ಲಕ್ಷ್ಮಣ ವಿ ಎ
ಸತ್ಯ ಯಾವೊತ್ತಿಗೂ
ಜೋರು ದನಿಯಲ್ಲಿ ಕಿರುಚುವುದಿಲ್ಲ
ಗೋಡೆ ಬರಹದ ಘೋಷಣೆಯಾಗುವುದಿಲ್ಲ,ಕಾನೂನಾಗುವುದಿ ಲ್ಲ
ಅದು ಬಯಲು ಭೂಮಿಯಲ್ಲಿ ಹರಿಯುವ
ನದಿಯಂತೆ ತಣ್ಣಗಿನ ನಮ್ಮೊಳಗಿನ ಪ್ರವಾಹ
ದೂರ ನಿಂತು ನೋಡುವವರಿಗೆ ನದಿ ನಿಂತಂತೆ
ತೋರಿದರೂ ಅದರ ಒಳಹರಿವಿನ ಒಡಲು
ವಿದ್ಯುತ್ತಿನ ಬೆಂಕಿ ಬೆಳಕನ್ನಿಟ್ಟುಕೊಂಡೇ ಚಲಿಸುವುದು
ದಣಿದು ಬಂದವರ ದಾಹ ಇಂಗಿಸಿ
ಕೊರಡು ಕೊನರಿಸಿ ಬರಡು ಹಯನಾಗಿಸಿ
ಬಯಲ ಹಸುರಾಗಿಸಿ
ಪ್ರತಿಯೊಬ್ಬರ ಅಂತರಂಗವ ಬೆಳಗುವ ದೀಪವಾಗಿ
ಅನ್ನ ಬೇಯಿಸುವ ಬೆಂಕಿಯಾಗಿ ……

ಸತ್ಯವನ್ನು ಸೀಳಲು ಆಯುಧಗಳು ಬೇಕಿಲ್ಲ
ನಮ್ಮ
ಒಳಗಣ್ಣು ತೆರೆದಿರಬೇಕಷ್ಟೇ.
ಈ ಲೋಕವ ಉದ್ದಾರ ಮಾಡುತ್ತೇನೆನ್ನುವ ದೊಡ್ಡ ದೊಡ್ಡ ಉದ್ಗ್ರಂಥಳು ಒಂದು ಮೌನದ ಎದಿರು
ಮಹಾತ್ಮನ ಎರಡು ಮಾತು ಅಥವ ಎರಡು ಸಾಲಿನ ಮೌನದಂತಹ ಕವಿತೆಯ ಮುಂದೆ ತಲೆಬಾಗುತ್ತವೆ.
ಗಾಂಧೀ ಎಂದರೆ ನನ್ನ ಪಾಲಿಗೆ
ಒಂದು ಒಂಟಿ ಸಾಲಿನ ಸ್ವಗತ ಮತ್ತು ಮೌನ ಬೆಳಕು.






ಕವಿತೆ ತುಂಬಾ ಚೆನ್ನಾಗಿ ದೆ ಲಕ್ಷಮಣ್ ಅವರೆ