ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎ ಪಂಕಜ ಮತ್ತು ನನ್ನ ಸ್ನೇಹ 47 ವರ್ಷಗಳದ್ದು: ಲಲಿತಮ್ಮ ಚಂದ್ರಶೇಖರ್

ಲಲಿತಮ್ಮ ಡಾ. ಚಂದ್ರಶೇಖರ್

ಎ ಪಂಕಜ ಹಾಗೂ ನನ್ನ ಗೆಳೆತನಕ್ಕೆ ನಲ್ವತ್ತೇಳು ವರ್ಷ. ಇದೀಗ ಅವರು ನಮ್ಮೆಲ್ಲರನ್ನು ಅಗಲಿ ಹೋಗಿರುವುದು ನನಗೆ ತುಂಬಾ ದುಃಖವಾಗಿದೆ. ಸಾಹಿತ್ಯವೇ ನಮ್ಮ ಗೆಳೆತನದ ಕೊಂಡಿ. ಮಹಿಳೆ ಮತ್ತು ಸಮಾಜಸೇವೆ ನಮ್ಮ ಸಮಾನಾಭಿರುಚಿಯಾಗಿತ್ತು. ಮಹಿಳಾ ಸಮಾಜ ಹಾಗೂ ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಸ್ಥಾಪಿಸಿದವರು ಎ ಪಂಕಜಾ.

ಆಳ್ವಾರ್ ಬಗ್ಗೆ ವಿಸ್ತೃತ ಅಧ್ಯಯನ ಕೈಗೊಂಡವರು. ಪಾವಗಡದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿ ಸ್ಥಾಪಿಸಿದವರು. ಖ್ಯಾತ ಆಡ್ವೊಕೇಟ್ ಆಗಿದ್ದ ಅವರ ಪತಿ, ನಾನಲ್ಲಿಗೆ ಹೋಗದೆ ಸಮಯವಾಗಿದ್ದರೆ, ಲಲಿತಮ್ಮ ಏನು ಕಾಣುತ್ತಿಲ್ಲ, ಬರಹೇಳು, ಎನ್ನುವವರು.

ಹರಿಹರಕ್ಕೆ ನಮ್ಮಲ್ಲಿಗೆ ದಂಪತಿಗಳು ಬಂದು ಎರಡು ದಿನ ನಮ್ಮಲ್ಲಿದ್ದು ಸಂತೋಷ ಕೊಟ್ಟಿದ್ದರು. ಲೇಖಕಿಯರ ಸಂಘ ಅವರ ಬದುಕು, ಬರಹದ ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡಾಗ, ನಾನವರ ಬಗ್ಗೆ ಮಾತನಾಡಿದ್ದೆ. ಅವರ ಅಭಿನಂದನಾ ಗ್ರಂಥದಲ್ಲಿ ಅವರ ಬಗ್ಗೆ ಬರೆದಿದ್ದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಸಾಹಿತಿ.

ನನಗಿಂತ ಹತ್ತು ತಿಂಗಳು ಹಿರಿಯರಾದ, ನನ್ನ ಅರ್ಧ ಶತಮಾನದ ಈ ಸ್ನೇಹಿತೆಯನ್ನು ಕಳಕೊಂಡು ತುಂಬಾ ಹತಾಶೆ, ನೋವು, ಸಂಕಟವಾಗಿದೆ. “ನೋಡಬೇಕನಿಸುತ್ತಿದೆ; ಒಮ್ಮೆ ಬಂದು ಹೋಗಿ,” ಎಂದು ಕರೆದಿದ್ದರು. ಆದರೆ ಈ ಕೊರೊನಾದಿಂದಾಗಿ ಹೋಗಲಾಗಿರಲಿಲ್ಲ. ಈಗ ಹೀಗೆ ಅಗಲಿದ್ದೇವೆ.

‍ಲೇಖಕರು Avadhi

15 December, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading