ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದವಕಾಶ ಸಿಕ್ಕರೆ…

ಲಕ್ಷ್ಮಿ ಕೆ ಬಿ

ಕ್ಷಣಗಳಲ್ಲ, ದಿನವೇ ಉರುಳಿತು
ಯಾವಾಗ? ಹೇಗೆ? ಯಾಕೆ ಬಂದೆ?
ಎನ್ನುವ ಔಪಚಾರಿಕತೆಗೆ
ಯಾರ ಮನಸ್ಸೂ ತೆರೆದುಕೊಂಡಿಲ್ಲ

ನಾನೋ ಗಾಳಿಯ ರಭಸಕ್ಕೆ
ಮುಚ್ಚಿದಷ್ಟೂ ತೆರೆದುಕೊಳ್ಳುವ
ಕಿಟಕಿಯಂತೆ
ಒಂಟಿತನವಲ್ಲ, ಅನಾಥಪ್ರಜ್ಞೆ

ಸದ್ದು- ಗದ್ದಲವಿಲ್ಲ, ಸುತ್ತಲೂ
ಒಂದಷ್ಟು ಜನ ಮಲಗಿದ್ದಾರೆ
ಶಾಂತ ಸಾಗರದಲ್ಲಿ.
ಧ್ಯಾನ ಮಗ್ನರಾಗಿದ್ದಾರೆ
ನಿದ್ರಾ ಲೋಕದಲ್ಲಿ

ಯಾರು? ಯಾರಿಗೆ? ಯಾರಿದ್ದಾರೆ?
ಇಲ್ಲಿ ಹೃದಯ ಬಡಿತವೂ ಇಲ್ಲ.
ಹೆಜ್ಜೆ, ದನಿ, ಮಾತು
ಎಲ್ಲವೂ ಮೌನವಹಿಸಿವೆ.

ನನಗೋ ಇಲ್ಲಿ ಹಾರಾಡುವ ಬಯಕೆ,
ಹಾಡುವ ಇಂಗಿತ,ಎಲ್ಲರೊಡಗೂಡಿ
ಒಲವಿಂದ ಬಾಳ ಹೂಡುವ ಬಯಕೆ,
ಒಂದೇ ಒಂದು ಬಾರಿ ನನ್ನ ಹೃದಯ
ಬಡಿಯಲು ಅವಕಾಶ ಸಿಕ್ಕರೆ….

ಒಲವು

‍ಲೇಖಕರು Admin

13 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading