ಚಂದ್ರಪ್ರಭಾ ಬಿ
ಕೆ.ವಿ. ತಿರುಮಲೇಶರಂಥ ಹಿರಿಯರು ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದ್ದು ನಿಜಕ್ಕೂ ಅಧ್ಯಾಪಕರ ಉತ್ಸಾಹವನ್ನು ಇಮ್ಮಡಿಸಿದೆ. ನಾಗರಿಕ ಸಮಾಜ ಸರಕಾರದ ಅನಾಗರಿಕ ನಡವಳಿಕೆಯನ್ನು ಖಂಡಿಸುವುದರ ಅವಶ್ಯಕತೆ ಇದ್ದೇ ಇದೆ.
ತಮ್ಮಂಥ ಪ್ರಾಜ್ಞರ ಮಧ್ಯಸ್ಥಿಕೆಯಿಂದಲಾದರೂ ಒಂದು ಮಧ್ಯಮ ಮಾರ್ಗ ಒಡಮೂಡಲಿ, ಮೌಲ್ಯಮಾಪನ ಕಾರ್ಯ ತುರ್ತಾಗಿ ಆರಂಭವಾಗಲಿ. ಧನ್ಯವಾದಗಳು ಸರ್ ನಿಮಗೆ, ಎಲ್ಲಾ ಅಧ್ಯಾಪಕರ ಪರವಾಗಿ.

ಬಿ ಎಸ್ ಲಿಂಗರಾಜು
ರಕ್ತಸ್ರಾವವಾಗುತ್ತಿರುವ ಗರ್ಭಿಣಿಗೆ ಸಿಸೇರಿಯನ್ ಮಾಡದಿದ್ದರೆ ಪ್ರಾಣಕ್ಕೆ ಕುತ್ತು. ಬೇಗ ಹಣ ಹೊಂದಿಸಿ ಕಟ್ಟಿ, ನಂತರ ಸಿಸೇರಿಯನ್ ಮಾಡುತ್ತೇವೆ ಎಂಬ ವೈದ್ಯರ ಮಾತು….
ಅಪಘಾತಕ್ಕೀಡಾದ ಗಾಯಾಳುವಿಗೆ ಚಿಕಿತ್ಸೆ ನೀಡುವ ಮುನ್ನ ಪೊಲೀಸರಿಗೆ ಮಾಹಿತಿ ಕೊಡಿ, ಅವರು ಬಂದ ಮೇಲೆ ಚಿಕಿತ್ಸೆ ಆರಂಭಿಸುತ್ತೇವೆ ಎಂಬ ವೈದ್ಯರ ಹೇಳಿಕೆ ಎರಡೂ ನೆನಪಾಗುತ್ತಿವೆ..

ಕೆ ವಿ ತಿರುಮಲೇಶ್
ಜೂನಿಯರ್ ಕಾಲೇಜಿನ ಉಪನ್ಯಾಸಕರೇನೂ ಮಂಚಿನ ಮುಷ್ಕರ ಮಾಡಿಲ್ಲ. ಅವರು ವೇತನ ಸಮಾನತೆಯ ಕುರಿತಾದ ಅವರ ಒತ್ತಾಯ ಇಂದಿನ ಮಾತೂ ಅಲ್ಲ. ಅವರು ಡಿಗ್ರೀ ಉಪನ್ಯಾಸಕರ ಜೊತೆ ಸಮಾನತೆ ಕೇಳುವುದೇ ತಪ್ಪೆ? ಅಥವಾ ಅದಕ್ಕೆ ಪ್ರಶಸ್ತವಾದ ಕಾಲ ಇದಲ್ಲವೇ?
ಅವರ ವಿರುದ್ಧ, ಮಂತ್ರಿಗಳು ಬೆದರಿಸುವಂತೆ, ಎಸ್ಮಾ ಬಳಸಬೇಕೇ? ಕಾಮನ್ ಕ್ರಿಮಿನಲುಗಳಂತೆ ಜೇಲಿಗೆ ತಳ್ಳಬೇಕೇ? ವಿವಿಧ ರೀತಿಗಳಲ್ಲಿ ಬೆದರಿಸಬೇಕೇ, ತೇಜೋವಧೆ ಮಾಡಬೇಕೇ? ಹೇಗಾದರೂ ಮಾಡಿ ವೇತನ ಸಮಾನತೆ ಸಿಗದಂತೆ ಮಾಡಬೇಕೇ?
ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಕಲಿಸಿದವರು ಅವರೇ ಎನ್ನುವುದನ್ನು ಮರೆಯಬೇಡಿ–ಅದಕ್ಕಾಗಿ ಕೃತಜ್ಞರಾಗಿ.
ಅಧ್ಯಾಪನ ವೃತ್ತಿ ಆಕರ್ಷಣೆಯನ್ನು ಕಳೆದುಕೊಂಡ ಈ ಕಾಲದಲ್ಲಿ ಸರಕಾರದ ಇಂಥ ವಿರೋಧಿ ನಿಲುವು ಶಿಕ್ಷಣದ ಮೇಲೆ ಯಾವ ಪರಿಣಾಮವನ್ನು ಉಂಟುಮಾಡೀತು? ಇಂದಿನ ಯುವ ಜನತೆಗೆ ಅಧ್ಯಾಪನ ವೃತ್ತಿ ಬೇಡ, ಏನಾದರೂ ಕಚೇರಿ ಕೆಲಸ ಬೇಕು. ಆದರೆ ಉತ್ತಮ ಶಿಕ್ಷಕರಿಲ್ಲದ ಒಂದು ದೇಶವನ್ನು ಊಹಿಸಲು ಕಷ್ಟವಾಗುತ್ತದೆ.
ಶಿಕ್ಷಕ ವೃತ್ತಿ ಬೇಡ, ಆದರೆ ಶಿಕ್ಷಣ ಬೇಕು ಎನ್ನುವ ವಿರೋಧಾಭಾಸ ನಮ್ಮಲ್ಲಿದೆ. ಇಂಥ ಪರಿಸ್ಥಿತಿಯಲ್ಲಿ ಡಿಗ್ರಿ ಕ್ಲಾಸಿಗೆ ಕಲಿಸುವವರಿಗೆ ಒಂದು ವೇತನ, ಪ್ಲಸ್ ಟೂ ಕ್ಲಾಸುಗಳಿಗೆ ಕಲಿಸುವವರಿಗೆ ಇನ್ನೊಂದು–ಎರಡೂ ಮಟ್ಟದವರ ಮೂಲ ಶೈಕ್ಷಣಿಕ ಅರ್ಹತೆ ಒಂದೇ ಆಗಿದ್ದರೂ–ಎನ್ನುವುದು ಜೂನಿಯರ್ ಕಾಲೇಜು ಅಧ್ಯಾಪನ ವೃತ್ತಿಯನ್ನು ಇನ್ನಷ್ಟು ಅನಾಕರ್ಷಕವಾಗಿಸುತ್ತದೆ. ಇದು ಒಟ್ಟಾರೆ ಶಿಕ್ಷಣಕ್ಕೆ ಒಳ್ಳೆಯದಲ್ಲ. ಯೋಚಿಸಿ ನೋಡಿ.

ಅಶ್ವತ್ಥರೆಡ್ಡಿ ಅಪ್ಪಣ್ಣರೆಡ್ಡಿ
ತಿರುಮಲೇಶ್ ಸಾರ್, ನಿಮ್ಮ ಸಲಹೆ ಒಳ್ಳೆಯದೆ. ‘ಕಬ್ಬಿಣ ಕಾದಾಗ ಬಗ್ಗಿಸು’ ಮಾತಿನಂತೆ ಶಿಕ್ಷಕರು ಮೌಲ್ಯಮಾಪನ ಸಮಯದಲ್ಲಿ ತಮ್ಮ ಬೇಡಿಕೆಗಳೊಂದಿಗೆ ಮುಷ್ಕರ ಮಾಡುತ್ತಿರುವುದು ಸ್ವಾಗತಕರ ವಿಷಯ.
ಆದರೆ ಯಾವುದೆ ಸರ್ಕಾರ ಸಮಸ್ಯೆಯನ್ನು ಜಟಿಲಗೊಳಿಸಲು ಬಯಸುವುದಿಲ್ಲ, ಈ ಹಿಂದಿನ ಸರ್ಕಾರ ವೇತನ ಆಯೋಗದ ಬಗ್ಗೆ ಕುಮಾರ ನಾಯಕ್ ಸಮಿತಿ ರಚನೆ ಮಾಡಿದೆ, ಇದೀಗ ಈ ವರದಿಯಂತೆ ಇಂದಿನ ಸರ್ಕಾರ ಆರ್ಥಿಕ ಇಲಾಖೆಯ ಒಪ್ಪಿಗೆ ಪಡೆಯಲು ಹೆಚ್ಚಿನ ಆರ್ಥಿಕಹೊರೆ ಬಗ್ಗೆ ಮಾತನಾಡಿದರೂ, ಶಿಕ್ಷಕರ ಹಾಗೂ ಉಪನ್ಯಾಸಕರ ನ್ಯಾಯಸಮ್ಮತ ಸಮಸ್ಯೆಗಳನ್ನು ಬಗೆಹರಿಸುವುದು ಸರ್ಕಾರಕ್ಕೆ ಎಷ್ಟು ಮುಖ್ಯವೋ, ಶಿಕ್ಷಕರಿಗೆ ಮಕ್ಕಳ ಪ್ರಗತಿಪೂರಕವಾದ ನಿರ್ಣಯ ಪ್ರಸ್ತುತ ಅಷ್ಟೇ ಮುಖ್ಯವಾಗಿದೆ.
ಸಂಘದ ಪಧಾದಿಕಾರಿಗಳ ಹೇಳಿಕೆಗಳು ಆಡಳಿತಾಂಗವನ್ನು ಅಣಕಿಸುವಂತಾಗಾದೆ ಹಾಗೂ ಮೂನ್ನೆ ನಡೆದ ಉತ್ತರ ಪತ್ರಿಕೆ ಸೋರಿಕೆಗೆ ವಿಷಯಗಳ ಬಗ್ಗೆ ಮೆಲುಕಾಕುವುದು ಬೇಡ, ಏಕೆಂದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಾಗಿದೆ.ಇದರಿಂದ ಸಮಸ್ಯೆ ಜಟಿಲಗೂಂಡು, ಮಕ್ಕಳ ಹಾಗೂ ಪೋಷಕರ ಆತಃಕ ಹೆಚ್ಚಾಗುತ್ತಿದೆ.
ನಿಮ್ಮಂತಹ ಮೇದಾವಿಗಳು ಶಾಸಕರ ವೇತನ ಬಗ್ಗೆ ಮಾತನಾಡಿದರೂ ಅವರ ಹಾಗೂ ಶಿಕ್ಷಕ-ಉಪನ್ಯಾಸಕರ ಸಂಖ್ಯೆಯ ಅನುಪಾತವೂ ಮುಖ್ಯ ಅಲ್ವೇ ಸಾರ್. ನಿಮ್ಮ ಇಂತಹ ಕಾಳಜಿಯ ಬರಹಗಳು ಶಿಕ್ಷಣದ ಗುಣಮಟ್ಟದ ಕುರಿತು ಬರುವಂತಹ ನಿರೀಕ್ಷೆ ನನ್ನದು. ಶೈಕ್ಷಣಿಕ ಪ್ರಗತಿಶೀಲತೆಗೆ ಕುಂದಾಗದ ರೀತಿಯಲ್ಲಿ ಸಮಸ್ಯೆ ಅತಿಬೇಗನೆ ಬಗೆಹರೆಯುವಂತಾಗಲಿ ಸಾರ್.

ಕೆ.ವಿ. ತಿರುಮಲೇಶ್
ಶ್ರೀ ರೆಡ್ಡಿಯವರೇ,
ಇಡೀ ಜೀವನವನ್ನು ಶಿಕ್ಷಕನಾಗಿ (ಕಾಲೇಜು, ಯುನಿವರ್ಸಿಟಿ ಮಟ್ಟದಲ್ಲಿ ಮತ್ತು ದೇಶ ವಿದೇಶಗಳಲ್ಲಿ) ಕಳೆದ ನನಗೆ ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರೆ ಗೌರವವಿದೆ. ಶೈಕ್ಷಣಿಕ ಸಮಸ್ಯೆಗಳ ಕುರಿತು ಹಲವಾರು ಲೇಖನಗಳನ್ನು ಬರೆದಿದ್ದೇನೆ. ಒಂದು ಕ್ಲಾಸ್ ರೂಮ್ ಹೇಗಿರಬೇಕು, ಕಲಿಸುವುದೆಂದರೇನು, ವಿದ್ಯಾರ್ಥಿಗಳನ್ನು ಹೇಗೆ ಗೌರವದಿಂದ ಕಾಣಬೇಕು, ಪ್ರಶ್ನೆ ಪತ್ರಿಕೆ ಹೇಗಿರಬೇಕು, ಗ್ರಂಥಾಲಯಗಳ ಬಳಕೆ–ಹೀಗೆ ಹಲವು ಸಂಗತಿಗಳ ಬಗ್ಗೆ ಯೋಚಿಸಿದ್ದೇನೆ, ಬರೆದಿದ್ದೇನೆ, ನೀವು ನೋಡಿರಲಾರಿರಿ. ಇರಲಿ.
ಶಾಸಕರು ತಮ್ಮ ವೇತನವನ್ನು ಏರಿಸಿಕೊಳ್ಳುವುದಕ್ಕೆ ಮತ್ತು ಜೂನಿಯರ್ ಕಾಲೇಜು ಉಪನ್ಯಾಸಕರ ವೇತನ ಸಮಾನತೆಯನ್ನು ನಿರಾಕರಿಸುವುದಕ್ಕೆ ಅನುತಾಪ ಕಾರಣ ಎನ್ನುವುದು ಸತ್ಯ; ಆದರೆ ಈ ಮಾತು ಶಾಸಕರ ಬಾಯಿಂದ ಬರಬೇಕು. ಹಾಗಿದ್ದೂ ಸುಗಮ ಮಾರ್ಗವೊಂದನ್ನು ಕಂಡುಕೊಳ್ಳಬೇಕಾಗುತ್ತದೆ; ಯಾಕೆಂದರೆ ಸಂಖ್ಯಾನುಪಾತವೆಂಬ ಕಾರಣ ಅನ್ಯಾಯಕ್ಕೆ ದಾರಿ ಮಾಡಿಕೊಡುತ್ತದೆ. ಡೆಫರ್ಡ್ ಪೇಮೆಂಟ್ ಒಂದು ಮಾರ್ಗ.ಇನ್ನು ನಮ್ಮ ವಿದ್ಯಾರ್ಥಿಗಳ ಸುಗಮ ಭವಿಷ್ಯದ ಬಗ್ಗೆ ಯಾರಿಗೆ ತಾನೆ ಆತಂಕವಿಲ್ಲ?
ಈ ಉಪನ್ಯಾಸಕ ಮುಷ್ಕರವನ್ನು ಸುಖಾಂತವಾಗಿ ಕೊನೆಗಳಿಸುವುದು ಎಲ್ಲರ ಹಿತದೃಷ್ಟಿಯಿಂದಲೂ, ಮುಖ್ಯವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಒಳ್ಳೆಯದು. ಹಾಗಾಗಲಿ ಎಂದು ಆಶಿಸುತ್ತೇನೆ. ಆದರೆ ಇದನ್ನು ಮೊದಲೇ ನೊಂದ ಉಪನ್ಯಾಸಕರ ವಿರುದ್ಧ ಒಂದು ಕಪ್ಪುಚುಕ್ಕೆಯಾಗಿ ಬಳಸುವುದಕ್ಕೆ ನನ್ನ ಅಸಮ್ಮತಿಯಿದೆ because it is bad faith.

ಗುಬ್ಬಚ್ಚಿ ಸತೀಶ್
ಮಾನ್ಯ ಸರ್ಕಾರ ಈಗ ಪರೀಕ್ಷೆ ಬರೆದಿರುವವರೆಲ್ಲಾ ಮುಂದಿನ ಚುನಾವಣೆಗೆ ಮತ ಚಲಾಯಿಸಲು ಅರ್ಹರಾಗಿರುತ್ತಾರೆ ಎಂಬುದನ್ನಾದರು ಮನಗಾಣಬೇಕಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಗೌರವದಿಂದ ಕಾಣುವುದನ್ನು ರಾಜಕಾರಣಿಗಳು ಕಲಿಯಬೇಕು

ಬಿ ಎಸ್ ಲಿಂಗರಾಜು
ನಮ್ಮನ್ನು ಎಲ್ಲರೂ ಗೌರವಿಸಬೇಕು, ನಮ್ಮ ಮಾತು ಕೇಳಬೇಕು. ಏಕೆಂದರೆ ನಾವೀಗ ಅನಿವಾರ್ಯ…..
ಈ ಮಾತಲ್ಲಿ ನ್ಯಾಯ ಕಾಣಿಸುತ್ತಿದೆಯೋ ಅಥವಾ ಅಹಮಿಕೆಯೋ
ಕಬ್ಬಿಣ ಕಾದಾಗಲೇ ಬಡಿಯಬೇಕು
ಈ ಮಾತಲ್ಲಿ ನ್ಯಾಯ ಕೇಳುವ ಸುಸಂದರ್ಭವೋ, ಅವಕಾಶವಾದವೋ….

ಕೆ.ವಿ. ತಿರುಮಲೇಶ್
ಗೌರವ ಎಲ್ಲರಿಗೂ ಸಿಗಬೇಕು. ಅದರಲ್ಲಿ ಅನಿವಾರ್ಯ ಎನ್ನುವ ಮಾತಿಲ್ಲ. ಒಂದು ರಾಜ್ಯದ ಶಿಕ್ಷಕವರ್ಗ ಚೆನ್ನಾಗಿದ್ದರೆ ರಾಜ್ಯಕ್ಕೆ ಒಳ್ಳೆಯದು. ಈ ಬಗ್ಗೆ ನಾನು ಈಗಾಗಲೇ ಹೇಳಿದ್ದೇನೆ: ಈ ಕೆಲಸವನ್ನು ಆಕರ್ಷಕವಾಗಿಸಿ ನಮ್ಮ ಯುವ ಜನರನ್ನು ಅತ್ತ ಸೆಳೆಯಬೇಕು ಇತ್ಯಾದಿ. ಇದಾವುದನ್ನೂ ಪರಿಗಣಿಸದೆ, ಕಟಕಿ ಮಾತನ್ನು ಆಡುತ್ತ ಹೋಗುವುದು ಸರಿಯಲ್ಲ, ಲಿಂಗರಾಜು ಅವರೇ.
ಮೌಲ್ಯಮಾಪನವನ್ನು ಬಹಿಷ್ಕರಿಸಿದ ಉಪನ್ಯಾಸಕರನ್ನು ಎಸ್ಮಾ ಬಳಸಿ ಜೇಲಿಗೆ ಹಾಕುತ್ತೇವೆ ಎಂದು ಮುಂತಾಗಿ ಕಿಮ್ಮನೆಯವರು ನುಡಿಯುವ ಹಿನ್ನೆಲೆಯಲ್ಲಿ ನಾನು ಗೌರವದ ಮಾತು ಹೇಳಬೇಕಾಯಿತು. ಸರಿಯಾಗಿ ಯೋಚಿಸಿ ನೋಡಿ: ನಿಮ್ಮ ಮಕ್ಕಳಿಗೂ ಚೆನ್ನಾದ ಶಿಕ್ಷಣ ದೊರಕಬೇಕೆಂಬ ಆಸೆ ನಿಮಗಿಲ್ಲವೇ? ಅದಕ್ಕೆ ನಮಗೆ ಒಳ್ಳೆಯ ಅಧ್ಯಾಪಕರ ಅಗತ್ಯವಿದೆ; ಒಳ್ಳೆಯ ಅಧ್ಯಾಪಕರು ತಯಾರಾಗಬೇಕಿದ್ದರೆ, ಆ ಕ್ಷೇತ್ರ ಆಕರ್ಷಕವಾಗಬೇಕು. ನಿಂದಿಸುವ ಮೂಲಕ ಅದು ಆಗುವುದಿಲ್ಲ.

ಡಾ ಲಕ್ಷ್ಮಿ ಜಿ ಪ್ರಸಾದ್
ತಮ್ಮಂಥ ಹಿರಿಯ ಶಿಕ್ಷಣ ತಜ್ಞರ ಮಾತು ಕೇಳಿ ಸಂತಸವಾಯಿತು ತಿರುಮಲೇಶ ಸರ್, ಕಳೆದ 22 ವರ್ಷಗಳಿಂದ ವೇತನ ತಾರತಮ್ಯ ಆಗಿದ್ದೂ ನಿರಂತರವಾಗಿ ಇದನ್ನು ಸರಿಪಡಿಸುವಂತೆ ವಿನಂತಿ ಮಾಡಿದ್ದರೂ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದರೂ ಕಿವಿಗೊಡದೆ ಇದ್ದಾಗ ಉಪನ್ಯಾಸಕರಿಗೆ ಮೌಲ್ಯ ಬಹಿಷ್ಕಾರದ ದಾರಿ ಹಿಡಿಯುವುದು ಅನಿವಾರ್ಯವಾಗಿದೆ. ಆದರೆ ಇದನ್ನು ಅನೇಕರು ಅರ್ಥಮಾಡಿಕೊಳ್ಳುತ್ತಿಲ್ಲ.
ಇಷ್ಟಕ್ಕೂ ಕುಮಾರ ನಾಯಕ ವರದಿ ಜಾರಿ ಮಾಡಿದರೆ ಕೂಡ ವೇತನ ತಾರತಮ್ಯ ಸರಿಯಾಗುವುದಿಲ್ಲ. ಸಮಾನ ಶ್ರೇಣಿಯ ಇತರ ಸರ್ಕಾರಿ ನೌಕರರಿಗೂ ಆರಂಭಿಕ ವೇತನದಲ್ಲಿ ಸುಮಾರು ಎಂಟು ಸಾವಿರ ವ್ಯತ್ಯಾಸವಿದೆ ಕುಮಾರ ನಾಯಕ್ ವರದಿ ಅನುಷ್ಟಾನಕ್ಕೆ ತಂದರೆ ಕೇವಲ ಮೂರು ಸಾವಿರದಷ್ಟು ಮಾತ್ರ ಹೆಚ್ಚಳವಾಗುತ್ತದೆ. ಆದರೆ ಅದನ್ನು ಕೂಡ ಸರ್ಕಾರ ಕೊಡದೆ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎನ್ನುತ್ತಾರೆ.
ಕೇವಲ 543 ಮಂದಿ ಶಾಸಕರ ವೇತನ, ಖರ್ಚು ವೆಚ್ಚಗಳು ವಾರ್ಷಿಕ 500 ಕೋಟಿ ದಾಟುತ್ತದೆ. ಸುಮಾರು ಇಪ್ಪತ್ತು ಸಾವಿರದಷ್ಟು ಉಪನ್ಯಾಸಕರಿಗೆ ಕುಮಾರ ನಾಯಕ ಸಮಿತಿ ಸೂಚಿಸಿದ ವೇತನ ಕೊಟ್ಟರೆ ಸರ್ಕಾರಕ್ಕೆ ವಾರ್ಷಿಕವಾಗಿ ಕೇವಲ ಐವತ್ತು ಕೋಟಿ ಮಾತ್ರ ಹೆಚ್ಚು ಹೊರೆ ಬೀಳುತ್ತದೆ. ಅದನ್ನು ಬೊಕ್ಕಸಕ್ಕೆ ಹೊರೆ ಎನ್ನುತ್ತಾರೆ. ಸರ್ಕಾರದ ಬೊಕ್ಕಸದ ಬಗ್ಗೆ ಕಾಳಜಿ ಇದ್ದರೆ ಇವರುಗಳು ಇವರ ವೇತನ ಖರ್ಚು ವೆಚ್ಚಗಳಾದ ಐನೂರು ಕೋಟಿಯನ್ನು ಬಿಟ್ಟುಕೊಡಲಿ ಅಥವಾ ಅದರಲ್ಲಿ ಹತ್ತು ಶೇಕಡಾ ಬಿಟ್ಟುಕೊಟ್ಟರೂ ಸಾಕು. ಉಪನ್ಯಾಸಕರಿಗೆ ಹೆಚ್ಚುವರಿ ಕೊಡಬೇಕಾದ ಐವತ್ತು ಕೋಟಿ ಅಲ್ಲೆ ಸಿಗುತ್ತದೆ.
ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವುದು ಸಾಮಾನ್ಯ ನಿಯಮ. ಈ ಬಗ್ಗೆ ತಮಗೆ ಆದ ವೇತನ ತಾರತಮ್ಯ ನಿವಾರಿಸಿ ಎಂದು ಕೇಳಿದಾಗಲೂ ಕೊಡದೆ ಇರುವುದಾದರೆ ನಮಗೆ ಪ್ರಜಾಪ್ರಭುತ್ವ ಯಾಕೆ ಬೇಕು? ನ್ಯಾಯಯುತ ಬೇಡಿಕೆಗೂ ಮನ್ನಣೆ ಕೊಡದೆ ಇದ್ದರೆ ಹೇಗೆ ಅಲ್ಲವೇ? ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಸರ್





ಹಿರಿಯರಾದ ಶ್ರೀ ಕೆ.ವಿ.ತಿರುಮಲೇಶ್ ಸರ್ ರವರು ಅಧ್ಯಾಪಕ ವರ್ಗದ ಮುಖದನಿಯಾಗಿದ್ದು ಸಂತಸಾರ್ಹ. ಸರ್ಕಾರದ ಪ್ರತಿನಿಧಿಗಳು ತಮ್ಮ ಐಷಾರಾಮಿ ಬದುಕಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಸಮಾಜಸೇವೆಯ ಮುಖವಾಡದೊಂದಿಗೆ ಅನುಭವಿಸುತ್ತಿದ್ದು ನ್ಯಾಯಯುತ ಹಕ್ಕು ಕೇಳಿದ ಉಪನ್ಯಾಸಕರ ಮೇಲೆ ಹೀಗೆ ಎಸ್ಮಾ ಅಸ್ತ್ರ ಬಳಸಬೇಕೆಂದಿರುವದು ಖಂಡನಾರ್ಹ.