೆ,
ದೇಗುಲದ ಕಟ್ಟೆ ಮೇಲೆ ಅನಾಥನಾಗಿಹನು…
–
ಗಂಟೆ ನಾದ ಮೀರಿದ
ಗುಂಡುಗಳು ಸದ್ದು,
ಶಂಖನಾದ ಸೀಳಿದ ಆಕ್ರಂದನ,
ಗುಡಿಯ ಒಳಗೆಲ್ಲಾ ಮಾರ್ದನಿಸಿ ಆಕ್ರೋಶ…
ಸರ್ವಶಕ್ತನೂ ನಿಶ್ಯಕ್ತನಾಗಿಹನು.
–
ದಾರಿ ಹೋಕನು ಮುಂದೆ
ನನ್ನ ಕಾಪಾಡು ದೇವ ಎಂದು ಕೈಚೆಲ್ಲಿಹನು
ಗರ್ಭಗುಡಿಯ ದೇವ ಅಂಗಲಾಚುತಿಹನು..
*****
ಅಮಲುಗತ್ತಲು,ಬರೀ ಮಂತ್ರಗಳು
ಏನೂ ಕೇಳದೆ,
ಜಗದಲ್ಲೇನುಗುತ್ತದೆ ತಿಳಿಯದೆ
ಮೂಢನಾಗಿಹನೆಂದು ಊರಾಚೆ
ಬೆಟ್ಟದ ಮೇಲೆ ಕೂತಿಹನಂತೆ..
ಕಂಡರೆ ಕೈಮುಗಿದು
ಅಲ್ಲಿಂದಲೂ ಕಳಿಸಿಕೊಟ್ಟು ಬಿಡಿ..
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]






0 Comments