ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಏಕೆ ಬೇಕು ಹಾಳು ನೆಪ ಸುಮ್ಮನೆ ಪ್ರೀತಿ ಮಾಡು…’ – ಚಿತ್ರಾ ಸಂತೋಷ್ ಕವಿತೆ

ಚಿತ್ರಾ ಸಂತೋಷ್

(ಕವನ ಓದಿ ಸಂಭ್ರಮಿಸುವುದಷ್ಟೇ ಗೊತ್ತು. ಇದು ನನ್ನ ಮೊದಲ ಪ್ರಯತ್ನ)

ಎಷ್ಟೊಂದು ಚಿತ್ರಗಳು

ಹಾಗೇ ಬಿದ್ದಿವೆ
ಬಣ್ಣ ಹಚ್ಚದೆ…
ನನಗೂ ನಿನಗೂ
ಹುಸಿಮುನಿಸಿನ ಚೌಕಟ್ಟು
ಬಣ್ಣ ಹಚ್ಚಲೂ
ಸಮಯವಿಲ್ಲ

 

ಖಾಲಿ ಕ್ಯಾನ್ವಾಸ್ ಮೇಲೆ
ಹಾಗೇ ಪೆನ್ಸಿಲಿನಲ್ಲಿ ಗೀಚಿಟ್ಟಿದ್ದು
ಬಣ್ಣ ತುಂಬುತ್ತೇವೆ
ಎಂಬ ಭರವಸೆಯಿಂದ

 
ಏಕೆ ಬೇಕು ಹಾಳು ನೆಪ
ಸುಮ್ಮನೆ ಪ್ರೀತಿ ಮಾಡು
ಎಷ್ಟೊಂದು ಬಣ್ಣಗಳನ್ನು
ಹೊತ್ತು ತಂದಿದ್ದೇನೆ
ಬಾಕಿ ಉಳಿದ ಚಿತ್ರಗಳಿಗೆ
ರಂಗೇರಿಸೋಣ…
 

‍ಲೇಖಕರು avadhi

26 August, 2013

3 Comments

  1. Aravind

    good one.

  2. Swarna

    ಪ್ರಥಮ ಪದ ಸುಂದರವಾಗಿದೆ. ಮೊದಲೆರಡು ಪ್ಯಾರಗಳು ನೆನಪಲ್ಲುಳಿಯುತ್ತವೆ.

  3. Tejaswini Hegde

    Good attempt chitra 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading