ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಳಗೆ ಮಾತ್ರವಲ್ಲ ಹೊರಗೆಯೂ ಕತ್ತಲೆ…

ಕತ್ತಲೆ : ಒಳ-ಹೊರಗೂ

ಕು ಸ ಮಧುಸೂದನ್


ಕಡುಬೇಸಿಗೆ ನಡೂಹಗಲ ಅಗ್ನಿಕುಲುಮೆಯೊಳಗೆ ಸೂರ್ಯ
ತಟಕ್ಕನೆ ಕವಿದ ಕರಿಮೋಡಗಳ ಕಪ್ಪಲ್ಲಿ ಕರಗಿದಾಗ
ನನ್ನ ದ್ವನಿ ಪೆಟ್ಟಿಗೆ ಉಡುಗಿ ಹೋಯಿತು
ಜಗತ್ತಿನಷ್ಟೂ ಮಾತುಗಳು ಸತ್ತು ಹೋದವು
ಶಬ್ದಗಳು ನಿಶ್ಯೇಷವಾಗಿ
ಅರ್ಥಗಳು ಅವಶೇಷವಾಗಿ
ಬರಿಯ ಸಂಕೇತಗಳಷ್ಟೇ ಉಳಿದು ಕೊಂಡವು
ಆಗ
ಯಾರೋ ತೋಡಿಟ್ಟ ಸಮಾಧಿಯೊಳಗೆ
ನನ್ನ ಬಲವಂತವಾಗಿ ಕೂರಿಸಿ
ಹಣೆಗೆ ವಿಭೂತಿ ಹಚ್ಚಿ
ಹಾರ ಹಾಕಿ
ಊದಿನ ಕಡ್ಡಿ ಹಚ್ಚಿ ಪೂಜಿದರು
ಬದುಕಿದ್ದೇನೆಂದು ಕೂಗಿಕೊಂಡ ನನ್ನ ಶಬ್ದಗಳು
ಯಾರನ್ನೂ ತಲುಪದೇ ಗಾಳಿಯಲಿ ಲೀನವಾದವು
ಹೊತ್ತು ಮುಳುಗುವುದರೊಳಗಾಗಿ ಸಮಾಧಿಮುಚ್ಚಲು
ಹಟಕ್ಕೆ ಬಿದ್ದವರಂತೆ
ಆಳಿಗೊಂದೊಂದು ಹಿಡಿಮಣ್ಣು ಹಾಕಿ
ಹೊರಟುಹೋದರು
ಹಾಲು ತುಪ್ಪ ಬಿಡುವ ಶುಭಗಳಿಗೆಯ ಬಗ್ಗೆ
ಮಾತಾಡುತ್ತ!
ಒಳಗೆ ಮಾತ್ರವಲ್ಲ
ಹೊರಗೆಯೂ ಕತ್ತಲೆ
 

‍ಲೇಖಕರು G

6 May, 2015

2 Comments

  1. Nagarajyk kamble

    channagide sir

  2. Rohini Satya

    Kavana chennaagide sir! Nanna kavanada eradu saalu nenepige bantu.” Uduruva varegu eleyannu appi hidiyuttade maravu, uduruva munnave oppi odaruttide maanava sambandhavu “!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading