ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಷ್ಟು ಎಣಿಸಿದರೂ, ಲೆಕ್ಕಕ್ಕೆ ಸಿಗುವುದು ಐದೇ ಬೆರಳು…

ನೆನಪು-ನವಿಲುಗರಿ
–  ರಘುನಂದನ ಕೆ. ಹೆಗಡೆ
ಅತ್ತಿತ್ತ ಸುತ್ತಮುತ್ತ
ಸುಳಿದಾಡಿ ಈ ಮನಸು
ನೆನಪ ಪುಟ ತಿರುವಲು
ಕಂಡದ್ದು
ಬೆಚ್ಚಗೆ ಮಲಗಿದ್ದ
ನಿನ್ನ ನೆನಪ ನವಿಲುಗರಿ
.
ಕೈಯಲ್ಲಿ ಕೈ ಬೆಸೆದು
ಬೆರಳ ಎಣಿಸುತ್ತ,
ಮೌನ ಕೊಲ್ಲುತ್ತ
ಸಾಗರ ತೀರದ ಮರಳಲ್ಲಿ
ಮೂಡಿಸಿದ್ದ
ಜೋಡಿಪಾದಗಳ ಗುರುತ
ನುಂಗಿದ್ದು
ಮರಳೋ, ಅಲೆಯೋ
ಇನ್ನೂ ತಿಳಿಯಲಾಗಿಲ್ಲ…!
.
ಮುಳುಗುವ ಸೂರ್ಯನ ನೋಡುತ್ತ
ಬದುಕ ಬೆಸೆವ
ಮಾತಾಡಿದವರಿಗೆ
ಬೆಸೆದ ಕೈ ಬೇರೆಯಾದದ್ದು
ಅರಿವಾಗುವ ಮೊದಲೇ
ಸೂರ್ಯ
ಅಸ್ತಮಿಸಿಬಿಟ್ಟಿದ್ದ…
.
ಈಗ,
ಮತ್ತದೇ ತೀರದಲ್ಲಿ
ಹಜ್ಜೆ ಹುಡುಕಿದರೆ;
ಗೆಜ್ಜೆ ಕಟ್ಟಿದ ಪಾದ
ಎಲ್ಲೋ ಮಾಯ,
ಎಷ್ಟು ಎಣಿಸಿದರೂ
ಲೆಕ್ಕಕ್ಕೆ ಸಿಗುವುದು
ಐದೇ ಬೆರಳು…!!
.
ನವಿಲು ಮರೆತ ನವಿಲುಗರಿಯ
ನೆನಪ ಹೊತ್ತಿಗೆಯಲ್ಲಿ
ಮುಚ್ಚಿಟ್ಟು
ಮತ್ತದೇ ಸಾಗರ ತೀರಕ್ಕೆ
ಸಾಗುತ್ತೇನೆ ಸದಾ
ಬೆಸೆಯಲಾರದ ಬೆರಳುಗಳ ಹುಡುಕಿ.

‍ಲೇಖಕರು avadhi-sandhyarani

31 January, 2013

6 Comments

  1. chalam

    ನವಿಲು ಮರೆತ ನವಿಲುಗರಿ….ಅದ್ಬುತವಾದ ಸಾಲು…..ರಘುನಂದನ್ ಥ್ಯಾಂಕ್ಸ್

  2. pravara

    ಮಧುರ ಸಾಲುಗಳು ಮತ್ತೆ ಮತ್ತೆ ಓದೆನ್ನುತ್ತವೆ… ಚೆನ್ನಾಗಿದೆ

  3. sandhya

    ಜೋಡಿಪಾದಗಳ ಗುರುತ
    ನುಂಗಿದ್ದು
    ಮರಳೋ, ಅಲೆಯೋ
    ಇನ್ನೂ ತಿಳಿಯಲಾಗಿಲ್ಲ…! …idu tumba ishta aythu 🙂

  4. Swarna

    ಸುಂದರ ಸಾಲುಗಳು

  5. Shrivatsa Kanchimane

    ಇಷ್ಟವಾಯಿತು…ಭಾವ ಬರಹ…

Trackbacks/Pingbacks

  1. ನೆನಪು – ನವಿಲುಗರಿ « ಸಮುದ್ರ ತೀರ…. - [...] ದಿನಾಂಕ: 31.01.2013ರಂದು “ಅವಧಿ” ಯಲ್ಲಿ ಪ್ರಕಟಿಸಲ್ಪಟ್ಟಿದೆ. ಅವಧಿಯ ಪುಟಗಳಲ್ಲಿ ಓದಲು ಈ ಲಿಂಕ್ ಬಳಸಿ – http://avadhimag.online/?p=76173. [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading