ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏನಿರಬಹುದು ಹೇಳು…

ಮುತ್ತು ಬಳ್ಳಾ ಕಮತಪುರ

ಸಾವಿನ ಮೆರವಣಿಗೆಯಲಿ ಎಷ್ಟು ದೂರ ನಡೆಯಬಹುದು ಹೇಳು |
ನೋವಿನ ಬೇನೆಯನು ಎಷ್ಟು ಹೊತ್ತು ತಡೆಯಬಹುದು ಹೇಳು ||

ಎಲ್ಲೆಲ್ಲೂ ಧರ್ಮ ಹಿಲಾಲು ಬಹು ಬೇಗ ವಿಷವಾಗಿ ಹರಡುತ್ತದೆ |
ಸದ್ಯ ಎಲ್ಲದಕ್ಕೂ ಬಣ್ಣಗಳ ಮೇಲಾಟ ಏನಿರಬಹುದು ಹೇಳು ||

ಭಾರವನು ಎತ್ತಿದಷ್ಟು ಹಗುರವೆ ತದನಂತರದ ಗಾಯಗಳು |
ಈ ಗಾಯ ಬೂದಿ ಮುಚ್ಚಿದ ಕೆಂಡ ಅರಿಯಬಹುದು ಹೇಳು ||

ಇದ್ದಾಗ ಅನುಭವಿಸಿದ ರೂಪ ಅಳಿದಾಗ ಜಗತ್ತಿನ ಕಣ್ಣಿಗೆ ವಿಕಾರ |
ವಿರೂಪಗೊಳಿಸುವ ದಹನಕಾರಿ ಗುಣ ಯಾಕಿರಬಹುದು ಹೇಳು ||

ಸುಡುವ ಬೆಂಕಿಯಲಿ ಮುತ್ತು ನೊಂದ ಬೆಂದ ಜೀವಗಳೆಷ್ಟೊ ಕೇಳು |
ಅಲೆದಾಟದ ಅಲೆಮಾರಿಯ ಬದುಕೆಷ್ಟು ಹಣ್ಣಾಗಿರಬಹುದು ಹೇಳು ||

‍ಲೇಖಕರು Admin

25 February, 2022

1 Comment

  1. T S SHRAVANA KUMARI

    ಚಂದದ ಗಜಲ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading