ಬೆಂಕಿಗೆ ಆಹುತಿಯಾದವರ ಭಕ್ತಿಗೀತೆಗಳು

ಕೊಂಕಣಿ ಮೂಲ: ಜೋ.ಸಿ.ಸಿದ್ದಕಟ್ಟೆ
ಕನ್ನಡಕ್ಕೆ: ಜಾನ್ ಸುಂಟಿಕೊಪ್ಪ
ರಾತ್ರಿ
ಒಂದು ಭಯಂಕರ ಕನಸು ಬಿದ್ದಿರಬೇಕು
ಊರು ಕಕ್ಕಾಬಿಕ್ಕಿಯಾಗಿದೆ
ಬೆಳಗಿನ ಝಾವದಲ್ಲೇ!

ಊರಲ್ಲವಿದು
ಸುಡುಗಾಡು!
ಇಲ್ಲಿಯ ಬೆಂಕಿಯೂ ಸ್ವಾರ್ಥಿಯೇ;
ಅದು ಹೂವನ್ನೂ
ಮಾಲಿಯನ್ನೂ ಬಿಡದೆ ನುಂಗುತ್ತದೆ-
ಕೊಳ್ಳಿಯಿಟ್ಟವರನ್ನು ಹೊರತು ಪಡಿಸಿ!
ಅವರ ಬಂದೂಕಿನ ತಪರಾಕಿಗೆ
ಪಾರಿವಾಳಗಳು ಹಾರಲೇ ಇಲ್ಲ,
ಅಸಲಿಗೆ ಪಾರಿವಾಳಗಳೇ ಇಲ್ಲವಲ್ಲಾ
ಎಲ್ಲಾ ಹದ್ದುಗಳಾಗಿವೆ,..ಹದ್ದುಗಳು!
ನಿನ್ನೆ ಜೀವಂತ ಸುಟ್ಟ
ಆ ಹಳ್ಳಿಯಲ್ಲಿ
ಇಂದು ಮುಂಜಾನೆ
ಎದುರುಬದುರಾದವರ ಮುಖ ವಿಕೃತ
ನೋಡಿಕೊಳ್ಳೋಣವೆಂದರೆ
ಒಂದು ಕನ್ನಡಿಯೂ
ಉಳಿದಿಲ್ಲ….!
ಜಾಗ್ರತೆ!?
ಬೂದಿ ಮುಚ್ಚಿದ ಮುಖಗಳನ್ನು
ವಿಕೃತ ಅನ್ನಬೇಡಿ,
ಆ ಬೂದಿ ಬಳಿದವರಾರು
ಎಂಬುದನ್ನು ಅರಿಯದ ಹೊರತು!





ತುಂಬಾ ಚೆನ್ನಾಗಿದೆ ಜಾನ್ ಸರ್
Thank you madam