ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಳಮುಖದ ಎದೆ ಮೇಲೆ ಮೆಲ್ಲಗೆ ಕರಗುವ ಪುಳಕಗಳು..

ಅಂತರಾಳ

-ಎಚ್ ಕೆ ಶರತ್


ಮರಳ ಅರಳಿನೊಳು
ಅವಿತಿರುವ ಕಾವು
ಅರಿಯಬಲ್ಲದು
ತಾಯಿ ಆಮೆಯ ನೋವು
 
ದವಾಖಾನೆಯ ಯಂತ್ರದೊಳು
ಅಡಗಿರುವ ಕ್ರೌರ್ಯ
ಭ್ರೂಣದೆದುರು ತೋರಬಲ್ಲದು
ತನ್ನ ಶೌರ್ಯ
 
ಬಹುಮಹಡಿ ಕಟ್ಟಡಕ್ಕೆ
ಪಾಯ ತೋಡಿದ ಕೈಗಳು
ಬಿಕ್ಕಿ ಬಿಕ್ಕಿ ನಗಬಲ್ಲವು
ಮಹಾನಗರದ ಔದಾರ್ಯ ಕಂಡು
 
ಗ್ಯಾರೇಜಿನ ಆಯಿಲ್ಲು ಗ್ರೀಸಿನ ನಡುವೆ
ಅರಳಿದ ನರಳಿದ ಕೆರಳಿದ ಬದುಕು
ನಿರ್ಲಕ್ಷಿಸಬಲ್ಲದು
ಜಗದ ಥಳುಕು ಬಳುಕು
 
ಮೇಲ್ಮುಖದ ಒಡಲೊಳಗೆ
ಅಸಂಖ್ಯ ತವಕಗಳು
ಒಳಮುಖದ ಎದೆ ಮೇಲೆ
ಮೆಲ್ಲಗೆ ಕರಗುವ ಪುಳಕಗಳು
 

‍ಲೇಖಕರು G

21 September, 2014

2 Comments

  1. Gn Nagaraj

    ಚೆನ್ನಾಗಿದೆ

  2. mmshaik

    nice..sharat keep it up….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading