-ಹೇಮಲತಾ, ಭದ್ರಾವತಿ
ಪ್ರೀತಿಯ ಉದಯ
ಜಂಗುಳಿಯ ಜಾತ್ರೆಯಲ್ಲೂ
ಒಂಟಿ ಜಂಗಮಳಾಗಿ ಹೆಜ್ಜೆಯಿಡುತ್ತಿರುವ
ಏಕಾಂಗಿ ಪಯಣಿಗಳು ನಾನು
ನನಗೇಕೆ ಮೋಹದ ಬಲೆ ಒಡ್ಡುತ್ತಿರುವೆ

‘ನಾನೇನು’ ಎಂಬ ಹುಡುಕಾಟ
ನಡೆಸುತ್ತಿದ್ದವಳಿಗೆ ನೀನೇ ಬೇರೆ
ಎಂದು ಹೊಸ ಹುಟ್ಟು ನೀಡುವ
ಬಯಕೆ ಮೂಡಿತಾದರೂ ಹೇಗೆ
ಅಗ್ನಿಗರ್ಭವನ್ನೇ ಒಡಲೊಳಗಿಟ್ಟು
ಬೇಯುತ್ತಿದ್ದವಳಿಗೆ ಶರಧಿಯನ್ನೇ
ಹೊತ್ತುತಂದು ತಣಿಸುವ
ಹುಚ್ಚು ಹಂಬಲವೇಕೆ?
ನಶ್ವರದ ನಿರ್ಲಿಪ್ತತೆಗೆ ಜಾರುತ್ತಿದ್ದವಳಿಗೆ
ಪ್ರೀತಿ ಅಕ್ಷಯವಾಗಿ ಆವರಿಸಿ ಜೀವಂತಿಕೆಯ
ಅಮೃತಕಲಶ ಉದಯಿಸಿದಾದರೂ ಹೇಗೆ!!!






ಚೆನ್ನಾಗಿದೆ; ಪದ್ಯ.
Preetiya jaalada chitrana chennaagide.