ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏನಾಗಿದೆ ನಮ್ಮ ಜನರಿಗೆ?

ಏನಾಗಿದೆ ನಮ್ಮ ಜನರಿಗೆ? ಸಂವೇದನೆ ಸ್ವಲ್ಪವೂ ಉಳಿದಿಲ್ಲವೇ??

ಡಾ. ಪ್ರಭಾಕರ ಮ. ನಿಂಬರಗಿ

ಕಾಲಾಹಾಂಡಿ, ಬಾಲಾಸೋರಿನ ಘಟನೆಗಳ ಬೆನ್ನಲ್ಲೇ ಮಧ್ಯ ಪ್ರದೇಶದ ದಾಮೋಹ ಹತ್ತಿರದ ಮತ್ತೊಂದು ಘಟನೆ ಇವೊತ್ತೇ ಬೆಳಕಿಗೆ ಬಂದಿದೆ.
ಮಧ್ಯ ಪ್ರದೇಶದ ದಾಮೋಹ ಹತ್ತಿರ ಚಲಿಸುತ್ತಿರುವ ಬಸ್ಸಿನಲ್ಲಿ ರಾಮ್ಸಿಂಗ ಲೋಧಿ ಎಂಬವನ ಬಾಣಂತಿ ಪತ್ನಿ ನಿಧನಳಾದಳು. ಅವನ ಜತೆ ನಾಲ್ಕೇ ದಿನದ ಹಸುಗೂಸು ಕೂಡ ಇತ್ತು. ಪತ್ನಿಯ ನಿಧನವಾದ ತಕ್ಷಣ ಶವವನ್ನು ಅಲ್ಲೇ ರಸ್ತೆ ಬದಿಯಲ್ಲಿ ಇಳಿಸಲಾಯಿತು.

ಡ್ರೈವರನ ಹೇಳಿಕೆಯಂತೆ ಬಸ್ಸಿನಲ್ಲಿರುವ ಜನರೆಲ್ಲ ಶವವನ್ನು ಕೆಳಗಿಳಿಸಲೇಬೇಕೆಂದು ಹಠ ಹಿಡಿದರಂತೆ. ಪಿಡಿಕೆ ಮಿಂಜ್ ನ  ಪೊಲೀಸ್ ಅಧಿಕಾರಿಗೆ ಕಂಪ್ಲೇಂಟ್ ಕೊಟ್ಟರೂ ಅದು ತನ್ನ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ಬೇರೆ ಸ್ಟೇಶನ್ ಗೆ ಅದನ್ನು ವರ್ಗಾಯಿಸಿದನಂತೆ. ಇದು ಪಾಸಿಂಗ್ ದ ಬಕ್ ಎಂಬಂತಾಯಿತು. ಸುಮಾರು ಒಂದು ಗಂಟೆ ಕಾಲ ಸುರಿಯುವ ಮಳೆಯಲ್ಲಿ ಲೋಧಿ, ಅವನ ಮಗಳು, ನಾಲ್ಕು ದಿನದ ಹಸುಗೂಸು ಹಾಗೂ ಶವ ರಸ್ತೆ ಬದಿಯಲ್ಲಿ ಇರಬೇಕಾಯಿತಂತೆ.

ಜನರಿಗೆ ಸಂವೇದನೆ ಎನ್ನುವುದು ಉಳಿದಿಲ್ಲವೇ? ಪರರ ದುಃಖದಲ್ಲಿ ಸಹಭಾಗಿಯಾಗುವ ಸ್ವಭಾವ ಎಲ್ಲಿಗೆ ಹೋಗಿದೆ? ಬಸ್ಸನ್ನು ನೇರವಾಗಿ ಪೊಲೀಸ ಸ್ಟೇಶನ್ ಅಥವಾ ಹತ್ತಿರದ ಆಸ್ಪತ್ರೆಗೆ ಒಯ್ಯುವುದು ಸಾಧ್ಯವಿರಲಿಲ್ಲವೇ? ಅಷ್ಟು ಹೊತ್ತಿನವರೆಗೆ ಅವರಿಗೆ ಶವದೊಡನೆ ಕೂಡುವುದಾಗುತ್ತಿರಲಿಲ್ಲವೇ? ಮೈಲಿಗೆ-ಮುಡಚಟ್ಟು ಆಗುತ್ತಿತ್ತೇ? ಅದೇ ತಮ್ಮವರ್ಯಾರಾದರೂ ಬಸ್ಸಿನಲ್ಲಿ ಹೀಗೇ ನಿಧನರಾದರೆ ಇಂತಹ ಹೀನ ಜನಸ್ಪಂದನೆಯನ್ನು ಸಹಿಸುತ್ತಿದ್ದರೇ?

ಪ್ರಸವದಂತೆ ಮರಣವೂ ಜೀವನದ ಅವಿಭಾಜ್ಯ ಅಂಗ. ಇದೇಕೆ ಜನರಿಗೆ ಅರಿವಾಗುವುದಿಲ್ಲ? ಇಂತಹ ನೂರಾರು ಪ್ರಶ್ನೆಗಳು ಉದ್ಭವಿಸುತ್ತವೆ.
ಮುಖ್ಯವಾಗಿ ಜನರ ವಿವೇಚನಾಶಕ್ತಿ ತನ್ನ ಮೂಲರೂಪವನ್ನು ಮರಳಿ ಪಡೆಯಬೇಕಾಗಿದೆ. ಹಾಗಾದರೆ ಮಾತ್ರ ಇಂತಹ ಘಟನೆಗಳು ಜರುಗಲಾರವು.

‍ಲೇಖಕರು Admin

28 August, 2016

* | Avadhi

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading