ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಒರೆಸಲ್ಪಡದ ಕಣ್ಣೀರು ಸರಿದೆಡೆಯೆಲ್ಲಾ …’ – ಎನ್ ಸಂಧ್ಯಾರಾಣಿ

ಗೌತಮಿಯ ಗುಟ್ಟು

ಎನ್ ಸಂಧ್ಯಾ ರಾಣಿ


’ಸದಾ ನಗು ನಗುತ್ತಿರುವ
ನಿನ್ನ ನಗುವಿನ ಮೂಲ ಎಲ್ಲಿ?
ಯಾರೂ ಅಳವಿಗೂ ನಿಲುಕದ
ನಿನ್ನ ನೋವಿನ ತಂತಿ ಯಾವುದು?’
ಅವಳು ಕೇಳಿದಳು.
 
ಮನವೇನು ಕೊಳೆಬಟ್ಟೆಯೇ
ಕಣ್ಣೀರಲಿ ನೆನಸಿ, ಮಾತಿನ
ಸೋಪು ತಿಕ್ಕಿ, ಬಿಕ್ಕುಗಳಲ್ಲಿ
ಕುಲುಕಿ, ನಿಟ್ಟುಸಿರಲಿ ಜಾಲಾಡಿ
ಎದುರಲ್ಲಿ ಹರಡಿ, ಒಣಗಿಸಿ
ಝಳ ಝಳ ಅನ್ನಿಸಲು?
 
ನೋವ ಸಹಿಸಬೇಕು, ಭರಿಸಬೇಕು,
ನವೆಯಬೇಕು
ಕರಗಬೇಕು
ಎದೆ ಇನ್ನಷ್ಟು ಕೊರಡಾಗಿ,
ಒರೆಸಲ್ಪಡದ ಕಣ್ಣೀರು
ಸರಿದೆಡೆಯೆಲ್ಲಾ ಒಂದೊಂದು
ಪದರ ಹರಳುಗಟ್ಟಿ
ಸ್ಪರ್ಷದ ಬಿಸುಪು ತಾಗದ ಮನ
ಕಣ ಕಣವಾಗಿ ತಣ್ಣಗಾಗಿ, ಸೆಟೆದು..
 
ಆಗ
ಬಹುಷಃ ಆಗ.. ಒಂದು ದಿನ
ಗೌತಮಿಯಂತೆ
ಸಂಪೂರ್ಣ ಶಿಲೆಯಾಗಿ..
ಒಮ್ಮೆ ತುಟಿಗಿಷ್ಟು ನಗು
ಕೆತ್ತಿಟ್ಟುಬಿಟ್ಟರೆ ಸಾಕು
ಆಮೇಲೆಲ್ಲ ಕಾಣುವುದು
ಶೈತ್ಯಾಗಾರದಲ್ಲಿಟ್ಟ ನಗುವಿನ ಶವ ಮಾತ್ರ
 

‍ಲೇಖಕರು avadhi

26 February, 2013

19 Comments

  1. mmshaik

    nice one..

  2. pravara

    ಸಂಧ್ಯಕ್ಕ, ಮೊನಾಲಿಸಾಳ ಕಲಾಕೃತಿಯ ಹಿಂದಿನ ಕಥೆ ನೆನಪಾಯ್ತು……

  3. Rj

    Very good..
    Was that ಭಿಕ್ಕು or ಬಿಕ್ಕು?
    ಭಿಕ್ಕು ಅಂತ ಅಂದುಬಿಟ್ಟರೆ ಬೌದ್ಧಭಿಕ್ಷು/ಸನ್ಯಾಸಿ/Monk ಎಂಬ ಅರ್ಥ ಬಂದುಬಿಡುತ್ತದೆ.ಅದು ಇಲ್ಲಿ ಹೊಂದುತ್ತಾ?ಗೊತ್ತಿಲ್ಲ.ಬಹುಶಃ ನೀವು ಬರೆಯಬಯಸಿದ್ದು ಬಿಕ್ಕು(ಬಿಕ್ಕಳಿಕೆ)ಅಂತ ಅನಿಸುತ್ತೆ.ಅಥವಾ ನಿಜವಾಗಿಯೂ ನೀವು ಇನ್ನೇನನ್ನಾದರೂ ಹೇಳಬಯಸಿದ್ದೀರೋ-ಗೊತ್ತಿಲ್ಲ.
    ಭಿಕ್ಕುವಿಗೆ ಬೇರೆ ಏನಾದರೂ ಅರ್ಥವಿದೆಯಾ?
    -Rj

  4. Mohan V Kollegal

    ನೋವ ಸಹಿಸಬೇಕು, ಭರಿಸಬೇಕು,
    ನವೆಯಬೇಕು
    ಕರಗಬೇಕು
    ಎದೆ ಇನ್ನಷ್ಟು ಕೊರಡಾಗಿ,
    ಒರೆಸಲ್ಪಡದ ಕಣ್ಣೀರು
    ಸರಿದೆಡೆಯೆಲ್ಲಾ ಒಂದೊಂದು
    ಪದರ ಹರಳುಗಟ್ಟಿ
    ಸ್ಪರ್ಷದ ಬಿಸುಪು ತಾಗದ ಮನ
    ಕಣ ಕಣವಾಗಿ ತಣ್ಣಗಾಗಿ, ಸೆಟೆದು.. – ಅರ್ಥಗರ್ಭಿತ ಕವನ… ಚೆನ್ನಾಗಿದೆ ಅಕ್ಕ.. ಕವಿತೆಯಲ್ಲಿ ನಗುವಿದೆ… ನಗುವನ್ನೂ ಮೀರಿಸುವ ಮೌನವಿದೆ… ಮೌನದೊಳಗೆ ಹರಳುಗಟ್ಟುವ ವಿಚಾರವಿದೆ… ವಿಚಾರದೊಳಗೆ ನಗು ಅಳುವಿನ ಸಮತೆಯಿದೆ… 🙂

  5. Tejaswini Hegde

    ಆಮೇಲೆಲ್ಲ ಕಾಣುವುದು
    ಶೈತ್ಯಾಗಾರದಲ್ಲಿಟ್ಟ ನಗುವಿನ ಶವ ಮಾತ್ರ – Wah!!!

  6. Sowmya

    ……….. Ishtu chenda eno novannu yaraoo chitrisiralilla. Mana muttitu sandhya. 🙂

  7. bharathi bv

    🙁 mattu 🙂 ottige …

  8. -ರವಿ ಮೂರ್ನಾಡು

    ಕಾವ್ಯ ಚೆನ್ನಾಗಿದೆ. ಶವವನ್ನೂ ಕೂಡ ನಗಿಸುವ ಶಕ್ತಿ ಬಹುಷಃ ” ಅಕ್ಷರ ಶಕ್ತಿ” ಮತ್ತು “ಕುಂಚದ ಭಿತ್ತಿ”ಗೆ ಮಾತ್ರವೇನೋ ಸಾಧ್ಯ ಅನ್ನಿಸಿತು. ಕಲೆ ಕೇವಲ ಕ್ರಿಯೆಯಲ್ಲ . ಅದೊಂದು ಬದುಕು ಮತ್ತು ಒಲಿಸಿಕೊಳ್ಳುವ ಭಕ್ತಿ . ಅಭಿನಂದನೆಗಳು.

  9. Hussain

    ಅರ್ಥಗರ್ಭಿತ ಕವಿತೆ.. ಓದಿದಷ್ಟೂ ತೆರೆದುಕೊಳ್ಳುತ್ತದೆ. ಕೆಲವೊಂದು ಕಡೆ ಭಾವತೀವ್ರತೆ ಓದುಗನ ಮನಸೂರೆಗೊಳ್ಳುತ್ತದೆ.

  10. Purushothama

    nice one

  11. sumathi

    ಸ್ಪಷ್ಟ! ಮುಖದ ಮೇಲೆ ನಗೆಯ ಮುಖವಾಡ ಧರಿಸುವ ವಿಧಾನ.

  12. shanthi k.a.

    superb…

  13. Vinay Bharadwaj

    Wah…Sandhyakka, Tumbaa chennagide.

  14. ಶ್ರೀವತ್ಸ ಜೋಶಿ

    ಕವಿತೆ ಚೆನ್ನಾಗಿದೆ! [ನನಗೆ ಅರ್ಥವಾದಷ್ಟು ಮಟ್ಟಿಗೆ.]
    @RJ- “ಕಣ್ಣೀರಲಿ ನೆನಸಿ, ಮಾತಿನ ಸೋಪು ತಿಕ್ಕಿ, ಬಿಕ್ಕುಗಳಲ್ಲಿ ಕುಲುಕಿ, ನಿಟ್ಟುಸಿರಲಿ ಜಾಲಾಡಿ…” ಎನ್ನುವ ಸಂದರ್ಭದಲ್ಲಿ ಕಣ್ಣೀರು-ಮಾತು-ಬಿಕ್ಕು-ನಿಟ್ಟುಸಿರುಗಳ ಸರಣಿಯಲ್ಲಿ ’ಬಿಕ್ಕು’ ಸರಿಯಾಗಿಯೇ ಇದೆಯಲ್ಲ? ಬಿಕ್ಕು ಎಂದರೆ ಬಿಕ್ಕಳಿಕೆ, ಇಂಗ್ಲಿಷ್‌ನಲ್ಲಿ hiccup ಅಲ್ಲವೇ?

    • Rj

      ಈ ಮೊದಲು ಅದು ‘ಭಿಕ್ಕು’ ಆಗಿತ್ತು.ಆಮೇಲೆ ಸರಿಪಡಿಸಲಾಯ್ತು! ಸರಿಪಡಿಸಿದ ಮೇಲೆ ನನ್ನ ಕಮೆಂಟನ್ನು ನಾನು ತೆಗೆಯಬೇಕಿತ್ತು,ಮರೆತುಹೋಯಿತು.:-)
      -Rj

  15. ಎನ್ ಸಂಧ್ಯಾ ರಾಣಿ

    ಕವನ ಓದಿದ, ಪ್ರತಿಕ್ರಯಿಸಿದ ನಿಮಗೆಲ್ಲ ಧನ್ಯವಾದಗಳು!

  16. Shama Nandibetta

    Sandhya
    ’ಸದಾ ನಗು ನಗುತ್ತಿರುವ
    ನಿನ್ನ ನಗುವಿನ ಮೂಲ ಎಲ್ಲಿ?
    ಯಾರೂ ಅಳವಿಗೂ ನಿಲುಕದ
    ನಿನ್ನ ನೋವಿನ ತಂತಿ ಯಾವುದು?’
    ನನ್ನ ಇವತ್ತಿಗೂ ಕಾಡುತ್ತಿರುವ ಪ್ರಶ್ನೆ… ಉತ್ತರ ಸಿಕ್ಕದ ಪ್ರಶ್ನೆ…
    ಭಾವ ತೀವ್ರತೆಯನ್ನು ಹಿಡಿದು ತಂದು ಎದುರಿಗಿಟ್ಟ ಕವನ

  17. ಬೇಲೂರು ರಘುನಂದನ್

    ಕವಿತೆ ಚೆನ್ನಾಗಿದೆ…..ಸ್ವಭಾವೋಕ್ತಿ ಗಳಲ್ಲೇ ಕಾವ್ಯ ಅಲಂಕಾರಗೊಂಡಿದೆ.ಸಹಜವಾಗಿ ಕವಿತೆ ಒಡ ಮೂಡಿದೆ……..ಅಭಿನಂದನೆಗಳು

  18. savitri

    ಎಷ್ಟು ಸೊಗಸಾದ ಕವನ! ನಿಜವಾಗಿಯೂ ಮತ್ತೆ ಮತ್ತೆ ಓದಬೇಕೆನ್ನಿಸುತ್ತದೆ:-)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading