ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎರಡು ಖುಷಿ..

ಉಷಾ ರೈ 

yaava naaleyoo nammadallaಈ ವಾರದಲ್ಲಿ ನನಗೆರಡು ಅನಿರೀಕ್ಷಿತ ದೂರವಾಣಿ ಕರೆಗಳು ಬಂದವು.

ಒಂದು ಮಂಜೇಶ್ವರ ಗೋವಿಂದ ಪೈಗಳ ಮೊಮ್ಮಗರೊಬ್ಬರಿಂದ .

ಅವರು ಮೈಸೂರಲ್ಲಿ ಗ್ರಂಥಪಾಲಕರಂತೆ.

ಮತ್ತೊಂದು ಶಿವರಾಮ ಕಾರಂತರ ತಮ್ಮನ ಹೆಂಡತಿಯಿಂದ.

ಇಬ್ಬರೂ ಫೋನ್ ಮಾಡಿದ್ದು ಒಂದೇ ಕಾರಣಕ್ಕೆ. ನನ್ನ ‘ಯಾವ ನಾಳೆಯೂ ನಮ್ಮದಲ್ಲ’ ಓದಿ. ಅವರಿಬ್ಬರೂ ಹಂಚಿಕೊಂಡ ಖುಷಿಯ ಮಾತುಗಳನ್ನು ಕೇಳಿ ನನಗೆ ಖುಷಿ. 79ವರ್ಷದ ವಿಮಲಾ ಕಾರಂತರು ನನ್ನನ್ನು ನೋಡಲೇ ಬೇಕೆನ್ನುವ ಆಸೆ ವ್ಯಕ್ತ ಪಡಿಸಿದ್ದು ನೋಡಿ ಇನ್ನೊಮ್ಮೆ ಊರಿಗೆ ಬಂದಾಗ ಖಂಡಿತಾ ಬಂದು ನೋಡುತ್ತೇನೆಂದು ಪ್ರಾಮಿಸ್ ಮಾಡಿಬಿಟ್ಟೆ.

ಇಂತಹ ಅನಿರೀಕ್ಷಿತ ಸಂಗತಿಗಳು ನಮ್ಮದಲ್ಲದ ನಾಳೆಗಳ ಬಗ್ಗೆ ಸ್ವಲ್ಪ ನಿರೀಕ್ಷೆಗಳನ್ನು ಹುಟ್ಟಿಸುತ್ತವೆ ಅನ್ನುವುದಂತೂ ನಿಜ. ನನ್ನ ಖುಷಿಯನ್ನಿಲ್ಲಿ ಹಂಚಿಕೊಳ್ಳ ಬೇಕೆನಿಸಿತು.

‍ಲೇಖಕರು Admin

27 November, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading