ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒರಟು ನೆಲ, ಮುರುಟುವುದಿಲ್ಲ ಬೀಜ…

ಪ್ರೀತಿ ಕುಡಿಯೊಡೆಯಲಿ…

ವೈ.ಬಿ.ಹಾಲಬಾವಿ


ಒರಟು ನೆಲ

ಮುರುಟುವುದಿಲ್ಲ ಬೀಜ

ಬಿದ್ದ ನೆಲೆಯಲ್ಲೇ ನೀರು, ಗೊಬ್ಬರ ಹೀರಿ

ಕುಡಿಯೊಡೆಯುತ್ತದೆ ಮೊಳಕೆ…

 

ಬೇಲಿಯೊಂದಿಗೆ ಬೆಸೆದರೂ ಬಳ್ಳಿ

ಮುಳ್ಳಿನಾಸರೆಯಲ್ಲಿ ಹೂ ಪಲ್ಲವಿಸುತ್ತದೆ…

 

ಸಾವಿನ ನೆರಳಿನಂತೆ ಹರಿದಾಡಿದರೂ ಹಾವು

ಗುಬ್ಬಿ ಗೂಡಿನಲ್ಲಿ ಮೊಟ್ಟೆಗಳು ಕಾವು ಪಡೆದು

ಜೀವ ತಳೆಯುತ್ತವೆ ಗುಬ್ಬಚ್ಚಿ ಮರಿಗಳು…

 

ದಟ್ಟ ಕಾನನ ಹಿಂಸ್ರ ಮೃಗಗಳ ದಂಡು

ಅಪಾಯದಂಚಿನಲ್ಲೂ ಜಿಂಕೆಗಳು

ಪುಟ್ಟ ಮರಿಗೆ ಜನ್ಮ ನೀಡುತ್ತವೆ…

 

ಒರಟು ವಕ್ರತೆಯಲ್ಲೇ

ಬದುಕು ಅರಳಿ ಕರುಣೆ ಕೈಯೊಳಗೆ

ಜೀವ ರಕ್ಷಣೆ ಪಡೆದು ಪ್ರೇಮ ನೆಲೆಯೂರುತ್ತದೆ…

 

ಜೀವ ಹೊಸಕಿ ಹಾಕುವ ಕೈ

ಮತ್ತೆ ತುಂಬಲಾರದು ಜೀವ

ಹಿಂಸೆ, ಕ್ರೌರ್ಯ ತುಂಬಿದ ಕಣ್ಣುಗಳಲ್ಲಿ

ಪ್ರೀತಿ ಕುಡಿಯೊಡೆಯಲಿ…!

‍ಲೇಖಕರು avadhi

29 April, 2013

2 Comments

  1. mmshaik

    nice poem..!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading