ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏನು ಮಾಡುತ್ತೀಯೇ ನನ್ನ ಚಿನ್ನಾ..?

ನಂದಿನಿ ವಿಶ್ವನಾಥ ಹೆದ್ದುರ್ಗ
ಅದೇ ಹಾದಿಯಲ್ಲಿ ನನಗಾಗಿ ಕಾಯುತ್ತಿ
ಮತ್ತೊಂದು ದಿನ ನೀನು.
ನಿನ್ನ ಕಾಲವೂ ಕಾಲವಾಗುತ್ತದೆ ಆಗ.
ತುಸುವಾದರೂ ಕಳೆಗಟ್ಟಬಾರದೆ .?
ಗದರುತ್ತಿ.
ಕಾಲ ಬೆದರಿ
ಹಾಡಲಾರಂಭಿಸಿದೆ.
ನಿನ್ನೆದೆಯ ಮೇಲೆ
ತೋರುಬೆರಳಿನ ಕನವರಿಕೆ.
ಅರೆಗಣ್ಣಾದವನೇ
ಆಯಾಚಿತ ಅರಳಿದವು ನಿನ್ನ ತುಟಿಗಳೇಕೆ.?
ಕುಂಕುಮದೋಕುಳಿ ಚೆಲ್ಲುತ್ತ
ಕೆಂಪು ಬಸ್ಸೊಂದು ನಿಲ್ಲುತ್ತದೆ ಅಲ್ಲಿ.
ಮಲ್ಲಿಗೆ ದಂಡೆಯೊಂದು ಮೆಲ್ಲ ಇಳಿಯುತ್ತಿದೆ..
ಅವಳ ಪಾದದಡಿಯಲ್ಲಿ ನಿನ್ನ
ಕಲ್ಪನೆಯ ಕೆಂಪು ಹಾಸು.
ಕಡು ಹಗಲು ಗುಣ ಮರೆತು
ನಕ್ಷತ್ರ ಅರಳಿಸುತ್ತದೆ
ನಕ್ಕ ಚುಕ್ಕಿಗಳೀಗಾ ಹೂವು ಪಕಳೆ
ಚೆಲ್ಲುತ್ತಿವೆ.
ಕಣ್ಣು ಕಲೆತ ವೇಳೆ.
ಸದ್ದಿಗಾಗಿ ಕಾಯುತ್ತದೆ ಹೃದಯ.
ಯಾರು ಮೊದಲು ಹೇಳು., ಯಾರಿಲ್ಲಿ ಮೊದಲು.?
ನಿನ್ನೆದೆಯ ಬೆವರಿಗಾಗಿ ಅವಳ
ಗಲ್ಲ ಕಾತರಿಸುವ ವೇಳೆ.!
ಚಾಚಿ ಬಳಸುವಾಗೆಲ್ಲ
ನೆರೆಗೆ ಕೊಚ್ಚುವ ಭಯ ನನಗೆ.!
‘ಅದೆಷ್ಟು ಒಲವಿಂದ ಕರೆಯುತ್ತೀ ನೀನು ನನ್ನ
ಏನು ಮಾಡುತ್ತೀಯೇ ನನ್ನ ಚಿನ್ನಾ.!’
ಇರುಳುಗಳ
ಇರುವ ಮರೆತು ಮಾಡಿದ ನಿನ್ನ ಧ್ಯಾನ
ತೃಪ್ತವಾಗುವ ಹೊತ್ತು.
ಜಗವು ಚಪ್ಪರಕೆ ಸಿದ್ಧ
ಜರಡಿಯೆದೆಯಿಂದ ಅರಿಷಿನದ ಸ್ನಾನ
ಕಂಕಣ ಬಾಸಿಂಗವೆಂಬ ನೀನರಿಯದ
ಸೊಬಗು.
ಬಳಸಿದ ಬಲ ತೋಳು
ನಿನ್ನ ಬೆರಳ ಸೆರೆಯೊಳಗೆ.
ಗಲ್ಲ ಕೆನ್ನೆ ತುಂಬೆಲ್ಲಾ ಸಂಗಕ್ಕೆ ಒಲಿದ
ಗಂಗೆ.!
ಹೊರಗೆ ಸುರಿಯುತ್ತಿದೆ ಸೋನೆ ಸಣ್ಣಗೆ.!!!

‍ಲೇಖಕರು avadhi

15 September, 2019

1 Comment

  1. T S SHRAVANA KUMARI

    ಒಳ್ಳೆಯ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading