ಉದಯ ಇಟಗಿ ಅವರ ಬ್ಲಾಗ್ ಓದುತ್ತಿದ್ದಾಗ ಕಣ್ಣಿಗೆ ಬಿದ್ದ ಈ ಕವಿತೆ ಯಾಕೋ ಇವತ್ತಿನ ನಮ್ಮ ಬ್ಲಾಗ್ ಸ್ಥಿತಿಗೆ ಕನ್ನಡಿ ಹಿಡಿಯುತ್ತಿದೆ ಎನಿಸಿತು.
ಅದಕ್ಕಾಗಿ ಅದು ಇಲ್ಲಿದೆ–

ಇಂಗ್ಲಿಷ್ ಮೂಲ: ಐಸಾಕ್ ವ್ಯಾಟ್ಸ್
ಕನ್ನಡಕ್ಕೆ: ಉದಯ ಇಟಗಿ
ನನಗೆ ಆ ಕೊಳಕು ಜನರೆಂದರೆ ಇಷ್ಟವೇ ಇಲ್ಲ
ಬೆರೆಯಲಾರೆ ನಾ ಆ ನೀಚರೊಂದಿಗೆ ಅವರಂತೆ
ಮಾತು ಮಾತಿಗೂ ಆಣೆಯಿಡುತ್ತಾ ಶಪಿಸುತ್ತಾ
ಹೊಲಸು ಮಾತಾಡುತ್ತಾ ಕಾದಾಡುವವರ ಜೊತೆ
ನನ್ನ ಸಿಟ್ಟು ನೆತ್ತಿಗೇರಿ ನೆಮ್ಮದಿ ಕೆಡುವದರಿಂದ
ಕೇಳಲಾರೆ ನಾ ಅವರಾಡುವ ಹೊಲಸು ಮಾತುಗಳನ್ನು
ಹೊಲಸು ಮಾಡಿಕೊಳ್ಳಲಾರೆ ನನ್ನ ನಾಲಗೆಯನ್ನು
ಅವರಂತೆ ಹೊಲಸು ಹೊಲಸು ಮಾತಾಡಿ
ಮೂರ್ಖರ ಸಹವಾಸ ಮೂರ್ಖನನ್ನಾಗಿಸುವದರಿಂದ
ಮಾಡಲಾರೆ ಅಂಥವರ ಸಹವಾಸವನ್ನು
ಜಾಣರ ಸಹವಾಸ ಜಾಣನನ್ನಾಗಿ ಮಾಡುವದರಿಂದ
ಹುಡುಕಿ ಹೊರಡುವೆನು ಅಂಥವರ ಗುಂಪೊಂದನ್ನು
ಕಲಿಯುವರು ಒಬ್ಬನ ಗೇಲಿ ಮಾತುಗಳಿಂದ
ಹತ್ತು ಜನ ಹತ್ತು ಗೇಲಿ ಮಾತುಗಳನ್ನು
ಜಡ್ಡಾದ ಕುರಿಯೊಂದು ಇಡಿ ಮಂದೆಯನ್ನು ಕೆಡಿಸಿದಂತೆ
ಒಬ್ಬ ಸಾಕು ಉಳಿದೆಲ್ಲವನ್ನು ಹೊಲಸುಗೆಡಿಸಿ ಗಬ್ಬೆಬ್ಬಿಸಲು





very nice
Good. intime