ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಳ ದನಿ…

ಎಂ ಜಿ ತಿಲೋತ್ತಮೆ

ಪ್ರಖರ ಬೆಳಕಿಗೆ
ಅರಳಿದ ಹೂವಿಗಿಂತ
ಚಿಕ್ಕ ಚಿಕ್ಕ ಕಿಡಿ ಜ್ವಾಲಮುಖಿಯಾಗಿ
ಕಣ್ಣು ಕಿವಿ ಬಾಯಿಗಳನ್ನು ಕತ್ತರಿಸಿದ್ದನ್ನು
ಹೆಚ್ಚು ನೋಡಿದ್ದೇನೆ

ನರ್ತಿಸುವ ನವಿಲಿಗೆ
ಸುಮಧುರ ಕೋಗಿಲೆ ಕಂಠಕ್ಕೆ
ಮನ ಸೋತಿದಕ್ಕಿಂತ
ಭೇಟೆಯಾಡುವ ರಣ ಹದ್ದುಗಳ ಕಂಡಾಗಲೆಲ್ಲಾ
ಮೂಕ ದೃಷ್ಠಿ  ನೆಟ್ಟಿದ್ದೇನೆ

ಅರಮನೆಯ ಹೂವಿಗಿಂತ
ಕಾಡು ಹೂವು ಕಂಡರೆ
ನಾನು ತುಂಬಾ ಪ್ರೀತಿಸುತ್ತೇನೆ
ಹೊಗುಳುವರ ಮುಂದೆ
ಕೈ ಕಟ್ಟಿ ನಿಲ್ಲುವುದಕ್ಕಿಂತ
ನೊಂದ ಅಬಲೆಯ
ಬೆನ್ನ ಮೇಲಿನ
ಕ್ರೂರ ಗೆರೆಗಳ ನೋಡಿ
ಒಳಗೊಳಗೆ ನೊಂದಿದ್ದೇನೆ

ಹುಟ್ಟಿದ ಪ್ರಶ್ನೆಗೆ ಸಮಾಧಿ ಕಟ್ಟುತ್ತಾ
ಶಾಂತಿ ದೀಪ ಹಚ್ಚಿ ಉದ್ದುದ್ದಾ  ನಡೆಯವರ
ಹಿಂದೆ ಬರಿಗಾಲಿನಲ್ಲಿ ನಡೆಯುವುದಕ್ಕಿಂತ
ಗೋಡೆಗಳಿರದ ನಿರ್ಬಂಧಗಳಿರದ
ಬಯಲೇ ಲೇಸೆಂದುಕೊಂಡಿದ್ದೇನೆ

ಗುಂಪು ನಂಬುವ ಕೆಲವು ವಿಷಕ್ಕಿಂತ
ನಮ್ಮ ಅರಿಕೆಯ ಒಂದು ಸತ್ಯಕ್ಕೆ
ನಿತ್ಯ ಹೋರಾಡುತ್ತೇನೆ
ಮತ್ತೆ ಮತ್ತೆ
ನನ್ನೊಳಗಿನ ಪ್ರಶ್ನೆಗಳಿಗೆ
ನಾನೇ
ಉತ್ತರಿಸುತ್ತೇನೆ.

‍ಲೇಖಕರು Admin

4 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading