ಸಾವು ಸಹಜ
ಸಂಗೀತ ರವಿರಾಜ್
ಬುದ್ಧನ ನುಡಿ
ಸಾವಿಲ್ಲದ ಮನೆಯ
ಸಾಸಿವೆ ತಾರೆಂದು
ಅದೆಷ್ಟು ಸಾರ್ವಕಾಲಿಕ ಸತ್ಯ
ಈ ಲೋಕಕ್ಕೆ………..

ಬದುಕು ಹಂಗಲ್ಲ
ಹಾಗೆಂದು ಸ್ವೇಚ್ಛೆಯು ಅಲ್ಲ
ಒಳಗಣ ರಾಜಿಯೊಂದಿಗೆ
ಬದುಕು ಬಿಮ್ಮನೆ ಅರಳಬೇಕು
ಜಾಜಿಯಂತೆ
ಹಾಗೆ ಸುಮ್ಮನೆ………
ಜಾಜಿಯ ನೆರಳಂತೆ
ಬದುಕು ಬುದ್ಧನ ನೆಲೆಯಲ್ಲಿ
ಪವಡಿಸಲಿ-
ಸಾವಿದೆ ಪ್ರತಿ ಜಗಲಿಗು
ಬುದ್ಧಿ ಭಾವದ ನೀತಿ ಅನೀತಿಗೆ
ಸಾವು ಸಂಭ್ರಮ!






chennagide sangeetha
nice poem Sangeeta
good one..
kavite tumba chennagide. congrats
manasige thattida padya.