ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ದಾರಿಯ ಪಯಣ…

ಶಿವಶಂಕರ ಬಣಗಾರ

ಒಬ್ಬಾತ ನಡೆಯುತ್ತಾ ಹೋದ
ಮತ್ತೊಬ್ಬ ಮಗದೊಬ್ಬ ಸೇರಿಕೊಂಡರು
ಹಾದಿ ಸವೆದಂತೆಲ್ಲಾ ಗುಂಪು ದೊಡ್ಡದಾಯ್ತು
ಹಾದಿಯ ಪಯಣ ಮುಗಿದಿರಲಿಲ್ಲ

ಊರ ಬಂದಲೆಲ್ಲಾ ಮಾತು ಜಾಸ್ತಿ ಆಯ್ತು
ಗುಂಪಿನಲ್ಲಿದ್ದವರು ಕೆಲವರು ಕಳಚಿಕೊಂಡರು;
ಮತ್ತೂ ಕೆಲವರು ಸೇರಿಕೊಂಡರು
ಪಯಣ ಸಾಗಿತ್ತು ಗಮ್ಯ ಸ್ಥಾನ ದೂರವಿತ್ತು

ದಾರಿಬುತ್ತಿಗಳು ವೈವಿಧ್ಯಮಯವಾಗಿದ್ದವು
ಉದ್ದದ ಹಾದಿಯಲ್ಲಿ ಖಾಲಿಯಾದವು
ಬುತ್ತಿ ಖಾಲಿಯಾಯ್ತೆಂದು ಕೆಲವರು ಕಳಚಿಕೊಂಡರು

ಕೆಲವರಲ್ಲಿ ಅನ್ನವಿತ್ತು ಮಾಂಸವಿತ್ತು
ಮಾಂಸ ತಿನ್ನದವರು ಕಳಚಿಕೊಂಡರು


ನಡಿಗೆ ವೇಗ ತೀವ್ರವಾಯ್ತು
ಆಯಾಸಗೊಂಡವರು ಅಲ್ಲೇ ಉಳಿದುಕೊಂಡರು
ಹಾದಿ ಪಯಣ ಮುಗಿದಿರಲಿಲ್ಲ

ಸಂಜೆಯಾಯ್ತು ಕೆಲವರು
ಕತ್ತಲಿನ ಭಯಕ್ಕೆ ಹಿಂದಕ್ಕುಳಿದರು
ಹಾದಿ ಪಯಣ ಮುಗಿದಿರಲಿಲ್ಲ

ರಾತ್ರಿಯಾಯ್ತು ಗುಂಪು ಮಲಗಿತು
ಮೊದಲ ಹೆಜ್ಜೆ ಶುರುವಿರಿಸಿದಾತ ಮಲಗಲಿಲ್ಲ
ಎಚ್ಚರ ಇರುವವರೊಂದಿಗೆ
ಹೆಜ್ಜೆ ಮುಂದುವರೆಸಿದ

ಮಲಗಿದವರು ಮುಂಜಾನೆ ಎದ್ದರು
ಮಾತಾಡಿಕೊಂಡರು
ಹೋಗುವುದೆಲ್ಲಿಗೆ ?

‍ಲೇಖಕರು Avadhi

30 August, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading