ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಒಪ್ಪಿಕೊ ಹೀಗೇ ನನ್ನನ್ನ, ನಾನೊಪ್ಪಿಕೊಂಡಂತೆ ನಿನ್ನನ್ನ' – ವಿನತೆ ಶರ್ಮ

ವಿನತೆ ಶರ್ಮ

“ಸೇರಿಸಿಕೊ, ಹೆಮ್ಮೆ ನನಗೆ.

ಹೊಸತನ ಕೂಡ”.

ಹೆಮ್ಮರ

ಅವಳೆದೆಯಲ್ಲಿ.

 

ಯಾಕೆ?

ಪ್ರಶ್ನೆಯೇನೋ ಗಟ್ಟಿ.

ಉತ್ತರ ಮರೀಚಿಕೆ.

 

ಸೇರಿಸಿಕೊಂಡರೆ ಏನಾಗತ್ತೆ!

ಎಲ್ಲರ ಒಮ್ಮತ.

 

ಅವರದ್ದೇನೋ ಅಪ್ಪಣೆ.

ಅವನದ್ದು  ನಿರೀಕ್ಷೆ.

ಅವಳದು?

ಅದೇ ಭಾವನೆ-ಉಹುಂ.

ಅಸ್ಪಷ್ಟ ಹುಡುಕಾಟ.

ಒಪ್ಪಲಾ, ಒಪ್ಪಿಕೊಳ್ಳಲೇಬೇಕಾ…

 

ಎಲ್ಲಿದೆ ಇದರ ಮೂಲ-

ಎದೆಯಲ್ಲಾ, ತಲೆಯಲ್ಲಾ,

ಅವನ ಪ್ರೀತಿಯಲ್ಲಾ,

ಅವರ ಮನೆತನದಲ್ಲಾ,

ಎಲ್ಲೆಲ್ಲೂವಾ.

 

ಸೇರಿಸಿಕೊಂಡರೆ – ಏನಾಗತ್ತೆ?

ಬಣ್ಣ ಬದಲಾಯಿಸುತ್ತಾ? ರೂಪ?

ಗುರುತು, ಪರಿಚಯ, ಸ್ವಂತಿಕೆ?

ಇರುವಿಕೆ, ನನ್ನತನ?

 

ಹೆಮ್ಮರದಲ್ಲಿ

ಎನ್. ರಾಗಿಣಿಯಾಗಿದ್ದವಳು

ರಶ್ಮಿ ಜರಡಿ ಆದಳು.

ಮಾನಸ ಹುಲಕಟ್ಟಿ

ಮತ್ತೇನೋ ಆದಳು.

ಕಳೆದು ಹೋದರವರು.

 

ಅವನವಳು,

ಅವರ ಮನೆಯವಳು,

ಅವರಲ್ಲಿ ಅವಳು.

ಅವರ ಕವಚದಲ್ಲಿ

ಅವಳ ಸ್ಥಾನ.

 

ಹೆಸರಲ್ಲೇನಿದೆ ಮಹಾ.

ಸೇರಿಸಿಕೊ ನನ್ನದ್ದನ್ನ,

ನಿನ್ನದೂ, ಜೊತೆಗೆ ನನ್ನದು.

ಹೆಮ್ಮೆ ನನಗೆ. ಹೊಸತನ ನಿನಗೆ.

ಗಂಡನ ಮಾತಿಗೆ

ಅವಳ ಭಾವನೆ.

 

ನನ್ನ ಹೆಸರು

‘ನಾನೂ’ ಅಲ್ಲವೇ?

ಜೊತೆಗಾರ-

ಒಪ್ಪಿಕೊ ಹೀಗೇ ನನ್ನನ್ನ.

ನಾನೊಪ್ಪಿಕೊಂಡಂತೆ ನಿನ್ನನ್ನ.

 

‍ಲೇಖಕರು avadhi

17 April, 2014

1 Comment

  1. Anonymous

    channagide,oppiko eege nannanna nanu oppikondante! nija idu ella hennugala aase kanasu. idu nanasagalu beku mattondu” oppiko eege nannannu nanu oppikondante ennuva jeeva

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading