ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಲವಿನ ಮಳೆ ಸುರಿಸಿ..

ಹೊಸತು ಸಂವಾದ

ಶ್ವೇತ ಎಂ.ಯು 

ಬೆಳದಿಂಗಳು ಚೆಲ್ಲುತ್ತಿದೆ ಪ್ರೀತಿಯ ಉನ್ಮಾದ
ಪುಟಿಯುತ್ತಿದೆ ನವಜೀವನ ಹೊಸತು ಸಂವಾದ

ಝೇಂಕರಿಸಿವೆ ಮೋಡಗಳು ಒಲವಿನ ಮಳೆ ಸುರಿಸಿ
ಹಸಿರಾಯಿತು ಬಂಜರುನೆಲ ಆನಂದದಿ ಆಲಂಗಿಸಿ

ಹರಿಯ ಬೇಕು ಜೀವನದಿ ಅಡೆತಡೆಗಳ ಮೀರಿ
ಎದಿರಾಗುವ ಗುಡ್ಡಗಳ ಹೂಂಕರಿಸಿ ಸವಾರಿ

ಮೀರ ಬೇಕು ಕಟ್ಟು ಪಟ್ಟು ಸೌಹಾರ್ದತೆ ತೋರಿ
ಸಾಗಬೇಕು ರಹದಾರಿ ಮಾನವತೆಯ ಸಾರಿ

ಓ ಬನ್ನಿ ಸಡಿಲಗೊಂಡ ಸಂಬಂಧಗಳ ಬೆಸೆಯುವ ಒಡಗೂಡಿ
ಸಹಬಾಳ್ವೆಯ ನೇಗಿಲನ್ನು ಹೂಡುವ ತ್ವರೆಮಾಡಿ

ಬಿತ್ತೋಣ ಬೆಳೆಯೋಣ ಆನಂದದ ದವಸ
ಹಂಚೋಣ ತಿನ್ನೋಣ ಪ್ರೀತಿಯ ನವ ಚೇತ

‍ಲೇಖಕರು avadhi

17 October, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading