ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಒಂದು ದಿನ ಮುಕ್ತಳಾಗುತ್ತಾಳೆ…' – ವಿದ್ಯಾ ಕುಂದರಿಗಿ ಕವನ


ವಿದ್ಯಾ ಕುಂದರಿಗಿ

ಹೌದು….
ಇವಳೊಂದು ದಿನ
ಎಲ್ಲ ಬಂಧನ ಕಳಚುತ್ತಾಳೆ.
 
ತೊಟ್ಟ, ಉಟ್ಟ, ಹೊರಿಸಿದ, ಹೇರಿದ,
ಕಟ್ಟಿದ ಪದವಿ ಪಟ್ಟಗಳೆಲ್ಲವನ್ನೂ ಕಳಚುತ್ತಾಳೆ.
 
ದೇಹದ ಅಂಗುಲಂಗುಲವನೂ
ಮುಚ್ಚಿಡು ಎಚಿದ್ಹೇಳಿ
ಎಲ್ಲವನ್ನೂ ತೆರೆದು ತೋರುವ ಈ
ಐದಂಗುಲ ಪರದೆಯನ್ನ.
 
ಮಂಗಳದ ಹೆಸರಿನಲ್ಲಿ
ಚಿತ್ರವಿಚಿತ್ರ ರೂಪದಲ್ಲಿ
ಅತ್ಯಧಿಕ ಬೆಲೆಗೆ
ಬಿಕರಿಗೊಳ್ಳುವ ಸಂಕೇತಗಳನ್ನ,
 
ಮಾನವಿಯತೆ ಮರೆತ
ವಿಕೃತಿಯ ಗೋರಿ ಸಂಸೃತಿ,
ಪರಂಪರೆಗಳೇ ಕೊಲೆಗೈದ
ಕುರುಹು…. ರಕ್ತ ತಿಲಕವನ್ನ,

ಚಿಮ್ಮಿದರೂ ಕಾಲ್ತೊಡಕುವ,
ಹೊದೆದರೂ ಕೈ ತೊಡಕುವ,
ಊ…ದ್ದವೆಂದು ಕಾಲಹರಣಿಸಿ ಹೆಣೆದು
ಕಟ್ಟಿದರೂ ಕಣ್ತೊಡಕುವ,
 
ಪ್ರೀತಿ,ಪ್ರೇಮ,ಮಮತೆ,
ವಾತ್ಸಲ್ಯ , ಜ್ಞಾನಗಳ
ಹರಿವಿಗೆ-ಹಸಿವಿಗೆ ಹಾಕಿದ
ಒಡ್ಡು-ಒರತೆಗಳನ್ನ,
 
ಎಲ್ಲವನ್ನೂ ಕಳಚಿ
ಬಂಧನದಿಂದ ಮುಕ್ತಳಾಗುತ್ತಾಳೆ
 
ಬಯಲಾದರೂ ಸರಿಯೇ
ಕಳಚಿದವುಗಳಲ್ಲಿಯೇ
‘ನ ಅರ್ಹತಿ’ ಎನ್ಮ್ನತ್ತಲೇ
ಇರುವವರ ಸುತ್ತಿ ಅಡಗಂಟು ಕಟ್ಟುತ್ತಾಳೆ,
ಬಯಲಲ್ಲೇ ಬೆಂಕಿ ಇಡುತ್ತಾಳೆ
ಮಹಿಳೆ ಕಹಳೆಯಾಗುತ್ತಾಳೆ
ಹೌದು…..
ಇವಳೊಂದು ದಿನ
ಬಂಧನ ಕಳಚುತ್ತಾಳೆ.
 

‍ಲೇಖಕರು G

14 January, 2014

4 Comments

  1. amardeep.p.s.

    chennagide….kavana…madam.

  2. MANJUNATH.P

    nice…

  3. Anonymous

    Nasrin
    january 14,2014.7.42pm
    very,very nice..

  4. h a patil

    – ಹೌದು ಇವಳೊಂದು ದಿನ ಬಂಧನ ಕಳಚುತ್ತಾಳೆ, ಈ ಕವನದ ಅರ್ಥಘಗರ್ಭಿತ ಸಾಲುಗಳಿವು ಮನ ತಟ್ಟಿದವು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading