ಸದ್ಯಕ್ಕೆ ನಾನಿರುವ ಇಂಗ್ಲೆಂಡಿನಲ್ಲಿ ಈಗ ಎಲೆ ಬೀಳುವ ಶರತ್ಕಾಲ ಋತು

ವಿನತೆ ಶರ್ಮ
ಕಳಚಿಕೊಂಡೆ
ಕೊಂಬೆ ಕೈ ಬಿಟ್ಟಿತು ಎಂಬ
ದೂಷಣೆಯಿಲ್ಲ, ತಾಯಿಂದ
ಬೇರ್ಪಟ್ಟೆ, ದುಃಖವಿಲ್ಲ
ಕಳಚಿಕೊಂಡೇಬಿಟ್ಟೆ, ಭಯವಿಲ್ಲ
ಬೀಳುತ್ತಿದ್ದೀನಿ
ಹಗುರವಾಗಿ, ತೇಲುತ್ತಾ
ಹೊಸ ಗಾಳಿಯಲ್ಲಿ
ಸ್ವತಂತ್ರವಾಗಿ, ಗೂಡ
ತೊರೆದು ಹಾರಿಹೋದ
ಹಕ್ಕಿಯಂತೆ, ಹಾರುತ್ತಿದ್ದೀನಿ
ಗೊತ್ತಿದೆ, ಹೊಸ ಗೂಡ
ಕಟ್ಟಲಾರೆ, ನನ್ನದೇ ಮನೆಯ
ಕನಸಿಲ್ಲ, ಈ ಕ್ಷಣ ಸಾಕು
ಅಲೆ ಅಲೆಯಾಗಿ ತೇಲಿ
ಬಿದ್ದು ನೆಲ ಸೇರಿ
ಮಣ್ಣ ಕೈ ಬೆಸೆಯುವೆ,
ಆ ಎರೆಹುಳುವಿನ
ಸಂಗಾತಿಯಾಗಿ ಚಿರವಾಗುವೆ
ಎಲೆಯಾಗುವೆ ಮತ್ತೆ ಮತ್ತೆ.






Beautiful kavithe matthu chitragalu ….
Tumbaa chennagide.
ಹಣ್ನಲೆ ಮಣ್ನಲಿ
ಬಿದ್ದು
ನೆಲದ ಹಾಸಿಗೆಯ
ಹೊದ್ದು
ಮತ್ತೆ ಬರುವೆ
Bye ಎಂದು ಹೇಳುವ ಸಮಯವೇ ಶರದ್ರುತು!
ಕವನ ಚೆನ್ನಾಗಿ ಮೂಡಿ ಬಂದಿದೆ.
ಗಿರಿಧರ್ ಹಂಪಾಪುರ
ಎಷ್ಟು ಸುಂದರ ,ಸವಿಯಾದ ವರ್ಣನೆ !! ನಿಜಕ್ಕೂ ಹೇಳ್ತೀನಿ ವಿನತೆಯವರೇ ,ಹಕ್ಕಿ ಪಕ್ಕಿಯಾಗಿ ಸ್ವಚ್ಛಂದವಾಗಿ ಆ ಸುಂದರ ಎಲೆ ಎಲೆಯಲೂ ,ಕೊಂಬೆ ಕೊಂಬೆಯಲೂ ಹಾರಾಡುವಾಸೆ , ಅಷ್ಟು ಚಂದದ ಚಿತ್ತಾರ. ಮತ್ತೆ ಎಲೆಯಾಗಿ ಬರುವಾಸೆ ಉದುರುವ ಹಣ್ಣೆಲೆಗೂ ! ಇದಲ್ಲವೇ ಜೀವನವನ್ನ ಸವಿಯುವ ಅದಮ್ಯ ಆಸೆ !.ಚಂದದ ಕವನ !