ಚಿದಂಬರ ನರೇಂದ್ರ
In collaboration with Sahir Ludhiyanvi
(ನಿಮಗೆ ಕಂಬಾರರ “ಏ ಕುರುಬರಣ್ಣ ಸತ್ಯುಳ್ಳ ಶರಣ” ಹಾಡಿನ ಧಾಟಿ ನೆನಪಿದ್ರೆ ಆ ಧಾಟಿಯಲ್ಲಿ ಹಾಡಿಕೊಳ್ಳಬಹುದು)
ಓ ಗಾಂಧಿ ಅಜ್ಜ,
ಓ ಗಾಲಿಬ್ ಚಾಚಾ
ಮುಗೀತಲ್ಲೋ ನಿಮ್ಮ ಉರವಣಿಗಿ
ಇನ್ನೇನಿದ್ರೂ ನಮ್ದ ನೋಡೊ ಮೆರವಣಿಗಿ.
ಮಾತಿನ್ಯಾಗಿನ ಮಾನಾ ಕೊಲ್ರಿ
ಮನಶೇರ ಹಾದಿ ಗಾಲಿ ಕೀಳ್ರಿ
ಸತ್ಯ, ಶಾಂತಿ ಎಲ್ಲಾ ಬರೀ ಢೋಂಗಿ
ನಾನೂ ಕಳ್ಳ, ನೀನೂ ಖೂನಿ
ಇಬ್ರೂ ಕೂಡಿ ಹಾಡೋಣ ಬನ್ನಿ…
ಮುಗೀತಲ್ಲೋ ನಿಮ್ಮ ಉರವಣಿಗಿ
ಗಾಂಧಿ, ಗಾಲಿಬಾ
ಇನ್ನೇನಿದ್ರೂ ನಮ್ದ ಮೆರವಣಿಗಿ.
ಬಡವ ತುಳದ ರಸ್ತೆ ತೊಳಿರಿ
ಅಲ್ಲಾ, ರಾಮನ ಕೆಂಪ ಮಾಡ್ರಿ
ಹೊಟ್ಟಿಗಿಲ್ಲದವರ, ಹೊಟ್ಟಿ ಹುಗೀರಿ
ನಾನು ಕೇಸರಿ, ನೀನು ಹಸಿರು
ದೋಸ್ತಿ ನಮ್ದು ಭಾರಿ ಹೆಸರು…
ಮುಗೀತಲ್ಲೋ ನಿಮ್ಮ ಉರವಣಿಗಿ
ಗಾಂಧಿ, ಗಾಲಿಬಾ
ಇನ್ನೇನಿದ್ರೂ ನಮ್ದ ಮೆರವಣಿಗಿ.
ಗಾಂಧಿ ಹಿಂದ ಆತ್ಮ ಹೋತು
ಗಾಲಿಬ್ ನಿನ್ನ ಮಾತೂ ಹೋತು
ಇನ್ನೇನಿದ್ರು ಭೂತ ಕಾಡೋ ಕಾಲಾ
ನಾನೂ ಶೂರಾ ನೀನೂ ವೀರಾ
ಜಗದ ತುಂಬಾ ಹಾಹಾಕಾರಾ
ಮುಗೀತಲ್ಲೋ ನಿಮ್ಮ ಉರವಣಿಗಿ
ಗಾಂಧಿ, ಗಾಲಿಬಾ
ಇನ್ನೇನಿದ್ರೂ ನಮ್ದ ಮೆರವಣಿಗಿ.






0 Comments