ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎರಡು ಗಜಲ್‌ಗಳು

ಮಧು ಹೀರುವ ಮಾತು

ರಮೇಶ ಗಬ್ಬೂರ್


ಜಾರು ಬಂಡೆಯಂತಹ ಮೈ ಆರಿಸಿಕೊಳುವ ನಡುವ ನೋಡಿ ನಿನ ಯೌವನ ಮರೆಯಬೇಡ
ಹತ್ತುವಿಯಾದರೆ ಎತ್ತರದ ನಡುವ ಮುಟ್ಟಲು ಮೈ ಜಾರಬಹುದು ನಿನ ಯೌವನ ಮರೆಯಬೇಡ
 
ಮುಗಿಲಿಗೆ ಮುಖಮಾಡಿ ಸೆರಗ ಸುತ್ತಲೂ ಹಾರಿಸಿ ನಿಂತಿರುವೆ ಮೈಯಾರಿಸಿಕೊಳುತ
ಹತ್ತು ಬಾ ರಸಿಕನೆ ಎತ್ತರಕೆ ಸೆರಗಿನಡಿ ಸೆರೆಯಿದೆ ಹೀರುವುದ ಮರೆಯಬೇಡ
 
ನೀನೇನು ಹೊಸಬನಲ್ಲ ಹತ್ತಲು ಮತ್ತೇರುವ ಮಧು ಕುಣಿದು ದಣಿಯಲು
ಮೆತ್ತಗೆ ಹಿಡಿಯಬೇಡ ಬಳುಕಿ ತಬ್ಬಿಕೋ ಮುತ್ತಿನ ಲೋಕವಿದೆ ಮೇಲೇರಲು ಮರೆಯಬೇಡ
 
ಬಾಗಿದ ನನ ನಡುವ ಸೇವಿಸಿದವರು ಮತ್ತೆ ಮತ್ತೆ ಕಾಣುತ್ತಾರೆ ನನ ಸೆರಗಿನಡಿ
ಹೊತ್ತು ಹೋಗುವ ಮುನ್ನ ಹತ್ತಿ ಇಳಿಸು ಗಂಟಲಕೆ ಮತ್ತೇರುವುದು ಮರೆಯಬೇಡ
 
ಬಳುಕುವ ಸೊಂಟದ ಮೇಲಿನ ಸುರೆ ಬಟ್ಟಲುಗಳ ನೋಡಿ ಜೊಲ್ಲು ಸುರಿಸುವೆಯೇಕೆ
ಆಕಾಶಕೆ ಹರಡಿದ ನನ ಗರಿಗರಿ ಸೆರಗಿಗೆ ಮುತ್ತುವ ಮುಳ್ಳಿವೆ ಮರೆಯಬೇಡ
 
ಪ್ರತಿದಿನವೂ ಹತ್ತಲು ನನಗಾಗಿ ಕಾಯುತ್ತ ಕಾಲದೂಡುವರು ಸೆರಗಿನಡಿ ಸರದಿಯಲಿ
ಹೊತ್ತೇರುವ ಮುಂಚೆ ಹತ್ತುವನು ದಾಸ ಎದೆಯುಸುರಲು ಮಧುರ ನೀರಿದೆ ಮರೆಯಬೇಡ
 

ಮನಸ ಕದ್ದವಳಾರು



ಜಾತ್ರೇಲಿ ತಿರುಗುವ ಗಿರಗಿಟ್ಟೆಯಲಿ ಕುಳಿತು ಕಣ್ಮಿಟುಕಿಸಿದ ಚೆಲುವಿ ನೀ ಯಾರ ಮಗಳು
ಜೋಕಾಲಿಯೊಳಗ ನಗುತ ಮೈಮ್ಯಾಲ ಮಲ್ಲಿಗಿ ಬೀಳಿಸಿದ ಚೆಲುವಿ ನೀ ಯಾರ ಮಗಳು
 
ನೀಳ ಕೂದಲು ಚಾಚಿ ಹಣಿಮ್ಯಾಲ ಬೊಟ್ಟಿಟ್ಟು ಹತ್ತಿರಕ ಯನ್ನ ಕರದಿದ್ದಿ ಕರಸಿದ್ದಿ
ಜಾತ್ರ್ಯಾಗ ಪೀಪಿ ಸದ್ದಿನೊಳಗ ನಗುವಿನ ಅಲೆ ಉಳಿಸಿಹೋದಿ ಚೆಲುವಿ ನೀ ಯಾರ ಮಗಳು
 
ಪಂಜರದ ಪಕ್ಷಿ ಅಲ್ಲ ನೀ ನಮ್ಮೂರ ಜಾತ್ರಿ ಬಿಸಲಾಗ ಜೋಕಾಲ್ಯಾಡೋ ಹಕ್ಕಿ ನೀ
ರೆಕ್ಕೆ ಬಿಚ್ಚಿ ಹಾರೋ ಸೋಗಿಗೆ ನನಮನಸು ಸೋಲಿಸಿದ ಚೆಲುವಿ ನೀ ಯಾರ ಮಗಳು
 
ಮಟಮಟ ಮಧ್ಯಾಹ್ನದಾಗ ನಡಾ ಜಾತ್ರ್ಯಾಗ ನಿನ ಸೆರಗ ತಾಕಿ ಗಾಳಿಗಿಂತಲೂ ಹಗುರಾಗಿದ್ದೆ
ರಂಗೇರಿದ ತುಟಿ ಕಚ್ಚಿ ಕಣ್ಣು ಮಿಟುಕಿಸಿ ಕರೆದು ಹೋದ ಚೆಲುವಿ ನೀ ಯಾರ ಮಗಳು
 
ಮಳ್ಳಿಹಾಂಗ ನನ್ನೊಳಗ ಬಂದು ಜಾತ್ರೆಗೆ ಹೊಲಿಸಿದ ಹೊಸ ಅಂಗಿ ಹೊಲಸ ಮಾಡಿದಿ
ಜಿಲೇಬಿಪುಗ್ಗಿ ತಿನ್ನುವಾಗ ಅಣಕ್ಯಾಕಿ ಜೊಲ್ಲು ಸುರಿವಾಂಗ ಮಾಡಿದ ಚೆಲುವಿ ನೀ ಯಾರ ಮಗಳು
 
ನಿನ ಮ್ಯಾಲ ಮನಸಿದ್ರು ಕೂಡೋ ಭಾಗ್ಯ ಇಲ್ಲ ಕಟ್ಕೊಂಡ ಸಂಸಾರ ಕಡೆಗಿಲ್ಲ
ಆದ್ರೂ ಈ ದಾಸ ನಿನಗ ಮನಸು ಕೊಟ್ಟಾನ ಈಗಾರ ಹೇಳು ಚೆಲುವಿ ನೀ ಯಾರ ಮಗಳು
 

‍ಲೇಖಕರು G

27 August, 2014

9 Comments

  1. Kiran

    Poetry!!!

  2. Nagaraj kamble

    Waw nice sir.. tumba channagiwe..

  3. ರೇಣುಕಾ ಎ. ಕಠಾರಿ

    ಜನಪದ ಶೈಲಿಯನ್ನು ಗಜಲ್ ಗೆ ದುಡಿಸಿಕೊಂಡ ಪ್ರಯತ್ನ ಉತ್ತಮವಾಗಿದೆ. ಗಜಲ್ ಚೆನ್ನಾಗಿದೆ.

  4. mmshaik

    uttama gazalgaLu..

    • chaithra gabbur

      ತುಂಬಾ ಸಂತೋಷ ಸರ್

  5. mahesh kalal

    gajalana gungu hidisdri sir

    • chaithra gabbur

      ಧನ್ಯವಾದಗಳು ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading