ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಹೆಣ್ಣಿನ ದೇಹ

Pablo Neruda’s ‘Body of a women’

ಕನ್ನಡಕ್ಕೆ : ನರೇಂದ್ರ ಶಿವನಗೆರೆ

ಒಂದು ಹೆಣ್ಣಿನ ದೇಹ, ಬಿಳಿಯ ಉಬ್ಬುಗಳು, ಬಿಳಿ ತೊಡೆ!
ಅವಳೆ ಒಂದು ಪ್ರಪಂಚ, ಶರಣಾಗಿ ಬಿದ್ದಂತೆ,
ನನ್ನ ಒರಟು ಮೈಯಿ ನಿನ್ನ ಬಗೆದು,
ಚಿಮ್ಮಿ ತೆಗೆದ ಗರ್ಭದಾಳದ ಸತ್ಯ!

ನಾನೊಂದು ಒಂಟಿ ಸುರಂಗ, ಬಾವಲಿಗಳೆಲ್ಲ ಹೊರಹಾರಿ
ದಟ್ಟ ಅಂಧಕಾರ ನನ್ನ ಸುತ್ತಿದಾಗ!
ಬದುಕಲು ನನಗೆ ಸಿಕ್ಕಿದ್ದು ನೀನು, ನನ್ನ ಆಯುಧ,
ನನ್ನ ಬಿಲ್ಲಿಗೆ ಬಾಣ, ಕವಣೆಗೆ ಒಂದು ಕಲ್ಲು!

ದ್ವೇಷ ತೀರಿದ ಮೇಲೆ ನೀನು ನನ್ನ ಪ್ರೀತಿ.
ಚರ್ಮದ ದೇಹ, ಹಸಿರು ಪಾಚಿ! ಮುಲುಗುಡುವ, ಗಟ್ಟಿ ಹಾಲು,
ಮಧುಪಾತ್ರೆಯಂತೆ ನಿನ್ನ ಮೊಲೆ! ನೋಟವಿಲ್ಲದ ನಿನ್ನ ಕಣ್ಣುಗಳು
ಹೊಕ್ಕಳ ಕೆಳಗಿನ ಗುಲಾಬಿ ಹೂ! ನಿನ್ನ ದನಿ, ಮೆದು ಮತ್ತು
ನೋವು!

ನನ್ನ ಹೆಣ್ಣಿನ ದೇಹ, ಅವಳ ಉದಾರತೆಯಲ್ಲಿ ಬದುಕುವ ನಾನು.
ದಾಹ, ಎಣೆಯಿಲ್ಲದ ಬಯಕೆ, ಚಂಚಲ ಹಾದಿ!
ಕತ್ತಲ ನದಿಪಾತ್ರಗಳಲ್ಲಿ ಅನಂತ ದಾಹ ಹರಿಯುತ್ತಾ,
ನಿಶಕ್ತಿ ಮೂಡಿ, ಅನಂತ ನೋವು!

‍ಲೇಖಕರು avadhi

2 July, 2019

1 Comment

  1. Siraj Ahmed

    Reads like the original . Congratulations

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading