ಒಂದಲ್ಲ ­ಎರಡಲ್ಲ ­ನೂರಾರು ­ಅಣಬೆಗಳು!

ಅಣಬೆ ಎಂದರೆ ಪಂಚಪ್ರಾಣ’ ಎನ್ನುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ‘ನನ್ನ ಕುಪ್ಪಳಿ’ ಅಂಕಣದಲ್ಲಿ ಮಲೆನಾಡಿನ ಅಣಬೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

। ಕಳೆದ ಸಂಚಿಕೆಯಿಂದ ।

ನಾನಿನ್ನೂ ಹೇಮಾಂಗ­ಣದ ­ಅತಿಥಿ ಗೃಹದಲ್ಲಿ ಮಲ­ಗಿದ್ದೆ. ­ಗುಂಡ ಬಂದ­ವನೆ ಕಿಟ­ಕಿಯಲ್ಲಿ ­ಇಣುಕಿ ‘­ಸಾರು… ­ಸಾರು’  ಎಂದು ಆತುರದಲ್ಲಿ ­ಕೂಗಿದ.  ಎದ್ದು ನೋಡಿದರೆ ­ಅವನ ­ಮುಖ ಅಣಬೆಯಂತೆಯೇ ­ಅರಳಿತ್ತು.

‘­ಏನೋ ­ಗುಂಡಾ?’ ­ಎಂದು ಪ್ರಶ್ನಿ­ಸಿದೆ. ­ಅವನ ­ಅಷ್ಟೂ ಹಲ್ಲುಗಳನ್ನು ಪ್ರದರ್ಶಿಸುತ್ತ ‘­ಅಣಬೆ ­ಎದ್ದವೆ ­ಸಾರು’ ­ಎಂದ.  ಹೌದು ­ನಿನ್ನೆ ­ಒಳ್ಳೆಯ­ಉನಿ ಮಳೆ­ಯಾಗಿತ್ತು. ಆಕಾ­ಶದಲ್ಲಿ  ನಾಲ್ಕಾರು ­ಬಾರಿ ಸಾಧಾರಣ ­ಮಟ್ಟದ ­ಗುಡುಗು ­ಸದ್ದು  ಮಾಡಿತ್ತು. ಮಲೆನಾ­ಡಿ­ನಲ್ಲಿ ­ಒಂದು­ಬಾರಿ ಗುಡುಗಿದರೂ ­ಅದು  ಬೆಟ್ಟ ಬೆಟ್ಟಗಳನ್ನು ­ಹಾದು ಅನುರ­ಣಿಸುತ್ತದೆ.

­ಆದರೆ ­ಇಂದು ­ಅಣಬೆ ಏಳಬಹುದೆಂಬ ­ಯಾವ ಕಲ್ಪ­ನೆಯೂ ­ಇಲ್ಲದೆ ­ನಾನು ಮಲ­ಗಿದ್ದೆ. ­ಅಂದು ­ಗುಂಡ ‘­ನಾಳೆ  ಅಣಬೆ ಏಳಬಹುದು’ ­ಎಂದು ­ಆಸೆ ಹುಟ್ಟಿ­ಸಿದ್ದ­ನಾದರೂ ­ಅಣಬೆ  ಕಾಣದೆ ನಿರಾ­ಶ­ನಾ­ಗಿದ್ದ ­ನನ್ನನ್ನು ­ ಇಂದು ಪ್ರಸನ್ನಗೊಳಿಸುವ ಸಮಯ ­ಬಂದಿತ್ತು. ಆದ್ದ­ರಿಂದಲೇ ­ಅವನು ­ಆನಂದೋತ್ಸಾ­ಹ­ದಿಂದ   ನನ್ನನ್ನು ಬೆಳ್ಳಂಬೆಳಗ್ಗೆ ಎಚ್ಚರಿ­ಸಿದ್ದ.

­ನಾನು ­ಮೊದಲೇ ಅಣಬೆ, ಬಕ್ಕ ­ಎದ್ದು ­ಓಡಿದೆ. ­ಅಲ್ಲೇ ­ನನ್ನ ­ಕೊಠಡಿಯ ­ಎದುರಿಗೇ ­ಇರುವ ಮರಗಳ ­ಸಣ್ಣ ­ತೋಪಿನ  ಕೆಳಗೆ ಬೆಳ್ಳಗಿನ ಹೊಳೆಯುವ ­ಗುಳ್ಳೆಗಳು ಗೋಚ­ರಿ­ಸಿದವು.

ಹತ್ತಿರ ­ಹೋಗಿ ­ನೋಡಿದೆ, ­ಒಂದಲ್ಲ ­ಎರಡಲ್ಲ ­ನೂರಾರು ­ಅಣಬೆಗಳು! ­ಇನ್ನೂ ಪರಿಪೂರ್ಣ­ವಾಗಿ ಅರಳಿರದ  ಮೊಗ್ಗಿನ ಆಕಾರದ ­ಮೊಗಟು ಅಣಬೆಗಳೇ ಹೆಚ್ಚಿದ್ದವು. ­ಆ ಮೊಗರುಗಳು  ಹೆಚ್ಚು ­ರುಚಿ. ‘ಯಾವುದಾದರೂ ­ಚೀಲ  ತಂದು ­ಕಿತ್ತು ತುಂಬೋ’ ­ಎಂದು ­ಹೇಳಿದೆ.

‘­ಇರೀ ­ಸಾರು ­ಸಣ್ಣ ­ಬಿಸಿಲು ­ಬರಲಿ’ ­ಎಂದು ­ನನ್ನ ­ಉತ್ಸಾಹಕ್ಕೆ ­ತಡೆ ­ಒಡ್ಡಿದ. ಯಾರಾದರೂ ­ಬಂದು ಅಪಹ­ರಿ­ಸಿ ಬಿಟ್ಟಾರು ­ಎಂಬುದು ­ನನ್ನ ­ಆತಂಕ. ­ನಮ್ಮ  ಬಯಲು ಸೀಮೆಯಲ್ಲಿ ಅಣಬೆಗಳ ಒಡೆತ­ನಕ್ಕಾಗಿ ­ಜಗಳ ಗುದ್ದಾ­ಟಗಳೂ  ಆಗಿದ್ದನ್ನು ­ನಾನು ­ಕಂಡಿದ್ದೆ. ­ನನ್ನ ಆತಂ­ಕವನ್ನು ­ಕಂಡು ­ಗುಂಡ ­ನಗುತ್ತಾ ­ಹೇಳಿದ ‘­ಇವತ್ತು  ಎಲ್ಲೆಲ್ಲೂ ಬೇಕಾದಷ್ಟು  ಅಣಬೆ ­ಎದ್ದವೆ ­ಸಾರು, ­ಇಲ್ಲಿ ­ಯಾರೂ ­ಬರಲ್ಲ’ ­ಎಂದು ­ಅಭಯ ­ನೀಡಿದ.

ಬಿಸಿಲು ­ಬಂದ ­ನಂತರ ­ಗುಂಡ ­ಹಸಿ ­ನೆಲದ ಅಣಬೆಗಳನ್ನು ­ಕಿತ್ತು ­ಚೀಲಕ್ಕೆ ತುಂಬುತ್ತಿದ್ದರೆ ­ಅದೊಂದು  ಥರಾ ಹಿತವಾದ ಮುಗ್ಗುಲು ­ವಾಸನೆ ­ಸುತ್ತಲೂ ­ಅಡರಿತ್ತು. ­ಒಂದು ­ಚೀಲ  ಬರ್ತಿಯಾಯಿತು. ಏನಿಲ್ಲವೆಂದರೂ ಹತ್ತನ್ನೆರಡು ಕೆ.­ಜಿ.ಯಷ್ಟಾದರೂ ­ಇರಬಹುದು. ­ನನ್ನ ಸಂತೋ­ಷಕ್ಕೆ ­ಪಾರವೇ ­ಇರಲಿಲ್ಲ.  ಇದು ಬಯಸದೇ ­ಬಂದ ಭಾಗ್ಯ­ವಾ­ಗಿತ್ತು. ­ಇಂದು  ನಾವು ­ಕಿತ್ತಿದ್ದು ಯಾವ ­ಅಣಬೆ ­ಎಂಬುದು ­ನನಗೆ ತಿಳಿಯಲಿಲ್ಲ. ­

ಗುಂಡನ ­ಪ್ರಕಾರ ಮಲೆ­ನಾ­ಡಿ­ನಲ್ಲಿ ಮುಳ್ಳ­ಣಬೆ, ಕುಳಣಬೆ, ಚುಳ್ಳ­ಣಬೆ, ಹೆಗ್ಗಾಲಣಬೆ, ಹುಲ್ಲ­ಣಬೆ, ­ಮರ ­ಅಣಬೆ  ಮುಂತಾಗಿ ­ಅನೇಕ ­ಅಣಬೆಗಳು ­ಏಳುತ್ತವೆ. ­ಅಣಬೆ ­ಏನೋ ಸಂಗ್ರಹ­ವಾಗಿದ್ದವು. ಮುಂದೇನು ­ಮಾಡುವುದು?  ನೆಲದ ಸಿರಿಯಂತಿರುವ ­ಈ ಅಣಬೆಗಳನ್ನು ರುಚಿಗಟ್ಟುವಂತೆ ­ಅಡುಗೆ ­ಮಾಡಿ ಬಡಿಸುವ ­ಪಾಕ ­ಪ್ರವೀಣರು ­ಯಾರು? ­

­ಈ ­ಬಗ್ಗೆ ಚಿಂತಿ­ಸಿಯೇ ­ಇರಲಿಲ್ಲ. ­ಗುಂಡನ ­ಜೊತೆ ಸಮಾಲೋ­ಚಿ­ಸಿದೆ. ­ಇಲ್ಲಿ ­ನಮ್ಮ ­ಗುಂಡನ ವಿಚಾರವನ್ನೂ ­ಸ್ವಲ್ಪ  ಈಗಲೇ ಹೇಳಿ­ಬಿಡುವುದು ­ಒಳ್ಳೆಯದು. ಗುಂಡ­ನಿಗೀಗ  ಸುಮಾರು ನಲ­ವತ್ತೈದು ­ಐವತ್ತು ವರ್ಷಗ­ಳಿರಬಹುದು.  ನಮ್ಮ ವಿಶ್ವವಿದ್ಯಾಲಯದ ­ಕುವೆಂಪು ­ಅಧ್ಯಯನ ಕೇಂದ್ರದಲ್ಲಿ ­ಅವನೊಬ್ಬ ­ತಾತ್ಕಾಲಿಕ  ನೌಕರ. ಐವತ್ತಾದರೂ ಮದುವೆಯಾಗದ ­ಏಕಾಂಗಿ ­ಮನುಷ್ಯ. ­ಯಾಕೆ ­ಗುಂಡ ಮದುವೆ­ಯಾಗ­ಲಿಲ್ಲ? ­ಎಂದು ಪ್ರಶ್ನಿ ಸಿದರೆ ­ಸುಮ್ಮನೆ ­ತಲೆಕೆರೆದು ­ನಗುತ್ತಾ ನಿಲ್ಲುತ್ತಾನೆ.

‘­ಎಲ್ಲಾದರೂ ­ಹೆಣ್ಣು ನೋಡಿದರೆ ಮದುವೆ­ಯಾಗುತ್ತೀಯಾ?’ ­ಎಂದು ಒತ್ತಾ­ಯಿಸಿ ಕೇಳಿದರೆ ­‘ಆ ­ಟೈಮಲ್ಲಿ ­ಆಗ್ಲಿಲ್ಲ,  ಈಗ ಯಾರು ­ಹೆಣ್ಣು ­ಕೊಡ್ತಾರೆ, ­ಎಂಥಾ ­ಮದ್ವೆ ­ಬುಡಿ ­ಸಾರು’ ­ಎಂದು  ಆಧ್ಯಾತ್ಮ ಉಸುರುತ್ತಾನೆ. ­ಐದು  ಅಡಿ ಎತ್ತರವಿರಬಹುದು. ಸಣ­ಕ­ಲ­ನಾದರೂ ­ಗಟ್ಟಿ ಮುಟ್ಟಾ­ಗಿದ್ದಾನೆ. ­ಮೀನು ­ಬೇಟೆ, ­ಏಡಿ ­ಬೇಟೆ, ­ಜೇನು ಬೇಟೆಯಲ್ಲಿ  ನಿಸ್ಸೀಮ.  ಅವನಿಗೆ ಗೊತ್ತಿಲ್ಲದ ಗಿಡಮರಗ­ಳಿಲ್ಲ. ­ಎಲ್ಲೂ ­ಅಷ್ಟು ಸುಲಭ­ವಾಗಿ ಬೆಳೆಯುವು­ದಿಲ್ಲ ­ಎಂಬ ­ಪ್ರತೀತಿ  ಇರುವ ­ವಿಶೇಷ ಮರ­ಗಿಡಗಳನ್ನು ­ನರ್ಸರಿ ರೂಪದಲ್ಲಿ ­ಬೆಳೆಸಿ  ತೋರಿಸುವ ಪರಂಪರೆಯ ­ಜ್ಞಾನ ಅವನಿ­ಗಿದೆ.

ಪ್ರಾಣಿಗಳ ಚಲ­ನ­ವ­ಲನ ­ಅವನಿಗೆ ­ಚೆನ್ನಾಗಿ ­ಗೊತ್ತು. ಮಂಗದಂತೆ ­ಎಂಥ ­ಮರವನ್ನು ಹತ್ತ­ಬಲ್ಲ. ­ಅವನಿಗೆ ಗೊತ್ತಿರುವ  ಇಂಥ ­ನಾನಾ ನೈಪುಣ್ಯತೆಗಳಲ್ಲಿ ­ಶೇಕಡಾ ಒಂದರಷ್ಟು ­ಇಲ್ಲದ  ನಾವು ­ಲೋಕದ ­ದೃಷ್ಟಿಯಲ್ಲಿ ­ಮಹಾ ವಿದ್ಯಾವಂತರು! ­ಆದರೆ ­ಕೇವಲ ­ಅಕ್ಷರ ಗೊತ್ತಿಲ್ಲ­ದಿರುವ ಕಾರ­ಣಕ್ಕೆ ­ಅವನು ಅವಿದ್ಯಾ­ವಂತ, ನಿರ­ಕ್ಷರ ­ಕುಕ್ಷಿ, ಆದರೆ ­ವಿದ್ಯೆ  ಎಂಬುದು ಅನುಭ­ವದ  ಸಂಕೇತ, ­ಅಕ್ಷರ ಕೇವಲ ಅಹಂಕಾರದ ­ಸಂಕೇತ.

ಗುಂಡನ ವಿಷಯವನ್ನು ­ಇಷ್ಟೆಲ್ಲಾ ­ಯಾಕೆ ಹೇಳಿದೆ­ನೆಂದರೆ ­ಅವನಿಂದ ­ನನ್ನ ­ಅಣಬೆ ­ಅಡುಗೆ ಸಾಧ್ಯ­ವಿಲ್ಲ  ಎಂಬುದನ್ನು ತಿಳಿಸುವುದಕ್ಕಾಗಿ. ­ಆ ­ಒಂಟಿ ­ಜೀವಿಯ ­ಮೇಲೆ ­ಆ ­ಭಾರ  ಹೊರಿಸಲು ­ನನಗೆ ಇಷ್ಟವಿರ­ಲಿಲ್ಲ. ಹಾಗಾದರೆ  ಏನು ­ಮಾಡುವುದು? ­ಅಷ್ಟರಲ್ಲಿ ­ಗುಂಡನೇ ­ಒಂದು ಪರಿ­ಹಾರ ಸೂಚಿ­ಸಿದ. ­ನಮ್ಮ ­ಕೇಂದ್ರದ ­ಮತ್ತೊಬ್ಬ  ತಾತ್ಕಾಲಿಕ ಕೆಲ­ಸದ ­ಹುಡುಗಿ  ಮಲ್ಲಿಕಾ ಮನೆಗೆ ­ಕೊಟ್ಟು ­ಅಣಬೆ ­ಪಲ್ಯ ಮಾಡಿಸುವುದು ­ಅವನ ಸೂಚ­ನೆ­ಯಾ­ಗಿತ್ತು. ­

ನಾನೂ ಯೋಚಿ­ಸಿದೆ, ­ಆದರೆ ­ನನಗದು ­ಸರಿ ಕಾಣ­ಲಿಲ್ಲ. ­ಮಲ್ಲಿಕಾ ­ನಮ್ಮ ­ಕಚೇರಿಯ ಹುಡುಗಿ­ಯಾ­ಗಿರುವುದ­ರಿಂದ  ಇಂಥ ವಿಷಯಕ್ಕೆಲ್ಲ ಬಳ­ಸಿಕೊಳ್ಳುವುದು ಸರಿಯಲ್ಲ,  ಅಲ್ಲದೆ ಇತ್ತೀಚೆಗಷ್ಟೇ ‘­ಮೀನಿನ ­ಪಲ್ಯ’­ವನ್ನು ­ಅವರ ಮನೆ ಯಿಂದಲೇ ­ತಂದು ಕೊಟ್ಟಿದ್ದಾರೆ. ಆದ್ದ­ರಿಂದ ­ಅಲ್ಲಿಗೆ ­ಕೊಡುವುದು ­ಬೇಡ ­ಎಂದು ತೀರ್ಮಾ­ನಿ­ಸಿದೆ.

ಹೀಗೆ ಆಕಸ್ಮಿ­ಕ­ವಾಗಿ ­ಸಿಕ್ಕ ­ಬೇಟೆಯನ್ನು ಮುಂದಿಟ್ಟುಕೊಂಡು ಜಿಜ್ಞಾ­ಸೆಯಲ್ಲಿರುವಾಗಲೇ ­ನಮ್ಮ ­ಅದೃಷ್ಟವೋ  ಎಂಬಂತೆ ಬೆಕ್ಕನೂರ ­ಸುಬ್ಬಣ್ಣ ­ಅಲ್ಲಿ ಪ್ರತ್ಯ­ಕ್ಷ­ವಾದರು.  ಬೆಕ್ಕನೂರು ಕುಪ್ಪಳಿ­ಯಿಂದ ­ಕೇವಲ ­ಒಂದು  ಮೈಲು ದೂರದಲ್ಲಿರುವ ­ಎರಡು ಮೂರು ಮನೆಗಳ ­ಹಳ್ಳಿ. ಗಡಿ­ಕಲ್ಲಿಗೆ ಅಂಟಿಕೊಂಡಂ­ತಿದೆ. ಗಡಿ­ಕಲ್ಲು ತೀರ್ಥ­ಹಳ್ಳಿ  ಮತ್ತು  ಕೊಪ್ಪ ತಾಲ್ಲೂಕುಗಳ ­ಗಡಿ ­ಗ್ರಾಮ.

­ರಾಷ್ಟ್ರೀಯ ಹೆದ್ದಾ­ರಿಯಲ್ಲಿದೆ. ವಾಸ್ತ­ವ­ವಾಗಿ ­ಕುಪ್ಪಳಿ ತೀರ್ಥ­ಹಳ್ಳಿ­ಯಿಂದ ­16  ಕಿ.ಮೀ. ದೂರದಲ್ಲಿದ್ದರೆ ಕೊಪ್ಪದಿಂದ ­ಕೇವಲ ­9­ಕಿ.ಮೀ. ದೂರದಲ್ಲಿದೆ. ಆದ್ದ­ರಿಂದಲೇ ­ಕುವೆಂಪು ­ತಾಯಿ  ಊರು ಹಿರೇಕೂ­ಡಿಗೆ ಚಿಕ್ಕಮಗಳೂರು ­ಜಿಲ್ಲೆ, ­ಕೊಪ್ಪ ­ತಾಲ್ಲೂಕಿಗೆ ಸೇರಿದ್ದರೂ ಕುಪ್ಪಳಿಗೆ ­ಕೇವಲ ­ನಾಲ್ಕು  ಕಿ.ಮೀ. ದೂರದಲ್ಲಿದೆ.

ಬೆಕ್ಕನೂರು ಸುಬ್ಬ­ಣ್ಣ­ನ­ವರ ­ವಿಷಯ ­ಹೇಳಲು ­ಹೋದವನು ಭೂಗೋಳದ ­ಕಡೆ ತಿರುಗಿ­ಬಿಟ್ಟೆ ಅನಿಸುತ್ತಿದೆ. ಸುಬ್ಬ­ಣ್ಣ­ನ ವರ ­ಪೂರ್ಣ ­ಹೆಸರು ಸುಬ್ರಹ್ಮಣ್ಯ. ­ಆದರೆ ­ಸುಬ್ಬಣ್ಣ ­ಎಂದೇ  ಎಲ್ಲರಿಗೂ ಪರಿ­ಚಿತ. ­ಗದ್ದೆ ­ಮತ್ತು ­ಅಡಿಕೆ ­ತೋಟವಿದೆ.  ಹಳೇ ­ಕಾಲದ ­ಗೌಡಿಕೆ ­ಮನೆ. ­ಮನೆಯ ­ಅರ್ಧ ­ಭಾಗವನ್ನು ನವೀ­ಕರ­ಣಗೊ­ಳಿಸಿ ‘ಹೋಮ್‌ಸ್ಟೇ’ಯನ್ನಾಗಿ ಪರಿ­ವರ್ತಿ ಸಿದ್ದಾರೆ.  ಲಾನ್ ­ಮತ್ತು ಅಲಂಕಾ­ರಿಕ ಗಿಡಗಳ ­ಮೂಲಕ ಪರಿ­ಸರವನ್ನು ­ಚಂದ ಕಾಣಿ­ಸಿದ್ದಾರೆ.

­ಸುತ್ತಲೂ ­ಅಡಿಕೆ ­ಮತ್ತು ಬಾಳೆ­ಗಿಡಗಳ ­ಸಮೃದ್ಧಿ ಮನಸೆಳೆಯುತ್ತದೆ. ­ಸುಬ್ಬಣ್ಣ ಕಲಾ­ವಿದನ ಮನಸ್ಸಿ­ನವರು. ಪರಿ­ಸರ ವಾದಿ ­ಕೂಡ. ­ಹಾಗಾಗಿ ­ಅವರ ­ಮನೆ ಪರಿ­ಸರವೂ ­ಅವರ ಮನಸ್ಸಿ ನಂತೆಯೇ ರೂಪುಗೊಂ­ಡಿದೆ. ­ಅವರ ­ಪತ್ನಿ  ಶ್ರೀಮತಿ ­ಉಷಾ ತುಂಬಾ ಸುಸಂಸ್ಕೃತ ­ಹೆಣ್ಣು ­ಮಗಳು. ­

ಇಕ್ಕಟ್ಟು ಬಿಕ್ಕಟ್ಟುಗಳಲ್ಲಿಯೂ ನಗುನಗುತ್ತಲೇ ಪರಿ­ಸ್ಥಿ­ತಿಗಳನ್ನು ನಿಭಾ­ಯಿಸುವ ­ತಾಳ್ಮೆ ­ಮತ್ತು ಚಾಕಚ­ಕ್ಯತೆ ­ಇರುವ  ವಿಶೇಷ ­ಗುಣ ­ಅವರದು. ­ಇಷ್ಟೆಲ್ಲಾ ­ಯಾಕೆ ಹೇಳುತ್ತಿದ್ದೇ­ನೆಂದರೆ  ಈ ­ಮೊದಲೇ ­ಈ ­ದಂಪತಿಗಳು ­ನನಗೆ ಚಿರಪರಿ ಚಿತರು. ಕುಪ್ಪಳಿಗೆ ಬಂದಾಗಲೆಲ್ಲಾ ­ಅವರ ­ಮನೆಗೆ ­ಭೇಟಿ ­ನೀಡಿ ಮಾತ­ನಾ­ಡಿಸುವುದು ­ನನ್ನ ­ರೂಢಿಯಾಗಿತ್ತು.

ಇಂಥ ಚಿರಪರಿ­ಚಿತ ­ಸುಬ್ಬಣ್ಣ ­ನನಗೆ ­ಕಂಡ ­ಕೂಡಲೇ ­ನನ್ನ ಸಮಸ್ಯೆಗೆ ­ತಕ್ಷಣವೇ ­ಉತ್ತರ ಸಿಕ್ಕೇ­ಬಿಟ್ಟಿತ್ತು. ­ಆ ­ರಾಶಿ  ರಾಶಿ ಅಣಬೆಗಳನ್ನು ­ತೋರಿಸಿ ­ನನಗೆ ­ಇದರ ರಸಗ­ವಳ ಸಿದ್ಧ ವಾಗಬೇಕು ­ಎಂದು ಕೇಳಿಕೊಂಡೆ. ­ಮರು ಮಾತಿಲ್ಲದೆ  ಸುಬ್ಬಣ್ಣ ಒಪ್ಪಿದರು. ­ತಕ್ಷಣವೇ ­ಚೀಲವನ್ನು ­ಹೊತ್ತು ­ಅವರ ­ಬೈಕ್ ­ಹಿಂದೆ ­ಕುಳಿತೆ. ಸನಿ­ಹದಲ್ಲೇ ­ತೇಜಸ್ವಿ ­ಸ್ಮಾರಕ  ಎದುರಾಯಿತು.

‘­ನೀನು ­ಅಪ್ಪನ ಕಾದಂ­ಬರಿಯ ಬಾಡುಗಳ್ಳ ­ಸೋಮನ ವಂಶ­ಸ್ಥನೇ ­ಇರಬೇಕು’ ­ಎಂದು ­ಅವರು ­ಅಣಕಿಸಿ  ನಕ್ಕಂತಾಯಿತು! ­ಒಂದು ರೀತಿಯಲ್ಲಿ ­ನನಗೇ ನಾಚಿ­ಕೆಯಾಯಿತು.  ಆದರೇನಂತೆ, ­ದೇವರ ವರದಂತೆ ­ಎಂದೋ  ಯಾವೊತ್ತೋ ದಿಢೀರನೆ ಪ್ರತ್ಯ­ಕ್ಷ­ವಾಗುವ ­ಈ ­ಅಣಬೆಗಳು ­ದಿನಾ ­ಸಿಗಲು ­ಸಾಧ್ಯವೇ?

ಸುಬ್ಬ­ಣ್ಣ­ನ­ವರ ­ಮನೆಗೆ ­ಹೋದಾಗ ­ಶ್ರೀಮತಿ ­ಉಷಾ ನಗುನಗುತ್ತಲೇ ಸ್ವಾಗ­ತಿ­ಸಿದರು. ಚಿಲದಲ್ಲಿದ್ದ ­ಅಣಬೆ ­ನೋಡಿ  ಅವರಿಗೂ ಆಶ್ಚರ್ಯವಾಯಿತು. ­‘ಇಷ್ಟು ­ಅಣಬೆ ­ಎಲ್ಲಿ ­ಸಿಕ್ತು ­ಸಾರ್‌’  ಎಂದು ­ಉದ್ಧಾರ ­ತೆಗೆದರು. ­ನನ್ನ ವಿನಂ­ತಿಗೆ  ಮೊದಲೇ ­‘ಮಧ್ಯಾಹ್ನ ­ಊಟಕ್ಕೆ ­ಅಣಬೆ ­ಪದಾರ್ಥ ­ರೆಡಿ ­ಇರುತ್ತೆ ­ಸಾರ್, ­ಊಟಕ್ಕೆ ­ಇಲ್ಲೇ ­ಬಂದು ­ಬಿಡಿ’ ­ಎಂಬ ಆಹ್ವಾ ನವನ್ನೂ ­ಕೊಟ್ಟರು. ­

‘ಆಯ್ತು, ­ಥ್ಯಾಂಕ್ಸ್‌ ­ಮೇಡಂ’ ­ಎಂದು ­ಹೇಳಿ ­ಅಲ್ಲಿಂದ ­ಹೊರಟೆ. ­ಪದಾರ್ಥ ರೆಡಿ­ಯಾಗುತ್ತಿದ್ದಂತೆ ಸುಬ್ಬ­ಣ್ಣ­ನ­ವರ  ಫೋನ್ ­ಬಂತು. ನಡೆಯುತ್ತಲೇ ­ಅವರ ­ಮನೆ ­ತಲುಪಿದೆ.  ಅಣಬೆಯ ಪರಿಮಳಕ್ಕೆ ಅಂಗಳವೆಲ್ಲ ಗಮಗುಟ್ಟುತ್ತಿತ್ತು. ಮನ­ಸಾರೆ ­ಊಟ ­ಮಾಡಿದೆ. ­ಆದರೆ ಉಳಿದಿರುವ ಅಣಬೆಗಳನ್ನು ­ಏನು ­ಮಾಡುವುದು? ­ಉಷಾ  ಅವರೇ ­ಒಂದು  ಪರಿಹಾರ ಸೂಚಿ­ಸಿದರು.

‘­ಸಾರ್ ­ಇದಕ್ಕೆ ­ಉಪ್ಪುಕಾರ ­ಹಚ್ಚಿ ­ಉರಿದು ­ನಂತರ ­ಪ್ರಿಜ್‌ಗೆ ಇಟ್ಟಿರುತ್ತೇನೆ. ­ಬರುವ ಶನಿವಾರ ಹೇಗಿದ್ದರೂ ­ ಊರಿಗೆ ಹೋಗುತ್ತೀರಿ. ­ಮನೆಗೆ ಕೊಂಡೋಗಬಹುದು’ ­ಎಂದರು.  ­ಅವರ  ದೊಡ್ಡ ಮನಸ್ಸಿಗೆ ­ನಿಜಕ್ಕೂ ಬೆರಗಾದೆ. ­ ಅವರು ­ಹಾಗೇ ­ಮಾಡಿದರು. ­ನನ್ನ ­ಸಂಸಾರ ಬೆಂಗಳೂ­ರಿ­ನಲ್ಲಿ ವಾಸ­ವಾ­ಗಿತ್ತು.

ಬೆಂಗಳೂ­ರಿ­ನಿಂದ ಕುಪ್ಪಳಿಗೆ ­ರಾಜ್ಯ ­ರಸ್ತೆ ­ಸಾರಿಗೆ ­ಸಂಸ್ಥೆಯ ­ಲಕ್ಷ್ಯುರಿ ­ಬಸ್ ­ಇತ್ತು (­ಇಂದಿಗೂ ­ಇದೆ). ಶನಿ­ವಾರ  ರಾತ್ರಿ ­ಆ ­ಬಸ್ಸಿಗೆ ಕೂರುವಷ್ಟರಲ್ಲಿ ­ಗುಂಡ ­ಒಂದು ­ಪ್ಯಾಕ್ ­ಮಾಡಿದ  ಪಾತ್ರೆ ­ಹಿಡಿದು ­ಓಡಿ ­ಬಂದ. ‘­ಅಣಬೆ ­ಪದಾರ್ಥ  ಸಾರು, ­ಸುಬ್ಬಣ್ಣ ­ಕೊಟ್ಟರು’ ­ಎಂದ. ‘ಅವತ್ತು ­ಸಂಜೆಗೆ ­ನನ್ನನ್ನೂ ­ಊಟಕ್ಕೆ ಕರ­ದಿದ್ರು. ­ಉಷಾಕ್ಕ ­ಭರ್ಜರಿ ­ಅಡುಗೆ  ಮಾಡ್ತರೆ’ ­ಎಂದು  ಗುಂಡನೂ ­ಅವರಿಗೆ ಕೃತ­ಜ್ಞತೆ ­ಅರ್ಪಿಸಿದ. ­ಸುಬ್ಬಣ್ಣ ­ಮತ್ತು ­ಉಷಾ ­ಅವರ ­ಉದಾರತೆ ­ ಬಗ್ಗೆ ಯೋಚಿಸುತ್ತಲೇ ಬೆಂಗಳೂ­ರಿ­ನತ್ತ ­ಪ್ರಯಾಣ ಮುಂದುವ­ರಿ­ಸಿದೆ.

ಮುಂದಿನ ವಾರಕ್ಕೆ

­

September 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: