ಕೃಷ್ಣಮೂರ್ತಿ ಬೆಳಗೆರೆ

ತದ್ಕೊಡಬೇಕು ಮಾಮ ನಂಗೆ
ತಂದ್ಕೊಡಬೇಕು ಮಾಮ ನಂಗೆ
ಮುತ್ತು ಕೊಡ್ತೀನಿ ಚೆಲ್ಲಾಡದಂಗೆ ||ಪ||
ಸೂರ್ಯ ಚೆಂಡು ಚಂದ್ರನ ತುಂಡು
ಬೆಂಡು ಬತ್ತಾಸು ತಂದ್ಕೊಡಬೇಕು ||ತ||
ಬಾನಿನ ಹಾಡು ಮೋಡದ ಗೂಡು
ಬೇಲಿ ಚಿಟ್ ಜೇನ್ ತಂದ್ಕೊಡಬೇಕು||ತ||
ಮಳೆಯ ನೀರು ಸೊಗದೆ ಬೇರು
ಬಿಸಿ ಬಿಸಿ ಬೆಲ್ಲ ತಂದ್ಕೊಡಬೇಕು||ತ||
ಹೂವಿನ ಲಂಗ ಚಿಟ್ಟೆಯ ಅಂಗಿ
ಬಣ್ಣದ ಬಟ್ಟಲು ತಂದ್ಕೊಡಬೇಕು||ತ||
ಕಾಮನಬಿಲ್ಲು ತಂದ್ಕೊಡಬೇಕು
ಬ್ಯಾಗಿನ ಒಳಗೆ ಬಚ್ಚಿಡಬೇಕು||ತ||
ನವಿಲಿನ ಗರಿಗಳ ತಂದ್ಕೊಡಬೇಕು
ಪುಸ್ತಕದೊಳಗೆ ಮುಚ್ಚಿಡಬೇಕು||ತ||
ಕೊಳಲಿನ ಕೋಲು ತಂದ್ಕೊಡಬೇಕು
ಉಸಿರಲಿ ಹೆಸರ ಬರೆದಿಡಬೇಕು||ತ||






ಕವಿತೆ ಚೆನ್ನಾಗಿದೆ.
ಹೀಗೆ ಬರೆಯುತ್ತಿರಿ.