ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಕವಿತೆ…

ಕವನ

– ಅಕ್ಷಯ ಕಾಂತಬೈಲು

ಹಾಲು ಕುಳಗಳ ಸಂಧಿ
ಆವತ್ತು ಪಟಾಪಟಿ ಚಡ್ಡಿ
ಪರಿಕಟೆ ಬನಿಯನ್ ಹಾಕಿ
ಸಣಕಲು ಎತ್ತುಗಳ
ಮೈ ದಡವುತ್ತಾ ಗದ್ದೆ ಉಳುತ್ತಿದ್ದೆ
ಬಾನ ಪರಿದಿಯ ಹೊಳೆಬದಿ
ಉತ್ತ ನೇಗಿಲ ತಿಕ್ಕಿ ತೊಳೆಯುತ್ತಿದ್ದೆ
 
ಕನಸಲ್ಲೂ ಯೋಚಿಸಿರಲಿಲ್ಲ;
ದೇವತೆಯೇ ಪ್ರತ್ಯಕ್ಷಳಾಗಿ
ಹದವಾಗಿ ಉಳುತ್ತಾ ಉಳುತ್ತಾ
ಹೋ… ಹೊಯೈ ಎಂದು
ಹುರಿದುಂಬಿಸುವ, ಎದೆಯುಬ್ಬಿಸುವ
ನನ್ನೀ ಕೊಬ್ಬಿದ ದಿನಗಳು
ಲಗ್ಗೆಯಿಡಬಹುದೂಂತ

ಎಂತ ಕತೆ ಮಾರಾಯ್ತಿ,
ಕೆಚ್ಚಲು ಹಿಂಡುತ್ತಾ ಹಾಲು
ಕರೆಯುತ್ತಿದ್ದಾಕೆ ಮತ್ತು
ಸಾವಯಾವ ಪರಿಮಳ
ಹೊಮ್ಮಿಸುವ ಅಳಕ್ಕ ಬಂಗಾರವೇ
 
ಅಬ್ಬಾ! ಇವತ್ತು ನಿನ್ನ ಕೈಯಲಿ
ಭೂತವೇ ಅಡರಿದೆ
ನಾನಂತೂ ಹಳ್ಳಿ ದೂರ ಮಾಡಿ
ಬಂದರೆ……
ಚಾಲಾಕಿಯೇ ಪಟ್ಟಣದಲ್ಲೂ
ಹಾಲು ಮಾರುತ್ತಾ, ಎಮ್ಮೆ
ಮೇಯಿಸುತ್ತಾ ಇದ್ದೀಯಲ್ಲೇ
ಕಾಮಧೇನು!
 
 

‍ಲೇಖಕರು G

25 June, 2015

9 Comments

  1. noorullathyamagondlu

    ಚೆನ್ನಾಗಿದೆ.

  2. smitha

    Chennagide akshaya…

  3. ಅಕ್ಕಿಮಂಗಲ ಮಂಜುನಾಥ

    ಪದ್ಯ ಇಷ್ಟವಾಯ್ತು.

  4. mmshaik

    uttama kavana..

  5. ಮುದಾಳೆ ಬೀದರ

    ಪ್ರೀತಿಯ ನನ್ನ ಉಸಿರು

  6. Hanumanth Ananth Patil

    ಅಕ್ಷಯರವರಿಗೆ ವಂದನೆಗಳು
    ಇದು ಬರಿ ಕವಿತೆಯಲ್ಲ ನಮ್ಮ ಗ್ರಾಮೀಣ ಪರಂಪರೆ ಸಾಗಿ ಬಂದುದನ್ನು ನಿರೂಪಿಸುವ ಒಂದು ದೃಶ್ಯ ಕಾವ್ಯ. ಕವನದ ನಿರೂಪಣೆ ಸರಳವಾಗಿದ್ದರೂ ಅದು ಮಾಡಿಸುವ ದರ್ಶನ ಅನನ್ಯವಾದುದು.

  7. shyamala kashyap

    Nice one Akshay

  8. akshaya

    thanks for all of your lovely wishes.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading