ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎರಡು ದ್ವೀಪದ ಮಧ್ಯೆ ಕಡಲು..

ನರೇಂದ್ರ ಶಿವನಗೆರೆ

ಮುಸ್ಸಂಜೆ ಕಡಲ ತೀರ,

ಹಾಯಿದೋಣಿಗಳಿಲ್ಲಿ, ಕಡಲಲ್ಲಿ,

ಚೆಲ್ಲಾಪಿಲ್ಲಿ!

ಮುಸ್ಸಂಜೆ ತಿಳಿ ಕತ್ತಲಲ್ಲಿ

ದ್ವೀಪದಲ್ಲಿ ಕಾಣುವ ಮಿಣಿ, ಮಿಣಿ ಬೆಳಕುಗಳು!

 

ದೂರದೇಶದ ನಾವಿಕ ನಾನು!

ಎಂದೋ ಒಂದು ಕಾಲಕ್ಕೆ, ಕಾಳಕತ್ತಲಲ್ಲಿ,

ಕಡಲು ಮುನಿದು, ಹಡಗು ಮುರಿದು,

ದ್ವೀಪ ಸೇರಿ!

ಬದುಕ ಕಟ್ಟಿದ ನೆನಪು.

ಎಪ್ಪತ್ತರ,

ಸೊಕ್ಕಿನ, ಮುಪ್ಪಿನಲ್ಲಿ!

ನನ್ನೆಲ್ಲ ಮುದಿ ಸುಕ್ಕುಗಳಲ್ಲಿ!

ಕಡಲ ನೀರು

ಬರೀ ಉಪ್ಪು!

 

ಕತ್ತಲೆ ಕವಿಯುವ ಸಮಯಕ್ಕೆ

ಮೀನುಬಲೆಯ

ಸುಪ್ಪತ್ತಿಗೆಯ ಮೇಲೆ ಮಲಗಿ

ತೆರೆದ ಆಕಾಶಗಂಗೆಯ ದಿಟ್ಟಿಸುವನಿಗೆ!

ಕಿವಿಯಲ್ಲಿ ಕೊರೆಯುವ

ಕಡಲ, ಮೊರೆತವ

ಕಣ್ಣಲ್ಲೇ,

ಅಂತರಿಕ್ಷಕ್ಕೆ ದಾಟಿಸುವಾಸೆ!

 

ಅಶಾಂತ ರಾತ್ರಿಗಳಲ್ಲಿ

ಪಕ್ಕದ, ದಟ್ಟ ಕಾಡಿನ

ಒಂಟಿ ಮಂಟೆ ಹಕ್ಕಿ ಕೂಗು!

ನನ್ನ ಆದಿ, ಹಾದಿ, ಅಂತ್ಯಗಳೆಲ್ಲ,

ಸ್ವಪ್ನಲೋಕದ, ಒಂಟಿ ದೋಣಿಯನೇರಿ!

 

ಕಡಲಲ್ಲಿ, ಅಲೆದಲೆದು

ದ್ವೀಪಕ್ಕೇ, ಮರಳಿ ತಂದಾಗ,

ಬೆಚ್ಚಿಬಿದ್ದೆದ್ದ

ನಾನು

ಎರಡು ದ್ವೀಪದ ಮಧ್ಯೆ ಆಳ ಕಡಲು!

 

‍ಲೇಖಕರು Avadhi Admin

7 May, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading