ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಐರ್ಲೆಂಡ್ ನಲ್ಲಿ ಕನ್ನಡ

 ಡಾ ಶ್ರೀಶೈಲ ನಾಗರಾಳ

ಐರ್ಲೆಂಡ್ ನ ಡಬ್ಲೀನ್ ಸಿಟಿ ವಿಶ್ವ ವಿದ್ಯಾಲಯದಲ್ಲಿ ಇಂಡಿಯನ್ -ಐರ್ಲೆಂಡ್ ಇನ್ಸ್ಟಿಟ್ಯೂಟ್ ಆನ್ ಸೌಥ್ ಏಶಿಯಾ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು.

ಏಪ್ರಿಲ್ 24 ರಿಂದ 26ರವರೆಗೆ ಮೂರು ದಿನಗಳ ಕಾಲ ನಡೆದ ವಿಚಾರ ಸಂಕಿರಣದಲ್ಲಿ  ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ಪ್ರಾಧ್ಯಾಪಕ, ಕತೆಗಾರ ಪ್ರೊ ಎಚ್ ಟಿ ಪೋತೆ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರು, ವಿಮರ್ಶಕ ಡಾ ವಿಕ್ರಮ ವಿಸಾಜಿ, ಡಾ ಸೋಮಶೇಖರ ಅಪ್ಪಗೆರೆ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ಚಿನ್ನಮ್ಮ ಬಸಪ್ಪ ಪಾಟೀಲ ಪದವಿ ಮಹಾವಿದ್ಯಾಲಯ ಚಿಂಚೋಳಿಯ ಸಹ ಪ್ರಾಧ್ಯಾಪಕ ಡಾ ಶ್ರೀಶೈಲ ನಾಗರಾಳ ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯದ ಪಾಲಿ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ ಧಮ್ಮದೀಪ ವಾಂಖೇಡೆ ಭಾಗವಹಿದ್ಧರು

‘ದಲಿತ್ ಲಿಟ್ರೇಚರ್ ಇನ್ ಕಂಟೆಂಪ್ರರಿಕರ್ನಾಟಕ ಕಂಟಿನ್ಯುಯಿಂಗ್ ವಿತ್ ಚೇಂಜ್’ ಗೋಷ್ಠಿಯಲ್ಲಿ ಪ್ರೊ ಎಚ್ ಟಿ ಪೋತೆ ಅವರು “ದಲಿತ ಕಾನ್ಸಿಯಸ್ ಇನ್ ದ ಸ್ಟೋರೀಜ್ ಆಫ್ ದೇವನೂರು ಮಹಾದೇವ, ಡಾ.ವಿಕ್ರಮ ವಿಸಾಜಿ ಯವರು “ದ ಪೋಯಟ್ರಿ ಆಫ್ ಕೆ. ಬಿ. ಸಿದ್ದಯ್ಯ :ಎ ಸ್ಟಡಿ ಇನ್ ದಲಿತ ಪುರಾಣಾಸ್ ಯ್ಯಾಂಡ್ ದಲಿತ ಕಲ್ಚರಲ್ ಡಿಸ್ ಕೋರ್ಸ್ ಸ್, ಡಾ ಅಪ್ಪಗೆರೆ ಸೋಮಶೇಖರ “ಸಾಂಗ್ಸ್ ಆಫ್ ಪ್ರೊಟೆಸ್ಟ್ : ಎ ಸೋಷಿಯೋ-ಕಲ್ಚರ್ ಐಡೆಂಟಿಟಿ ಆಫ್ ದ ಹಿಸ್ಟರಿ,  ಡಾ. ಶ್ರೀಶೈಲ ನಾಗರಾಳ- “ರಿಪ್ಲೆಕ್ಷನ್ ಆಫ್ ದಲಿತ ಐಡೆಂಟಿಟಿ ಯ್ಯಾಂಡ್ ಗ್ರಿವೆನ್ಸಸ್ ಇನ್ ಪ್ರೊ ಪೋತೆ ಸ್ ಶಾರ್ಟ್ ಸ್ಟೋರೀಸ್, ಡಾ ಧಮ್ಮದೀಪ ವಾಂಖೇಡೆ -“ಬುದ್ದ : ಎ ರೇ ಆಫ್ ಹಾಫ್ ಇನ್ ಮಾಡರ್ನ್ ದಲಿತ ಲಿಟ್ರೇಚರ್’ ವಿಷಯಗಳ ಮೇಲೆ ಪ್ರಬಂಧಗಳನ್ನು ಸಾದರಪಡಿಸಿದರು

ಗೋಷ್ಠಿಯ ಅಧ್ಯಕ್ಷತೆಯನ್ನು ತಪಸ್ಯಾ ನಾರಂಗ್ ವಹಿಸಿ ಗೋಷ್ಠಿಯ ಸಂಚಾಲನೆ ಮಾಡಿದರು.

‍ಲೇಖಕರು avadhi

28 April, 2019

1 Comment

  1. D.M.NADAF

    ಐರ್ಲೆಂಡ್ ನ ದಕ್ಷಿಣ ಏಷ್ಯ ವಿಚಾರ ಸಂಕಿರಣದಲ್ಲಿ
    ಕಲಬುರಗಿ ಭಾಗದ ಇತಿಹಾಸ ,ಸಾಹಿತ್ಯ, ಬೌದ್ಧ ಧಮ್ಮದರ್ಶನಗಳನ್ನು ಪರಿಚಯಿಸಿದ ಕೇಂದ್ರೀಯ ವಿವಿ ಮತ್ತು ಕಲಬುರಗಿಯ ಗುಲಬರ್ಗಾ ವಿವಿ ವಿದ್ವಾಂಸರಿಗೆ
    ಅಭಿನಂದನೆಗಳು.
    ಡಿ.ಎಮ್.ನದಾಫ್
    ಅಫಜಲಪುರ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading