ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಒಂದು ಹೆಣ್ಣು ಮಗುವಿನ ತಾಯಿಯಾಗಿ…' – ಅಶ್ವಿನಿ ಪ್ರಸಾದ್

ಅಶ್ವಿನಿ ಪ್ರಸಾದ್

ಬೆಂಗಳೂರಿನ ಕ್ರೌರ್ಯ ಬೆಚ್ಚಿ ಬೀಳಿಸಿದೆ , ಶಾಂತಿ ಪ್ರಿಯ ವಾದ ನಮ್ಮ ನಾಡಿನಲ್ಲಿ ಈ ಹೇಯ ಕೃತ್ಯ , ದಿನಕೊಂದು ಅತ್ಯಾಚಾರ ಹೆಣ್ಣಾಗಿ ಹುಟ್ಟಿದೆ ತಪ್ಪು ಅನಿಸುವ ವಾತಾವರ್ಣ. ಒಂದು ಹೆಣ್ಣು ಮಗುವಿನ ತಾಯಿಯಾಗಿ ಒಂದು ರೀತಿಯ ಭ್ರಾಮಕ ಮನಸ್ಥಿತಿ ಯಲ್ಲಿದ್ದೇನೆ . ಚಿಕ್ಕ ಬಾಲಕಿಯ ಮೇಲೆ , ಯುವತಿಯ ಮೇಲೆ ತೀರಾ ವಯಸ್ಸಾದ ವೃದ್ದೆಯ ಮೇಲು ಅತ್ಯಾಚಾರ ಯಾಕೋ ನಿಂತ ನೆಲ ಕುಸಿಯ ತೊಡಗಿದೆ . ಕಠಿಣ ಕ್ರಮ ಬಿಗಿಯಾದ ಕಾನೂನು ಒಂದೇ ಮಾರ್ಗ :

ಅದು ೨೦೦೮ ನಾನು ಆಗಾ ದುಬೈ ನಲ್ಲಿ ಇದ್ದೆ ,ಒಂದು ಶುಕ್ರವಾರ ನಾನು ನನ್ನ ಗೆಳತಿ ನಮ್ಮ ಸಂಗಾತಿ ಗಳ ಜೊತೆಗೆ ಬೀಚ್ ಗೇ ಹೋಗಿದ್ವಿ , ಅಲ್ಲಿ ಸಮುದ್ರ ದ ಅಲೆಗಳನ್ನು ನೋಡ್ತಾ ಇದ್ದಾಗ , ಅನತಿ ದೂರದಲ್ಲಿ ಹಲವು ಸ್ಥಳೀಯ ಮಹಿಳೆಯರು ನೀರಿನಲ್ಲಿ ಆಟ ವಾಡುತಿದ್ದರು ಮೂರೂ -ನಾಲ್ಕು ಹುಡುಗರು ಆ ಮಹಿಳೆಯರನ್ನು ನೋಡುತ್ತಿದರು ತಕ್ಷಣ ಆ ಗುಂಪುನಲ್ಲಿ ಇದ್ದ ಮಹಿಳೆ ಆ ಹುಡುಗರನ್ನು ಗದರಿದಳು ಕ್ಷಣ ಮಾತ್ರ ದಲ್ಲಿ ಆ ಹುಡುಗರ ಅಲ್ಲಿಂದ ಕಾಲ್ಕಿತ್ತರು . ನನಗೆ ಅಚ್ಚರಿ ಆಯ್ತು ನನ್ನ ಪತಿ ಯನ್ನು ಕೇಳಿದಾಗ.  ” ಅಯ್ಯೋ , ಸುಮ್ನೆ ಇರೆ ನೀನು ಇವ್ರು (ನನ್ನ ಗೆಳತಿ ) ನಮ್ಮ ಜೊತೆ ಇದೀರ ಅಂತ ನಮ್ಮಿಬ್ರನ್ನ ( ಅಂದ್ರೆ ಪತಿ ಮತ್ತು ಗೆಳೆಯ ) ಸುಮ್ನೆ ಬಿಟ್ಟಿದ್ದಾರೆ , ಈಗ ಏನಾದ್ರು ಪೋಲಿಸ್ ಗೆ ಹೇಳಿದ್ರೆ ಅಷ್ಟೆ “ನಿಜಕ್ಕು ಗಲ್ಫ್ ದೇಶ ಗಳಲ್ಲಿ ಮಹಿಳೆ ಯರಿಗೆ ಕೊಡುವ ಗೌರವ ಬೇರೆ ಎಲ್ಲೂ ಇಲ್ಲ . ತಡ ರಾತ್ರಿಯವರೆಗೂ ಮಹಿಳೆರು ಮಕ್ಕಳು ಯಾವುದೇ ಅಡ್ಡಿ ಆತಂಕ ಇಲ್ಲದೆ ಸಂಚರಿಸಬಹುದು . ತಡ ರಾತ್ರಿ ಗಳ ವರೆಗು ತೆಗೆದಿರೋ ಶಾಪಿಂಗ್ ಮಾಲ್ , ಇಲ್ಲಿ ಕಾನೂನು ಕ್ರಮ ಗಳು ಬಿಗಿಯಾಗಿ ಯಾಗಿ ಇವೆ , ಯಾರೇ ಮಹಿಳೆ ಯರ ಜೊತೆ ಅಸಭ್ಯ ವಾಗಿ ವರ್ತಿಸಿದರು ಅವರನ್ನ ದೇವರು ಕಾಪಾಡಲ್ಲ . ಎಲ್ಲ ಕಡೆ ಮಹಿಳೆಯರಿಗೆ ಆದ್ಯತೆ , ನೀವು ಯಾವ ಪುರುಷರ ಮೇಲೆ ನಿಮ್ಮಗೆ ಸಿಟ್ಟು ಇದ್ದರೆ ಅವರಿಗೆ ” ಗಲ್ಫ್ ದೇಶ ಗಳಲಿ ಒಂಟಿ ಜೀವನ ಸಾಗಿಸು ” ಅಂತ ಧಾರಾಳವಾಗಿ ಶಪಿಸ ಬಹುದು .
ಹಲವು ಕಡೆ ” ಓನ್ಲಿ ಫಾರ್ ಫ್ಯಾಮಿಲಿಎಸ್ ” ಅಂತ ಹಾಕಿರುತ್ತಾರೆ . ಒಂಟಿ ಪುರುಷರಿಗೆ ಪ್ರವೇಶವೇ ಇಲ್ಲ . ನಮ್ಮ ದೇಶದಲ್ಲಿ ಇಂತ ವ್ಯವಸ್ಥೆ ಇಲ್ಲ ಎಲ್ಲ ಕೇವಲ ಹಣ ರಾಜಕೀಯ ಲಾಭ ದ ಮೇಲೆ ನಿಂತಿದೆ . ಬಿಗಿಯಾದ ಕಾನೂನು ಗಳು ಮತ್ತು ಜನ ಜಾಗೃತಿ ಇಂದ ಸಮಸ್ಯೆ ಪರಿಹಾರ ಕಂಡಿತು , ಮುಖ್ಯ ವಾಗಿ ತಪ್ಪಿಸ್ಥ ರಿಗೆ ಶಿಕ್ಷೆ ಆಗಬೇಕು .
 

‍ಲೇಖಕರು G

26 July, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading