ನನ್ನ ಬದುಕಿನಲ್ಲಿ ಒಂದು ಜಾದೂ ನಡೆದು ಹೋಯ್ತು ಎಂದವರು ಪ್ರೊ ಬಿ ಎ ವಿವೇಕ ರೈ. ತಾವು ಜರ್ಮನಿಯ ವೂರ್ಜ್ ಬರ್ಗ್ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕರಾಗಿ ತೆರಳುವ ಸುದ್ದಿ ಹರಡುತ್ತಿದ್ದಂತೆ ನಡೆದ ಘಟನೆಗಳನ್ನು ಅವರು ಬಣ್ಣಿಸಿದ್ದು ಹೀಗೆ.
ಶರವೇಗದಲ್ಲಿ ಮೂರು ಪುಸ್ತಕಗಳ ಪ್ರಕಟಣೆ, ಎರಡು ನಗರಗಳಲ್ಲಿ ಅಭಿನಂದನೆ, ಎಷ್ಟೊಂದು ಜನರ ಪ್ರೀತಿ ಪ್ರವಾಹ. ಇದು ಜಾದೂ ಅಲ್ಲದೆ ಮತ್ತೇನು? ಎಂಬ ಪ್ರಶ್ನೆ ಅವರದ್ದು.
ಆ ವೇಳೆಗೆ ವೇದಿಕೆ ಹತ್ತಿದ್ದು ಕುದ್ರೋಳಿ ಗಣೇಶ್. ತನ್ನ ಜಾನಪದ ಜಾದೂ ಮೂಲಕ ಜನರನ್ನು ವಿಸ್ಮಯಕ್ಕೆ ತಳ್ಳಿದಾತ. ಕೈಯಲ್ಲಿ ಇದ್ದ ಬೋಗುಣಿ ವಿವೇಕ್ ರೈ ಅವರ ಮುಂದೆ ಹಿಡಿದ. ಗಂಟೆಯ ಮೂಲಕ ಕಿಣಿ ಕಿಣಿ ನಾದ ಹೊರಡಿಸುವಂತೆ ಹೇಳಿದ. ಒಂದೇ ಕ್ಷಣ ಕಾಗದದ ತುಂಡೊಂದು ಹೂವಿನ ಹಾರವಾಗಿ ಬದಲಾಯ್ತು. ರೈ ಕೊರಳಿಗೆ ಸಮರ್ಪಿಸಿದ. ಜಾದೂ, ಜಾದೂ ನಡೆದು ಹೋಯ್ತು
ಇದೆಲ್ಲ ಆದದ್ದು ಮಂಗಳೂರಿನಲ್ಲಿ. ಈ ಪ್ರೀತಿಯ ಘಳಿಗೆಯ ಇನ್ನಷ್ಟು ಚಿತ್ರಗಳು ‘ಓದು ಬಜಾರ್’ ನಲ್ಲಿ







ಪ್ರೊ. ರೈ ಅವರೂ ತಮ್ಮ ಜ್ಞಾನ ಮತ್ತು ಪ್ರಭೆಯಿಂದ ಶಿಷ್ಯರನ್ನು ಮೋಡಿ ಮಾಡಬಲ್ಲ ಜಾದೂಗಾರರೇ ಹೌದು. ನಿನ್ನೆ ಅವರ ಮಾತು ಕೇಳುತ್ತಿದ್ದ ನನಗೆ ಮತ್ತೊಮ್ಮೆ ಹಾಗನಿಸಿತು.