ಆದರೆ.. ಆದರೆ..!

ಚಿ ಜ ರಾಜೀವ

ಒಂದು ಮನೆಯ ಮಾತುಕತೆ:

ಮಗಳಿಂದ ಪತ್ರಿಕೆಯ ತಲೆಬರಹಗಳ ಓದುವಿಕೆ ಶುರು:

ಕನ್ನಡ ಶಾಲಾ ಪಠ್ಯದಲ್ಲಿ-

ಬಲಪಂಥೀಯ ಮೇಲ್ಜಾತಿಯ ಲೇಖಕರೇ ತುಂಬಿ ತುಳುಕುತ್ತಿದ್ದಾರೆಂದು ಪ್ರಗತಿಪರ, ಎಡಪಂಥೀಯ ಮೇಲ್ಜಾತಿ
ಸಾಹಿತಿಗಳ ಹಲ್ಲು ಕಡಿತ…

ಅಣ್ಣನಿಗೆ ಅವಮಾನವಾಗಿದೆ ಎಂದು ಶರಣರ ಸಿಟ್ಟು…

ರಸ ಋಷಿಗೆ ಅವಮಾನ ಎಂದು ಭೈರವ ಶ್ರೀಗಳು ಅಸಮಾಧಾನ…

ಮಹಾನಾಯಕರಿಗೆ ಅಗೌರವ ತೋರಿಸಲಾಗಿದೆ ಎಂದು ಬಹುಜನರ ಆಕ್ರೋಶ…

ಕೇರಳ-ಕರ್ನಾಟಕ ಸುಧಾರಕ
ಗುರುವಿನ ಪಠ್ಯ ಕಡಿತ ಎಂದು ಶಿಷ್ಯರ ಕ್ರೋಧ…

ಸಿಟ್ಟಿಗೆ ಪ್ರತಿಯಾಗಿ ಪಠ್ಯ ವಾಪಸಾತಿ ಚಳವಳಿ ಶುರು‌..

ಓದುವಿಕೆ ಮುಗಿದ ಬಳಿಕ ತಲೆಬರಹಗಳ ಕುರಿತು ಅಪ್ಪ ಅಮ್ಮನ ಚರ್ಚೆ :

ಅಪ್ಪಾ:
“ಇಷ್ಟವೋ ಕಷ್ಟವೋ, ಈ ಎಲ್ಲರಿಗೂ ಸಿಡಿದೇಳಲು ಕಾರಣವಿದೆ, ಗಟ್ಟಿಯಾಗಿ ಹೇಳಿಕೊಳ್ಳಲು ಅವರವರ ಜಾತಿಯ ಅಸ್ತಿತ್ವವಿದೆ. ಆದರೆ,
ನಮಗೇನಿದೆ ?
ನಮ್ಮಂಥ ಸಣ್ಣ ಪುಟ್ಟ ನೂರಾರು ಜಾತಿಯವರಿಗೆ ಅಸ್ಮಿತೆ ಏನಿದೆ? ನಮ್ಮವ ಎಂದು ಹೇಳಿಕೊಳ್ಳಲು ಪಠ್ಯದಲ್ಲಿ ನಮ್ಮ ಜಾತಿಯ ಒಬ್ಬ ಮಹಾತ್ಮನೂ ಇಲ್ಲ. ಹಾಗಾಗಿ,ಕಿತ್ತಾಡಲೂ ನಮಗೆ ಅವಕಾಶವೂ ಇಲ್ಲ. ಈ ಜಾತಿ ಜನಗಳ, ಅವರ ಮಹಾತ್ಮರ ಇರುವಿಕೆಯನ್ನು
ಓದಬೇಕಷ್ಟೆ.ನಾವೇನಿದ್ದರೂ ಈ ಸೆಣಸಾಟ ಸಂಭ್ರಮಗಳ ವೀಕ್ಷಕರಾಗಬೇಕಷ್ಟೆ !

ಅಪ್ಪನ ಮಾತಿಗೆ ನನ್ನಮ್ಮ ಕೆರಳಿದಳು-
“ಅಯ್ಯೋ ಅದೇನು ಮಾತು ಅಂಥ ಆಡ್ತಿಯಾ ಮಾರಾಯ ? ಈ ಎಲ್ಲ ಮಹಾತ್ಮರನ್ನು ಏನೆಂದುಕೊಂಡಿರುವೆ. ಅವರೆಲ್ಲಾ ನಮ್ಮವರೇ. ಮನುಷ್ಯ ಮತದವರು, ಮನುಕುಲದ ಮಾರ್ಗದರ್ಶಕರು….

ಮಾತು ಮುಂದುವರಿಸಿದ ಅಪ್ಪ
“ನಿಜಾ, ಅವರೆಲ್ಲರೂ ನಮ್ಮವರೇ, ನಮ್ಮ ಮತದವರೇ, ವಿಶ್ವ ಪಥದವರೇ…ಆದರೆ,
ಆದರೆ…!

ಅಮ್ಮ: ಆದ್ರೆ-ಹೋದ್ರೆ ಏನೂ ಇಲ್ಲ. ಅವರಿಗೆ ಅವಮಾನವಾದರೆ, ಅವರನ್ನು ಯಾರಾದರೂ ಸಂಕುಚಿತಗೊಳಿಸಿದರೆ, ಮೊದಲು ನಾವು ದನಿ ಎತ್ತೋಣ‌ !

ಅಪ್ಪನ ಪ್ರತಿಕ್ರಿಯೆ: ಆಯ್ತು ಮಾರಾಯ್ತಿ.
ನಿನ್ನ ಹೆಣ್ತನದ ಮಾತಿಗಾದರೂ ದನಿ ಎತ್ತುವೆ..‌

ಮಗಳ ಪ್ರಶ್ನೆ: ಹೌದು, ಈ ತಾಯ್ತನ ಅಂದ್ರೆ ಏನಪ್ಪಾ ?

ನಾನೆಂದೆ: ಎಲ್ಲರನ್ನೂ ಒಳಗೊಳ್ಳುವ ಗುಣವಿರಬಹುದು ಮಗಳು…

ಮಾತುಕತೆ ಮುಕ್ತಾಯ !

‍ಲೇಖಕರು Admin

June 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: