ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಗಜ಼ಲ್..

ಗಜಲ್

ಪ್ರಕಾಶ ಬಿ ಜಾಲಹಳ್ಳಿ

ಮೀಸಲ ಕಣ್ಣುಗಳಲ್ಲೀಗ ಕನಸುಗಳು ಹೆಚ್ಚುತ್ತಿವೆ ನಿನದೆ ನೆನಪಲ್ಲಿ
ಮೌನದ ವೀಣೆಯೊಂದು ರಾಗಗಳ ಬೇಡುತ್ತಿವೆ ನಿನದೆ ನೆನಪಲ್ಲಿ
 
ನೀ ಬಿತ್ತಿದ ಬಯಕೆಯ ಬೀಜಗಳು ಸಸಿ ಹೊಡೆದು ಬೆಳೆದಿವೆ
ಗೋಡೆಕಟ್ಟಿದರೂಯೌವ್ವನದ ಬಯಕೆಗಳು ಇಣುಕಿ ನೋಡುತ್ತಿವೆ ನಿನದೆ ನೆನಪಲ್ಲಿ

ಕನ್ನಡಿಕಂಡ ಕಣ್ಣುಗಳು ಈಗ ರೆಪ್ಪೆತಬ್ಬದೆ ಧ್ಯಾನಕ್ಕಿಳಿದಿವೆ
ನೆಲ ತಬ್ಬಿದ ಹೆಜ್ಜೆಗಳು ಬೇರಿನಂತೆ ಇಳಿಯುತ್ತಿವೆ ನಿನದೆ ನೆನಪಲ್ಲಿ
 
ಹೆಜ್ಜೆ ಮೂಡದ ಹಾದಿಯಲ್ಲಿ ಈಗ ನಿನ್ನದಾರಿಯನ್ನೆಕಾಯುತ್ತಿದ್ದೇನೆ
ಚಂದ್ರನು ಹುಡುಕುವಚಕೋರದಂತೆ ಬಯಕೆಗಳು ಹುಡುಕುತ್ತಿವೆ ನಿನದೆ ನೆನಪಲ್ಲಿ
 
ಕತ್ತಲು ಬೆಳಕುಗಳ ಕಣ್ಣುಗಳು ಗುರುತಿಸದೆ ಹೋಗುತ್ತಿವೆ
ಮನದಿ ಹೊತ್ತಿದ ಮೊಂಬತ್ತಿಯ `ಪ್ರಕಾಶ’ಗಳೀಗ ಬಿಕ್ಕುತ್ತಿವೆ ನಿನದೆ ನೆನಪಲ್ಲಿ
 

‍ಲೇಖಕರು avadhi

16 October, 2013

3 Comments

  1. nagraj.harapanahalli

    ಚೆಂದಾಗಿ ಬಂದಿದೆ ಚೆಲುವಿನ ಗಜಲ್.

    • ಪ್ರಕಾಶ ಬಿ. ಜಾಲಹಳ್ಳಿ

      ಧನ್ಯವಾದಗಳು ಸರ್.

  2. Anonymous

    very nice prakash Jayashree b kadri

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading