ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಬಾಮಾಗೆ ಸುಸ್ವಾಗತ

-ಎಚ್ ಆನಂದರಾಮ ಶಾಸ್ತ್ರಿ
(ಇಂದಿನ ’ಪ್ರಜಾವಾಣಿ’ ದಿನಪತ್ರಿಕೆಯ ಮುಖಪುಟದಲ್ಲಿ ಚಂದ್ರಶೇಖರ ಕಂಬಾರರ ಕವನ ’ಒಬಾಮಾಗೆ ಸ್ವಾಗತ’ ಪ್ರಕಟಗೊಂಡಿದೆ. ಅದಕ್ಕೆ ಪ್ರತಿಯಾಗಿ ನಾನಿಲ್ಲಿ ಅದೇ ಧಾಟಿಯಲ್ಲಿ, ಆದರೆ ಭಿನ್ನ ನೆಲೆಯಲ್ಲಿ ’ಒಬಾಮಾಗೆ ಸುಸ್ವಾಗತ’ ಕೋರುತ್ತಿದ್ದೇನೆ. ಈ ಅಣಕವಾಡನ್ನು ಕಂಬಾರರು ಮನ್ನಿಸುವರೆಂದುಕೊಳ್ಳುತ್ತೇನೆ.)


ಪಡುವಣದಲ್ಲಿ ಓಲಗಗೊಂಡವರು
ಮೂಡಲಿಗೆ ಪಯಣಿಸುವುದೇನು ಹಿರಿದಲ್ಲ,
ಪಾದ ಬೆಳೆಸಿರಿ ಸ್ವಾಮೀ, ಭೂಮಿ ಒಂದೇ

ಮೊದಮೊದಲು ಸ್ವದೇಶೀ
ಜಪ ಮಾಡಿಕೊಂಡಿದ್ದವರು,
ನೀವು ಬರುವುದು ಗೊತ್ತಾದದ್ದೆ
ಜಪ ಜಾರಿ ವ್ರತಗೆಟ್ಟೆವೆಂದುಕೊಳ್ಳದಿರಿ
ಐಡಿಯಾಗಳಿವೆ ಇಂಡಿಯಾದಲ್ಲಿ ನಮ್ಮವೇ.
ಜಾತಕ ಜನನ ನಕ್ಷತ್ರ ತಿಥಿ ನೋಡದೆ
ಶನಿವಾರ ಸಿಂಗಾರಾಗಿ
ಅಂಗಾರದಂತೆ ಬರುವ ನಿಮ್ಮನ್ನು ತಣಿಸಲು
ಮತ್ತು ನಿಮಗೇ ಉಣಿಸಲು
ಐಡಿಯಾಗಳಿವೆ ನಮ್ಮಲ್ಲಿ.
ನೀವು ಭಿಕ್ಷೆ ನೀಡುವುದೆಷ್ಟೆಂದು
ಅಂದಾಜು ಹಾಕುವ ದರಿದ್ರರಲ್ಲ ನಾವು,
ನಿಮಗೇ ದುಡಿಮೆಯ ಐಡಿಯಾ ಕೊಟ್ಟೇವು

ನೀವು ನಮಗೇನಂದರೂ ತಾಳಿಕೊಳ್ಳಲು
ನೀವೇ ನಮ್ಮ ಗತಿಯಲ್ಲ, ಕೇವಲ ಅತಿಥಿ;
ಸತ್ಕರಿಸುವುದು ನಮ್ಮ ಪದ್ಧತಿ;
ಸತ್ಕರಿಸುತ್ತೇವೆ ಬನ್ನಿ.
ನೀವು ಕಣ್ಣು ಮುಚ್ಚಿದ್ದೆ ಅಮಾವಾಸ್ಯೆ,
ತೆರೆದದ್ದೆ ಹುಣ್ಣಿಮೆ
ಅಂದುಕೊಳ್ಳದಿರಿ, ಆ ಕಾಲ ಹೋಯ್ತು.
ಮಣ್ಣು ಮುಕ್ಕಿದಿರಿ ಆರ್ಥಿಕ ಹಿಂಜರಿತದಿಂದ ನೀವು;
ಕೂದಲೂ ಕೊಂಕದೆ ಮುನ್ನಡೆದೆವು ನಾವು.
ಮಹೇಂದ್ರಜಾಲವ ಹರಡಿ ನೀವು
ಪ್ರಪಂಚದ ಮೂಲೆ ಮೂಲೆಗು ಕಣ್ಣು ನೆಟ್ಟು
ಗುರಿಯಿಟ್ಟರೂ
ಮಾಹಿತಿತಂತ್ರಜ್ಞಾನದ ಜಾಲದಲ್ಲಿ
ನಮಗೆ ಬಂಧಿ! ನಮ್ಮನ್ನು ಬಿಟ್ಟಿರಲಾರದ
ಇಬ್ಬಂದಿ ಪಾಪ ನಿಮಗೆ!

ಅದ್ಯಾವುದೋ ಕೊಚ್ಚೆ ಕೊಳೆಗೇರಿಗೆ ಹೋಗಿ
ನೀವು ಫೋಟೋ ಹಿಡಿಸಿಕೊಂಡಾಕ್ಷಣ
ಅದೇ ಕೇಂದ್ರವೆಂದುಕೊಳ್ಳಬೇಡಿ
ನಿಮ್ಮ ಕಾರಸ್ಥಾನಕ್ಕೆ; ಭಾರತದ ತಾಕತ್ತು ಅಲ್ಲುಂಟು.
ಮನದ ಕೊಳೆಗೇರಿ ನಿಮ್ಮಲ್ಲುಂಟು,
ನಮ್ಮಲ್ಲಿಲ್ಲ

ಏನ ಮಾಡಿದರೂ ಆಕಾಶದ ಸ್ಕ್ರೀನಿನ ತುಂಬ
ನಿಮ್ಮದೇ ಕಥೆ; ಆದರೆ ಇಡೀ ಜಗತ್ತಿಗೆ ಗೊತ್ತು,
ಅದು ನಿಮ್ಮ ಯುದ್ಧದಾಹದ ವ್ಯಥೆ

ನಿಮ್ಮ ಸ್ವಾಗತಕ್ಕೆಂದೇ ಸೇರಿದ್ದೇವೆ
ಕುಲ ಹದಿನೆಂಟು ಹಿರೀಕರು.
ಹಗಲ ದೀವಟಿಗೆ ಹಿಡಿದಾರು
ನಮ್ಮ ಕೊಳಕು ರಾಜಕಾರಣಿಗಳು;
ಆದರೆ ನಿಮಗೆ ಎಷ್ಟೋ ಅಷ್ಟೇ ಮರ್ಯಾದೆ
ಕೊಡುವವರು ನಾವು, ಇಲ್ಲಿನ ಪ್ರಜೆಗಳು

ಕಾಣಿಕೆ ಕೊಡಲು ನಿಮ್ಮಲ್ಲೇನಿದೆ ಅಣುಬಾಂಬು ಬಿಟ್ಟು?
ನಮ್ಮಲ್ಲಿದೆ ನೋಡಿ ಸಂಸ್ಕೃತಿ, ಮೇಧಾಶಕ್ತಿ, ಜೊತೆಗೆ
ಅಕ್ಕರೆಯೊಡನೆ ದೀವಳಿಗೆಯ ಒಬ್ಬಟ್ಟು.

ಗಾದಿಯೇರಿದಕೂಡಲೆ
ಮಹಾತ್ಮ ಗಾಂಧಿಯನ್ನು ನೆನೆದವರು ನೀವು.
ಬನ್ನಿ ಗಾಂಧೀಜಿಯ ಪುಣ್ಯಭೂಮಿಗೆ;
ತಾಗಲಿ ಈ ನೆಲದ ಮಣ್ಣು ನಿಮಗೆ;
ಪಾವನರಾಗಿರಿ,
ಬನ್ನಿ, ಸುಸ್ವಾಗತ.

‍ಲೇಖಕರು avadhi

5 November, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

12 Comments

  1. Prasanna Kakunje

    Bahala olleya, arthagarbhita kavana. Bhale…! 🙂

    • H. Anandarama Shastry

      ಧನ್ಯವಾದ ಪ್ರಸನ್ನ ಅವರೇ.

  2. sritri

    ಕಂಬಾರರ ಕವಿತೆ, ಶಾಸ್ತ್ರಿಗಳ ಕವಿತೆ ಓದಕ್ಕೆ ಒಬಾಮಾಗೆ ಕನ್ನಡ ಬರತ್ತಾ ಅಂತ? 🙂

  3. anasuya mr

    Edu namma Bharatha . kavana monachagide . Nenaplli uliyuttade.

  4. Poornima

    Nice composition.

  5. sunitha betkerur

    kavana thumba chennagide,kambaraa kavavanna innu odilla.

  6. subraya Hegade

    Kavana sundaravagide.

  7. gurushanth

    kavite ok. aadare kambaara kaviteyondige hoolisalaagadu.shastrigalu americavannu matthu bharathavannu bhaavanaatmaka nelegintha vaasthavada neleyalli arithu prathiakriyisidare olleyadu

  8. H. Anandarama Shastry

    ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಎಲ್ಲ ಸಹೃದಯರಿಗೂ ಹೃತ್ಪೂರ್ವಕ ಧನ್ಯವಾದಗಳು.
    *
    – ತ್ರಿವೇಣಿ ಮೇಡಂ ಅಮೆರಿಕದಲ್ಲೇ ಇರುವುದರಿಂದ ಆತನಿಗೆ ಕಲಿಸಬಾರದೇಕೆ? 🙂
    *
    – ಒಪ್ಪುವ ಮಾತೇ. ಆದರೆ, ನನ್ನ ಈ ಅಣಕವನದ ದೃಷ್ಟಿ ಮತ್ತು ಇಂಗಿತ ಇವುಗಳನ್ನು ಅರಿತರೆ ಆಗ ಈ ಕವನ ಸಮ್ಮತವಾದೀತು.

    • H. Anandarama Shastry

      * ’ಒಬಾಮಾಗೆ ಕನ್ನಡ ಬರತ್ತಾ ಅಂತ?’

      * ’ವಾಸ್ತವದ ನೆಲೆಯಲ್ಲಿ ಅರಿತು ಪ್ರತಿಕ್ರಿಯಿಸಿದರೆ ಒಳ್ಳೆಯದು’

      ಈ ಎರಡು ವಾಕ್ಯಗಳು ನನ್ನ ಪ್ರತಿಕ್ರಿಯೆಯಲ್ಲಿ ಮಾಯವಾಗಿವೆ! ದಯೆಯಿಟ್ಟು ಸೇರಿಸಿಕೊಂಡು ಓದಿ.

  9. tadagalale surendra rao

    nimma prayatna kambaararakkinta bhinnavaagiruvudeno sari, aadare adaralli avariginta innoo aala vistaaraviddiddare hechchu arthapoornavaaguttittu. amerikaada yudhdha daahada hindiruva sampattina daahada bagge nimage tilidide endukondiddene. bhaaratadantaha deshagala kai tirupuva, kuttige hisukuva, usirugattisuva avara kroora krutyagala kuritu kooda barediddare chennaagittu.

    • H. Anandarama Shastry

      ಸುರೇಂದ್ರ ರಾವ್ ಅವರ ಅಭಿಪ್ರಾಯ ಸ್ವೀಕಾರಾರ್ಹವಾಗಿದೆ. ನಾನು ಇನ್ನಷ್ಟು ಆಳ-ವಿಸ್ತಾರ ನೀಡಬಲ್ಲೆ ಕೂಡ. ಆದರೆ, ಇದೊಂದು ಕೇವಲ ಅಣಕವನವಾಗಿದ್ದು, ಕಂಬಾರರ ನಿಲುವಿಗಿಂತ ಭಿನ್ನವಾದ ನಿಲುವನ್ನು ಅವರದೇ ಧಾಟಿಯಲ್ಲಿ ಪ್ರತಿಪಾದಿಸುವುದಷ್ಟೇ ಈ ಅಣಕವನದ ಗುರಿಯಾದುದರಿಂದ ಮತ್ತು ಅಂತಹ ಭಿನ್ನ ನಿಲುವಿನ ಅವಶ್ಯಕತೆಯ ಪ್ರತಿಪಾದನೆಯು ಈ ಅಣಕವನದ ಮಿತಿಯಾದುದರಿಂದ ಬೇಕೆಂದೇ ಇದನ್ನಿಷ್ಟಕ್ಕೇ ಸೀಮಿತಗೊಳಿಸಿದ್ದೇನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading