ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಎಲ್ಲಾ ಹೆಣ್ಮಕ್ಕಳೂ ದೇವರುಗಳೇ….' – ನಳಿನ ಬರೀತಾರೆ

ನಾವು ಹೆಣ್ಮಕ್ಕಳು

ನಳಿನ

ಮನೆಗೊಂದು ದೀಪದಂತೆ,
ಮನೆಯೊಳಗೆ ಬಂದವರ ಹೋದವರ
ಕಣ್ಣು ಕುಕ್ಕಿಸಿ, ಗೆಜ್ಜೆ ಗಿಲುಕಿ
ಕುಲುಕಿಸಿ ಓಡೋಡಿ
ಆಟವಾಡಿದೆವು.
 
ಹಿತ್ತಲ ಗಿಡದಲಿ ಸದ್ದಿಲ್ಲದೆ
ಹೂಬಿಟ್ಟ ಬಾಳೆಯ ಹಾಗೆಯೇ
ಮೈನೆರೆದು ದಾವಣಿಯಲಿ ನಾಚಿದೆವು.
 
ಮನೆ ಮನೆಗಳಲ್ಲೂ ನಾವು
ನೆಲ ಗೋಡೆ, ಅಂಗಳ, ಶೌಚ
ಗುಡಿಸಿ ಸಾರಿಸಿ,
ನಿಮ್ಮಗಳಿಗೆ ಉಣ್ಣಲು ಅಣಿ ಮಾಡಿದೆವು.

ನೀವಿಟ್ಟ ಚೌಕಟ್ಟಿನೊಳಗೆ
ಬದುಕು ಕಟ್ಟಿ, ಬಲಿದಾನಗೈದು
ಹೆತ್ತು ವಂಶವೃಕ್ಷವಾಗಿ
ತಾಯಿಯಾದೆವು.
 
ಶಕ್ತಿ-ತಾಯಿ-ಅಮ್ಮ-ದೇವಿ
ಊದಿದ ಸೃತಿ ಸ್ಮರಣೆಗಳು
ದೇವಾಲಯದ ಬಾಗಿಲೊಳಗೆ ಮಾತ್ರ
ಮೊಳಗಿರಲು,
ಹೊರಗೆ ಹೆಣ್ಕುಲದ ಸರ್ವನಾಶದ ಕೂಗು
ಕೇಳಿಬರುತಿರಲು, ಕಣ್ಣೀರು ಒರೆಸಿ
ಎದೆಗಾರಿಕೆಯಲಿ ಎದ್ದು
ಟೊಂಕ ಕಟ್ಟಿದೆವು.
 
ಅವಳುಂಡ ಬಾಸುಂಡೆಗಳು, ಇವಳುಂಡ
ತೋಳ್ಬಲದ ಧರ್ಮದೇಟುಗಳ ಸಹಿಸಿ
ದಿಟ್ಟಳಾಗಿ ಮುನ್ನುಗ್ಗಲು ಚಾಚಿ ಬಾಚಿಕೊಂಡು
ಅಪ್ಪುವೆವು ಹೆತ್ತವಳ, ಬದಿಯಲ್ಲಿ ನಿಂತ ಅಕ್ಕಾ ತಂಗಿಯರ.
 
ದುಡಿಮೆ, ಒತ್ತಡ, ವಿರಾಮಕ್ಕೆ ಕೂರದೆ,
ಮಕ್ಕಳನ್ನು ಬೆಳೆಸಿ, ಗಂಡನನ್ನೂ ಪಾಲಿಸಿ
ಬಂಧುಗಳಿಗೂ ಬೇಕಾಗಿ,
ಬಿಳಿಗೂದಲು ಆವರಿಸಿದೆ.
 
ಈಗ ಬದಲಾಗಿದೆ ಅಜ್ಜಿ, ಅವ್ವ, ಅಮ್ಮ, ದೊಡ್ಡವ್ವ
ಹತ್ತಾರು ಮಕ್ಕಳು ನಗುತ್ತಾ ಕೇಕೆ ಹಾಕುತ್ತವೆ
ಅಪ್ಪಿಕೊಳ್ಳಲು ಹಾತೂರೆಯುತ್ತವೆ,
ದೇಗುಲ ನಿನ್ನ ಮನೆ- ಹೌದಲ್ಲವೋ,
ಬದುಕು ಕಡೆದ ದೇವರು ಎದೆಯೊಳಗಿದ್ದು
ನಡೆಸುವಾಗ. ಎಲ್ಲಾ ಹೆಣ್ಮಕ್ಕಳೂ ದೇವರುಗಳೇ.
 

‍ಲೇಖಕರು avadhi

4 February, 2014

6 Comments

  1. Anonymous

    good job. sometimes i write about women, becoz i cant stop writing about women. it insists me to write more and more. nothing lies behind without women on earth. this poem is dedicated to all the women on earth.

  2. nalina

    good job. sometimes i write about women, becoz i cant stop writing about women. it insists me to write more and more. nothing lies behind without women on earth. this poem is dedicated to all the women on earth.- nalina d.

  3. Vanamala

    ತುಂಬಾ ಇಷ್ಟವಾಯ್ತು ಮೇಡಂ..

    • Anonymous

      dhanyavadhgalu vanamala avare. keep in touch.

  4. Bhavya

    ದೇಗುಲ ನಿನ್ನ ಮನೆ- ಹೌದಲ್ಲವೋ,
    ಬದುಕು ಕಡೆದ ದೇವರು ಎದೆಯೊಳಗಿದ್ದು
    ನಡೆಸುವಾಗ. ಎಲ್ಲಾ ಹೆಣ್ಮಕ್ಕಳೂ ದೇವರುಗಳೇ…. Ista aythu

  5. mmshaik

    haudu khanDita..!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading